ಅಂಕೋಲಾ: ಅಕ್ರಮವಾಗಿ ಬ್ರೌನ್ ಶುಗರ್ ಸಾಗಿಸುತ್ತಿದ್ದ ವೇಳೆ ಜಿಲ್ಲಾ ಅಫರಾಧ ನಿಗ್ರಹ ದಳದ ಪೊಲೀಸರು ದಾಳಿ ನಡೆಸಿ 2 ಕೋಟಿ 60 ಲಕ್ಷ ಮೌಲ್ಯದ ಬ್ರೌನ್ ಶುಗರ್ ವಶ ಪಡಿಸಿಕೊಂಡ ಘಟನೆ ಅಂಕೋಲಾದ ರಾಷ್ಟ್ರೀಯ ಹೆದ್ದಾರಿ 63 ರ ಬಾಳೆಗುಳಿ ಕ್ರಾಸ್ ನಲ್ಲಿ ನಡೆದಿದೆ.
ಅಂಕೋಲಾದ ಕಲ್ಲೇಶ್ವರ ಹಾಗೂ ಸಿದ್ದಾಪುರ ಮೂಲದ ನಾರಾಯಣ ರಾಮಕೃಷ್ಣ ಭಾಗ್ವತ, ಚಂದ್ರಹಾಸ ದಯಾನಂದ ಗುನಗಾ, ವಿರೇಂದ್ರ ಸುಬ್ರಾಯ ಹೆಗಡೆ, ಪ್ರವೀಣ ಮಂಜುನಾಥ ಭಟ್ ಬಂಧಿತ ಆರೋಪಿಗಳು. ಯಲ್ಲಾಪುರದಿಂದ ಅಂಕೋಲಾ ಕಡೆಗೆ ಬ್ರೌನ್ ಶುಗರನ್ನು ವ್ಯಾಪಾರ ಮಾಡುವ ಉದ್ದೇಶದಿಂದ 2 ಕಾರುಗಳಲ್ಲಿ ಸಾಗಿಸುತ್ತಿದ್ದ ಬಗ್ಗೆ ಖಚಿತ ಮಾಹಿತಿಯ ಮೇರೆಗೆ ಡಿಸಿಐಬಿಯ ಪೊಲೀಸ್ ನೀರಿಕ್ಷಕ ನಿಶ್ಚಲ ಕುಮಾರ ಅವರ ನೇತ್ರತ್ವದ ತಂಡ ಕಾರ್ಯಾಚರಣೆ ನಡೆಸಿ 2 ಕೆಜಿ 600 ಗ್ರಾಂ ನ ಬ್ರೌನ್ ಶುಗರ್ ಹಾಗೂ ಕೃತ್ಯಕ್ಕೆ ಬಳಸಿದ 2 ಕಾರ್, ಮೊಬೈಲ್ ಹಾಗೂ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ. ನಿಷೇಧಿತ ಬ್ರೌನ್ ಶುಗರ್ ಎಲ್ಲಿಂದ ತರಲಾಗಿತ್ತು? ಈ ಜಾಲದಲ್ಲಿ ಮತ್ತೆ ಯಾರಿದ್ದಾರೆ ಎಂದು ವಿಚಾರಣೆ ನಡೆಸಲಾಗುತ್ತಿದೆ ಎಂದು ಡಿಸಿಐಬಿಯ ನೀರಿಕ್ಷಕ ನಿಶ್ಚಲಕುಮಾರ ತಿಳಿಸಿದ್ದಾರೆ.