ಆದ್ಯೋತ್ ಸ್ಪೋರ್ಟ್ಸ್ ಡೆಸ್ಕ್ : ಬಹುನಿರೀಕ್ಷಿತ ಭಾರತದ ಟಿ20 ಹಬ್ಬವಾದ ಐಪಿಎಲ್ 2020 ರ ವೇಳಾಪಟ್ಟಿ ಬಿಡುಗಡೆಗೊಂಡಿದೆ. ಬಿಸಿಸಿಐ ಇಂದು ಐಪಿಎಲ್ ನ ಅಧಿಕೃತ ವೇಳಾಪಟ್ಟಿಯನ್ನು ಪ್ರಕಟಿಸಿದೆ.
ಮಾರ್ಚ್ 29 ರಂದು ಪ್ರಾರಂಭಗೊಳ್ಳಲಿರುವ ಈ ವರ್ಷದ ಐಪಿಎಲ್ 57 ದಿನಗಳ ಕಾಲ ನಡೆಯಲಿದ್ದು, ಮೇ 24 ರಂದು ಕೊನೆಗೊಳ್ಳಲಿದೆ. ಪ್ರತಿದಿನ ರಾತ್ರಿ 8 ಗಂಟೆಗೆ ಪಂದ್ಯಗಳು ಆರಂಭಗೊಳ್ಳಲಿದ್ದು, ಇದೇ ಮೊದಲ ಬಾರಿಗೆ 6 ಪಂದ್ಯಗಳು ಮಾತ್ರ ಸಂಜೆ 4 ಗಂಟೆಗೆ ಜರುಗಲಿವೆ. ಐಪಿಎಲ್ ನ ಮೊದಲ ಹಾಗೂ ಆರಂಭಿಕ ಪಂದ್ಯ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ನಡುವೆ ಮಾರ್ಚ್ 29 ರಂದು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಲಿದೆ. ಅದೇ ರೀತಿ ಫೈನಲ್ ಪಂದ್ಯ ಮೇ 24 ರಂದು ನಡೆಯಲಿದ್ದು, ಎಲ್ಲಿ ನಡೆಯಲಿದೆ ಅನ್ನೋ ಬಗ್ಗೆ ಬಿಸಿಸಿಐ ಇನ್ನೂ ತಿಳಿಸಿಲ್ಲ. ಪಂದ್ಯಗಳ ನೇರಪ್ರಸಾರದ ಹಕ್ಕನ್ನು ಸ್ಟಾರ್ ಸ್ಪೋರ್ಟ್ಸ್ ಪಡೆದುಕೊಂಡಿದ್ದು, ಎಲ್ಲಾ ಪಂದ್ಯಗಳು ಸ್ಟಾರ್ ಸ್ಪೋರ್ಟ್ಸ್ ವಾಹಿನಿಯಲ್ಲಿ ಪ್ರಸಾರವಾಗಲಿವೆ.