ಆದ್ಯೋತ್ ಸುದ್ದಿನಿಧಿ:
ಆಂಬ್ಯುಲೆನ್ಸ್ ಮತ್ತು ಗ್ಯಾಸ್ ಟ್ಯಾಂಕರ್ ನಡುವೆ ಮುಖಾಮುಖಿ
ಡಿಕ್ಕಿ ಸಂಭವಿಸಿ ಅಂಬ್ಯುಲೆನ್ಸ್ ನಲ್ಲಿದ್ದ ರೋಗಿ ಮೃತಪಟ್ಟ ಘಟನೆ ಗುರುವಾರ ಸಂಜೆ ಉತ್ತರಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ ನಡೆದಿದೆ.
ಹೊನ್ನಾವರ ರಾಮತೀರ್ಥ ಕ್ರಾಸ್ ಹತ್ತಿರ ಗೋಕರ್ಣ ದಿಂದ ಹೊನ್ನಾವರ ಕಡೆಗೆ ಹೊರಟ ಖಾಸಗಿ ಆಂಬ್ಯುಲೆನ್ಸ್ ಹಾಗೂ ಮಂಗಳೂರು ಕಡೆಯಿಂದ ಕಾರವಾರ ಕಡೆಗೆ ಹೊರಟ ಗ್ಯಾಸ್ ಟ್ಯಾಂಕರ್ ನಡುವೆ ಈ ಅಪಘಾತ ನಡೆದಿದೆ.
ಗೋಕರ್ಣದ ರಾಮಕೃಷ್ಣ ಗಣಪತಿ ಪ್ರಸಾದ(70) ಮೃತಪಟ್ಟವರಾಗಿದ್ದು ಅಂಬ್ಯುಲೆನ್ಸ್ ಚಾಲಕನಿಗೆ ತೀವ್ರ ಸ್ವರೂಪದ ಗಾಯಗಳಾಗಿವೆ.ಅಂಬ್ಯುಲೆನ್ಸ್ ನಲ್ಲಿದ್ದ ಇನ್ನಿಬ್ಬರಿಗೂ ಗಾಯಗಳಾಗಿದ್ದು ಹೊನ್ನಾವರ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.