ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಕೆಳಗಿನೂರು ಸಮೀಪ ರಸ್ತೆಯ ಮೇಲೆ ಬೃಹತ್ ಬಂಡೆಗಲ್ಲು ಉರುಳಿ ಬಿದ್ದ ಪರಿಣಾಮ ಗಿರೀಶ ಬುಧವಂತ ನಾಯ್ಕ ಎನ್ನುವ ವ್ಯಕ್ತಿ ಗಾಯ ಗೊಂಡಿರುವುದಲ್ಲದೆ ಅವರ ಬೈಕ್ ಸಂಪೂರ್ಣ ಹಾನಿಯಾಗಿದೆ.
ಭಟ್ಕಳ-ಹೊನ್ನಾವರ ಮಧ್ಯೆ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಈ ಘಟನೆ ನಡೆದಿದ್ದು ಇಲ್ಲಿ ಚತುಷ್ಪತ ಹೆದ್ದಾರಿಯ ಕಾಮಗಾರಿಗಳು
ನಡೆಯುತ್ತಿವೆ.
ಈ ಕಾಮಗಾರಿಯನ್ನು ಐ.ಆರ.ಬಿ ಕಂಪನಿ ನಡೆಸುತ್ತಿದೆ. ಕಳೆದ ಮಳೆಗಾಲದಲ್ಲಿ ಅಂಕೋಲ,ಕುಮಟಾ,ಕಾರವಾರ ಭಾಗದಲ್ಲಿ ಗುಡ್ಡಕುಸಿತದ ಪ್ರಕರಣ ನಡೆದಿತ್ತು. ಈ ವರ್ಷ ಈಗಷ್ಟೆ ಮಳೆಗಾಲ ಪ್ರಾರಂಭವಾಗಿದ್ದು ಗುಡ್ಡ ಕುಸಿತ.
ಪ್ರಾರಂಭವಾಗಿರುವುದು ಸಾರ್ವಜನಿಕರಲ್ಲಿ ಆತಂಕವನ್ನು ತಂದಿದೆ
ಕಂಪನಿ ಅವೈಜ್ಞಾನಿಕ ವಾಗಿ ಕಾಮಗಾರಿಯನ್ನು ನಡೆಸುತ್ತಿದ್ದು ಅದರಿಂದ ಇಂತಹ ಘಟನೆಗಳು ನಡೆಯುತ್ತಿವೆ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ.
ಉಳ್ಳವರ ನಿರ್ಲಕ್ಷ್ಯ ಕ್ಕೆ ಬಡ ಜನರು ಬೆಲೆ ತೆತ್ತಬೇಕಾಗಿದೆ.