ಹೊನ್ನಾವರದಲ್ಲಿ ಸಿಬಿಐ(ಎಸಿಬಿ) ಬಲೆಗೆ ಬಿದ್ದ ಅಬಕಾರಿ ಮತ್ತು ಜಿ.ಎಸ್.ಟಿ.ಅಧೀಕ್ಷಕ

ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡ ಜಿಲ್ಲೆಯ ಹೊನ್ನಾವರದ ಕೇಂದ್ರೀಯ ಅಬಕಾರಿ ಮತ್ತು ಜಿ.ಎಸ್.ಟಿ. ಅಧೀಕ್ಷಕ ಜಿತೇಂದ್ರ ಧಾಗೂರು ಸಿಬಿಐ(ಎಸಿಬಿ) ಬಲೆಗೆ ಬಿದ್ದಿದ್ದಾರೆ.
ಸ್ಥಳೀಯ ಪತ್ರಕರ್ತರಾಗಿರುವ ಹಲವು ಟಿವಿ ರಿಯಾಲಿಟಿ ಶೋ ಗಳ ಕಂಟೆಂಟ್ ಪ್ರೊವೈಡರ್ ಆಗಿರುವ ಜಗದೀಶ್ ಸುಬ್ರಾಯ ಭಾವೆ ಇವರು 2015-16 ನೇ ಸಾಲಿನ ತಮ್ಮ 10 ಲಕ್ಷ ಆದಾಯಕ್ಕಿಂತ ಹೆಚ್ಚಿನ ಹಣವಾದ 37840=00 ರೂಪಾಯಿಗೆ ಸರ್ವೀಸ್ ಟ್ಯಾಕ್ಸ ಕಟ್ಟುವುದು ಬಾಕಿ ಇದ್ದು, ಅದನ್ನು ತಪ್ಪಿಸಲು ಹೊನ್ನಾವರ ಕೇಂದ್ರೀಯ ಅಬಕಾರಿ ಮತ್ತು ಜಿ ಎಸ್ ಟಿ ಅಧಿಕಾರಿಯಾದ ಜಿತೇಂದ್ರ ಧಾಗೂರು ರವರು ಜಗದೀಶ್ ಭಾವೆ ರವರಲ್ಲಿ 50 ಸಾವಿರ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದು, ಈ ಕುರಿತು ಜಗದೀಶ್ ಭಾವೆ ರವರು ಸಿಬಿಐ(ಎಸಿಬಿ) ಬೆಂಗಳೂರುರವರಲ್ಲಿ ದೂರು ನೀಡಿದ್ದರು
ಈ ದೂರಿನನ್ವಯ ಶನಿವಾರ ಜೀತೇಂದ್ರ ಧಾಗೂರು ತಮ್ಮ ಕಛೇರಿಯಲ್ಲಿ ಜಗದೀಶ್ ಭಾವೆಯವರಿಂದ 25 ಸಾವಿರ ರೂಪಾಯಿ ಲಂಚ ಪಡೆಯುತ್ತಿದ್ದಾಗ ಸಿಬಿಐ(ಎಸಿಬಿ) ಬೆಂಗಳೂರು ಪವನಕುಮಾರ ನೇತೃತ್ವದ 6 ಜನರ ತಂಡ ದಾಳಿ ಮಾಡಿ ಲಂಚದ ಹಣದ ಸಮೇತ ಜಿತೇಂದ್ರ ಧಾಗೂರುರನ್ನು ವಶಕ್ಕೆ ಪಡೆದು ದಸ್ತಗಿರಿ ಮಾಡಿದ್ದಾರೆ

ತಡರಾತ್ರಿಯವರೆಗೂ ವಿಚಾರಣೆ ನಡೆಸುತ್ತಿರುವ ಅಧಿಕಾರಿಗಳು ಆರೋಪಿ ಅಧಿಕಾರಿಯ ಕಚೇರಿ ಹಾಗೂ ಮನೆಯನ್ನು ಪರಿಶೀಲನೆ ನಡೆಸಿದ್ದಾರೆ.

About the author

Adyot

Leave a Comment