ಗುಜರಾತ್ : ದೇಶದ ರಕ್ಷಣಾ ವ್ಯವಸ್ಥೆಗೆ ಬಲ ತುಂಬೋ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ದೇಶಕ್ಕೆ ಇನ್ನೊಂದು ಪ್ರಬಲ ಶಕ್ತಿಶಾಲಿ ಅಸ್ತ್ರವನ್ನ ಸೇರ್ಪಡೆ ಮಾಡಿದೆ.
ದೇಶದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ‘K9 ವಜ್ರ’ ಅನ್ನೋ ಭಾರತೀಯ ನಿರ್ಮಿತ ಸ್ವಯಂ ಚಾಲಿತ ಹೋವಿಟ್ಜರ್ ಗನ್ ವಾಹನವನ್ನ ಗುಜರಾತ್ ನ ಹಝಿರಾ ದಲ್ಲಿ ಭಾರತದ ಭೂಸೇನೆಗೆ ಸಮರ್ಪಿಸಿದರು. ಎಲ್&ಟಿ ಕಂಪನಿ ನಿರ್ಮಿಸಿದ ಈ ಸ್ವಯಂಚಾಲಿತ ಗನ್ 50 ಟನ್ ತೂಕವಿದ್ದು, 47 ಕಿಲೋಗ್ರಾಮ್ ಬಾಂಬ್ ಎಸೆಯೋ ಸಾಮರ್ಥ್ಯವನ್ನು ಹೊಂದಿದೆ. ಇದು 43 ಕಿಲೋಮೀಟರ್ ದೂರದ ವರೆಗಿನ ಗುರಿಯನ್ನ ಕ್ಷಣ ಮಾತ್ರದಲ್ಲಿ ಹೊಡೆದುರುಳಿಸುತ್ತದೆ. ಭಾರತದ ರಕ್ಷಣಾ ವ್ಯವಸ್ಥೆಗೆ ಇದರಿಂದ 51ನೇ ಸ್ವಯಂಚಾಲಿತ ಗನ್ ಸೇರ್ಪಡೆಯದಂತಾಗಿದ್ದು, ರಕ್ಷಣಾ ಬಲವನ್ನ ಇನ್ನಷ್ಟು ಉತ್ತಮಗೊಳಿಸಿದೆ.