ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡ ಜಿಲ್ಲೆಯ ಜೊಯಿಡಾ ಕುಂಬಾರವಾಡಾ ಸರಕಾರಿ ಪ್ರೌಢಶಾಲೆಯಲ್ಲಿ ಫೆ.14 ಶನಿವಾರ ಜೊಯಿಡಾ ತಾಲೂಕು ಕುಣಬಿ ಅಭಿವೃದ್ಧಿ ಸಂಘ ಮತ್ತು ಸನ್ ಫಾರ್ಮ ಸಹಯೋಗದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಾಗೂ ಪತ್ರಕರ್ತ ಪ್ರಸನ್ನ ಕರ್ಪೂರರ. ಕಾಡಕಸ್ತೂರಿ ಕೃತಿ ಬಿಡುಗಡೆ ಕಾರ್ಯಕ್ರಮ ನಡೆಯಲಿದೆ
ಅನಸೂಚಿತ ಜಾತಿ ಮತ್ತು ಬುಡಕಟ್ಟು ಆಯೋಗದ ಅಧ್ಯಕ್ಷ ಹಾಗೂ ಶಾಸಕ ನೆಹರೂ ಓಲೇಕಾರ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.ಬೆಳಗಾವಿ ಉತ್ತರವಲಯದ ಐಜಿಪಿ ಎಚ್.ಜಿ.ರಾಘವೇಂದ್ರ ಸುಹಾಸ ಕಾಡಕಸ್ತೂರಿ ಕೃತಿಬಿಡುಗಡೆ ಮಾಡಲಿದ್ದಾರೆ.ಡಾ.ಮಹಂತೇಶ ಬಿರಾದಾರ ಕೃತಿ ಪರಿಚಯ ಮಾಡಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಉದ್ಯಮಿ ಸಂಗಮೇಶ ನಿರಾಣಿ,ನಿವೃತ್ತ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಕೃಷ್ಣ ಉದಪುಡಿ,ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎಸ್.ಎಸ್.ನಿಂಗಾಣಿ,ಶಿವಾನಂದ ತೋಡ್ಕರ್,ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಹಂತೇಶ ಪಾಟೀಲ,ಡಾ.ಆನಂದ ಪಾಂಡುರಂಗಿ,ಡಾ.ಆರ್.ಸಿ.ದೂಳಪ್ಪನವರ,ಜಿಪಂ ಸದಸ್ಯ ರಮೇಶ ನಾಯ್ಕ,ಎಸ್.ಡಿ.ಎಂ.ಸಿ.ಅಧ್ಯಕ್ಷ ವಿನೋದ ವೆಳಿಪ್
ಕುಣಬಿ ಅಭಿವೃದ್ಧಿ ಸಂಘದ ಅಧ್ಯಕ್ಷ ಡಾ.ಜಯಾನಂದ ಡೇರೆಕರ ಅಧ್ಯಕ್ಷತೆವಹಿಸಲಿದ್ದಾರೆ.
ಶಿಬಿರದಲ್ಲಿ ತಜ್ಞ ವೈದ್ಯರಾದ ಡಾ.ಆದಿತ್ಯ ಪಾಂಡುರಂಗಿ,ಡಾ.ಸ್ವಪ್ನ,ಡಾ.ದತ್ತಾತ್ರೇಯ ಜಲ್ದೆ,ಡಾ.ಶರತ್ ವಿಜಾಪುರ,ಡಾ.ಮನೋಜ ಬುಟ್ಟೆ ಭಾಗವಹಿಸಲಿದ್ದಾರೆ
####
ವೀರಶೈವ ಲಿಂಗಾಯತ ಸಂಘಟನಾ ವೇದಿಕೆಯ ಕಲ್ಯಾಣ ಕರ್ನಾಟಕ ಸಂಘಟನಾ ಕಾರ್ಯದರ್ಶಿಯಾಗಿ ಗದ್ದಿ ನೇಮಕ
ಭಾವೈಕ್ಯಬ್ರಹ್ಮ ಭಕ್ತಿ ಪ್ರಧಾನ ಕನ್ನಡ ಚಲನಚಿತ್ರದ ನಿರ್ಮಾಪಕರಾದ ವಿಜಯಕುಮಾರ ಗದ್ದಿ ಅವರು ವೀರಶೈವ ಲಿಂಗಾಯತ ಸಂಘಟನಾ ವೇದಿಕೆಯ ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ಸಂಘಟನಾ ಕಾರ್ಯದರ್ಶಿಯಾಗಿ ನೇಮಕ ವಾಗಿದ್ದಾರೆ,
ಪೆ-2 ರಂದು ರಾಜ್ಯ ವೀರಶೈವ ಲಿಂಗಾಯತ ಸಂಘಟನಾ ವೇದಿಕೆಯು, ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ಸಂಘಟನಾ ಕಾರ್ಯದರ್ಶಿಯನ್ನಾಗಿ ವಿಜಯಕುಮಾರ ಗದ್ದಿಯನ್ನು ವೀರಶೈವ ಲಿಂಗಾಯತ ಸಂಘಟನಾ ವೇದಿಕೆಯ ರಾಷ್ಟ್ರೀಯ ಅಧ್ಯಕ್ಷ ಪ್ರದೀಪ ಕಂಕಣವಾಡಿಯವರ ನೇತೃತ್ವದಲ್ಲಿ ಮಾಡಲಾಯಿತು. ಈ ನೇಮಕಾತಿಯನ್ನು ಮಾಡುವ ಮೂಲಕ ವಿಜಯಕುಮಾರ ಗದ್ದಿಯವರಿಗೆ ಸಂಘಟನೆಯಲ್ಲಿ ಸಕ್ರೀಯವಾಗಿ ತೊಡಗಿಕೊಂಡು ವೀರಶೈವ ಅಂಗಾಯತ ಸಂಘಟನಾ ವೇದಿಕೆಯಲ್ಲಿ ವೀರಶೈವ ಲಿಂಗಾಯತರನ್ನು ಒಗ್ಗೂಡಿಸಿ , ಸಂಘಟಿಸಿ ಸದಸ್ಯರನ್ನಾಗಿ ಮಾಡಿ ಅವರ ಕಲ್ಯಾಣಕ್ಕಾಗಿ ಶ್ರಮಿಸಬೇಕೆಂದು ಸೂಚಿಸಿದ್ದಾರೆ.