ಮೊದಲ ಟಿ20 ಪಂದ್ಯ : ನ್ಯೂಜಿಲೆಂಡ್ ವಿರುದ್ಧ ಭಾರತಕ್ಕೆ ಭರ್ಜರಿ ಜಯ

ನ್ಯೂಜಿಲೆಂಡ್ : ಅಕ್ಲೆನ್ಡ್ ನ ಈಡನ್ ಪಾರ್ಕ್ ಮೈದಾನದಲ್ಲಿ ಆತಿಥೇಯ ನ್ಯೂಜಿಲೆಂಡ್ ತಂಡದ ವಿರುದ್ಧ ನಡೆದ ಮೊದಲ ಅಂತಾರಾಷ್ಟ್ರೀಯ ಟಿ20 ಪಂದ್ಯದಲ್ಲಿ 6 ವಿಕೆಟ್ ಗಳ ಭರ್ಜರಿ ಜಯ ಸಾಧಿಸಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ಗೆ ಇಳಿದ ಆತಿಥೇಯ ನ್ಯೂಜಿಲೆಂಡ್ ತಂಡ ನಾಯಕ ವಿಲಿಯಮ್ಸನ್, ಕಾಲಿನ್ ಮನ್ರೋ ಹಾಗೂ ರಾಸ್ ಟೇಲರ್ ರ ತಲಾ ಅರ್ಧಶತಕಗಳ ನೆರವಿನಿಂದ ನಿಗದಿತ 20 ಓವರ್ ಗಳಲ್ಲಿ 5 ವಿಕೆಟ್ ಕಳೆದುಕೊಂಡು 203 ರನ್ ಗಳ ಗುರಿ ನೀಡಿತು. 204 ರನ್ ಗಳ ಬೃಹತ್ ಗುರಿಯನ್ನ ಬೆನ್ನತ್ತಿದ ಭಾರತ ತಂಡ 19 ಓವರ್ ಗಳಲ್ಲಿ ಗೆಲುವಿನ ಗುರಿಯನ್ನ ತಲುಪಿತು. ಭಾರತದ ಪರ ಶ್ರೇಯಸ್ ಅಯ್ಯರ್ ಆಕರ್ಷಕ ಅರ್ಧ ಶತಕದೊಂದಿಗೆ ಭಾರತವನ್ನ ಗೆಲುವಿನ ದಡ ಸೇರಿಸಿದರು. ಈ ಮೂಲಕ 5 ಪಂದ್ಯಗಳ ಟಿ20 ಸರಣಿಯಲ್ಲಿ ಭಾರತ 1-0 ಮೂಲಕ ಮುನ್ನಡೆ ಸಾಧಿಸಿತು.

About the author

Adyot

Leave a Comment