ಮಾರ್ಚ್ 22ರಂದು ‘ಜನತಾ ಕರ್ಫ್ಯೂ’ ಆಚರಿಸೋಣ : ಪಿಎಂ ನರೇಂದ್ರ ಮೋದಿ

ಅದ್ಯೋತ್ ನ್ಯೂಸ್ ಡೆಸ್ಕ್ : ಜನವರಿ 22 ರ ಭಾನುವಾರ ದೇಶದ ಪ್ರಜೆಗಳು ಸ್ವಯಂ ಪ್ರೇರಿತರಾಗಿ ಬಂದ್ ಮಾಡೋ ಮೂಲಕ ‘ಜನತಾ ಕರ್ಫ್ಯೂ’ ಆಚರಿಸಬೇಕು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ದೇಶದ ಜನತೆಗೆ ಕರೆ ಕೊಟ್ಟಿದ್ದಾರೆ.


ಕೊರೊನಾ ವೈರಸ್ ತಡೆಗಟ್ಟುವ ಬಗ್ಗೆ ದೇಶವನ್ನುದ್ದೇಶಿಸಿ ಮಾತನಾಡಿದ ಅವರು, ಭಾನುವಾರದಂದು ಬೆಳಿಗ್ಗೆ 8 ರಿಂದ ಸಂಜೆ 5 ರವರೆಗೆ ದೇಶದ ಎಲ್ಲಾ ಜನರು ಮನೆಯಲ್ಲೇ ಇದ್ದು ಜನತಾ ಕರ್ಫ್ಯೂ ಆಚರಿಸೋಣ. ಸಂಜೆ 5 ಗಂಟೆಗೆ ಮನೆಯ ಮುಂಬಾಗಿಲಿನಲ್ಲಿ ನಿಂತು ಚಪ್ಪಾಳೆ ತಟ್ಟೋ ಮೂಲಕ ಅಥವಾ ಸೈರನ್, ಗಂಟೆ ಬಾರಿಸೋ ಮುಖಾಂತರ ವೈದ್ಯರು ಹಾಗೂ ಪೊಲೀಸರಿಗೆ ಅಭಿನಂದನೆ ಸಲ್ಲಿಸೋಣ. ಆದಷ್ಟು ಮಕ್ಕಳು ಹಾಗೂ ವೃದ್ಧರು ಮನೆಯ ಹೊರಗಡೆ ಬರಬೇಡಿ. ಒಂದು ದಿನದ ಮಟ್ಟಿಗೆ ಹೊರಗಡೆ ಬಾರದೇ ಇದ್ದಲ್ಲಿ ಅಷ್ಟು ರೋಗ ಪ್ರಸರಣವನ್ನ ನಾವು ತಡೆಯಬಹುದು. ಕೊರೊನಾ ಬಾರದಂತೆ ತಡೆಯಲು ಮುನ್ನೆಚ್ಚರಿಕೆ ಕ್ರಮಗಳನ್ನ ಕೈಗೊಳ್ಳೋಣ ಎಂದರು.

About the author

Adyot

Leave a Comment