ಇಂದು ಮಧ್ಯರಾತ್ರಿ 12 ರಿಂದ ಸಂಪೂರ್ಣ ದೇಶ ಲಾಕ್ ಡೌನ್

ಆದ್ಯೋತ್ ನ್ಯೂಸ್ ಡೆಸ್ಕ್ : ದೇಶದಲ್ಲಿ ಇಂದು ಮಧ್ಯರಾತ್ರಿ 12 ಗಂಟೆಯಿಂದ ದೇಶವ್ಯಾಪಿ ಲಾಕ್ ಡೌನ್ ಘೋಷಿಸಿ ಪ್ರಧಾನಮಂತ್ರಿ ನರೇಂದ್ರ ಮೋದಿ ಆದೇಶಿಸಿದ್ದಾರೆ.

ಕೊರೊನಾ ರೋಗದ ಬಗ್ಗೆ ಮಾತನಾಡಿದ ಪ್ರಧಾನಿ, ಜನತಾ ಕರ್ಫ್ಯೂವನ್ನು ಉತ್ತಮವಾಗಿ ನಿಭಾಯಿಸಿದ್ದೀರಿ. ನಂತರದ 2 ದಿನಗಳಲ್ಲಿ ರಾಜ್ಯ ಸರ್ಕಾರಗಳು ನಡೆಸಿದ ಪ್ರಯತ್ನಗಳು ಶ್ಲಾಘನೀಯವಾದದು. ಕೊರೋನಾದಿಂದ ಪಾರಾಗಲು ಮನೆಯಲ್ಲಿ ಇರುವುದೊಂದೇ ದಾರಿ. ಅದಕ್ಕೋಸ್ಕರ ಇಂದು ಮಧ್ಯರಾತ್ರಿಯಿಂದ 21 ದಿನಗಳ ಕಾಲ ಸಂಪೂರ್ಣ ದೇಶವನ್ನ ಲಾಕ್ ಡೌನ್ ಮಾಡಲಾಗುತ್ತಿದೆ. ಇದು ಜನತಾ ಕರ್ಫ್ಯೂ ಗಿಂತ ಹೆಚ್ಚು ಶಕ್ತಿಯುತವಾದ ಲಾಕ್ ಡೌನ್ ಆಗಿದ್ದು, ಸಂಪೂರ್ಣ ಕರ್ಫ್ಯೂ ವಿಧಿಸಿದ್ದೇವೆ. ಇದು ಜನರನ್ನು ಹಾಗೂ ದೇಶವನ್ನು ರಕ್ಷಿಸಲು ಅನಿವಾರ್ಯ ಎಂದರು.

ಮನೆಯಲ್ಲೇ ಇರೋಣ..
ಕೊರೊನಾ ತೊಲಗಿಸೋಣ..
ದೇಶವನ್ನು ಉಳಿಸೋಣ..
ಇದು ಆದ್ಯೋತ್ ನ್ಯೂಸ್ ಜಾಗೃತಿ ಅಭಿಯಾನ.

About the author

Adyot

Leave a Comment