ಮಧ್ಯಪ್ರದೇಶದಲ್ಲಿ ಸಿಲುಕಿದ್ದ ಜಿಲ್ಲೆಯ ವಿದ್ಯಾರ್ಥಿಗಳು ವಾಪಸ್

ಆದ್ಯೋತ್ ಸುದ್ದಿ ನಿಧಿ : ಕೊರೊನಾ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರ ತೆಗೆದುಕೊಂಡ ಲಾಕ್ ಡೌನ್ ಆದೇಶದಿಂದ ಮುಂಡಗೋಡ ನವೋದಯ ಶಾಲೆಯ ಜಿಲ್ಲೆಯ 11 ತಾಲೂಕಿನ ಸುಮಾರು 19 ಜನ ವಿಧ್ಯಾರ್ಥಿಗಳು ಮಧ್ಯಪ್ರದೇಶದಲ್ಲಿ ಸಿಲುಕಿಕೊಂಡಿದ್ದರು.


ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಅವರು ಈ ಬಗ್ಗೆ ವಿಶೇಷ ಕಾಳಜಿವಹಿಸಿ ರಾಜ್ಯ ಸರಕಾರದೊಂದಿಗೆ ಹಾಗೂ ಮಧ್ಯಪ್ರದೇಶ ಸರಕಾರದ ಸಂಬಂಧಪಟ್ಟ ಅಧಿಕಾರಿಗಳ ಬಳಿ ಈ ಬಗ್ಗೆ ಮಾತನಾಡಿ ವಿಧ್ಯಾರ್ಥಿಗಳನ್ನು ರಾಜ್ಯಕ್ಕೆ ಕಳುಹಿಸುವಂತೆ ಮನವಿ ಮಾಡಿದರು. ಇಂದು ಮಧ್ಯಪ್ರದೇಶ ಸರಕಾರವು ಎಲ್ಲಾ 19 ವಿದ್ಯಾರ್ಥಿಗಳನ್ನು ಕರ್ನಾಟಕಕ್ಕೆ ಕಳುಹಿಸುವ ವ್ಯವಸ್ಥೆ ಮಾಡಿದೆ. ಎಲ್ಲಾ ವಿಧ್ಯಾರ್ಥಿಗಳು ಈಗ ಹೊರಟು ಮಧ್ಯಪ್ರದೇಶದಿಂದ ವಿಶೇಷ ಬಸ್ ಮೂಲಕವಾಗಿ ನಾಳೆ ಕರ್ನಾಟಕಕ್ಕೆ ಆಗಮಿಸಲಿದ್ದಾರೆ. ಅವರನ್ನು ಮುಂಡಗೋಡ ತಾಲೂಕಿನ ಸರಕಾರಿ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆ ಮಾಡಿ ನಂತರ ಅವರನ್ನು ಮನೆಗೆ ಕಳುಹಿಸಿಲಾಗುವುದು.


ಮಧ್ಯಪ್ರದೇಶದಿಂದ ಆಗಮಿಸುವ ವಿಧ್ಯಾರ್ಥಿಗಳನ್ನು ಅವರ ಮನೆಗೆ ಕಳುಹಿಸುವುದಕ್ಕೆ ಸಚಿವರು ಬಸ್ ನ ವ್ಯವಸ್ಥೆ ಮಾಡಿದ್ದು, ಈ ಕಾರ್ಯಕ್ಕೆ ನವೋದಯ ವಿದ್ಯಾಲಯದ ಪ್ರಾಂಶುಪಾಲರು ಹಾಗೂ ಪಾಲಕರು ಸಚಿವ ಶಿವರಾಮ ಹೆಬ್ಬಾರ್ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.

About the author

Adyot

Leave a Comment