ಜಿಲ್ಲೆಯ ಕುವರನಿಗೆ ಕಲಾಭೂಷಣ ಪುರಸ್ಕಾರ

ಆದ್ಯೋತ್ ಸುದ್ದಿ ನಿಧಿ : ಜಿಲ್ಲೆಯ ಸಿದ್ದಾಪುರ ತಾಲೂಕಿನ ಕೋಲಸಿರ್ಸಿಯ ಕು.ಸುಹಾಸ್ ಎನ್. ನಾಯ್ಕ ಮಾಳ್ಕೋಡ ರಾಜ್ಯ ಮಟ್ಟದ “ಕಲಾಭೂಷಣ” ಪುರಸ್ಕಾರಕ್ಕೆ ಆಯ್ಕೆಯಾಗಿದ್ದಾನೆ.


ರಾಣಿಬೆನ್ನೂರಿನ ಕಾಗದ ಸಾಂಗತ್ಯ ವೇದಿಕೆ ಆಯೋಜಿಸಿದ್ದ ರಾಜ್ಯ ಮಟ್ಟದ ಮಕ್ಕಳ ಚಿತ್ರ ಕಲಾ ಸ್ಪರ್ಧೆ-2020ರಲ್ಲಿ ವಿಭಿನ್ನತೆಯಿಂದ ಕೂಡಿದ ಚಿತ್ರ ರಚಿಸಿದ 10ವಿದ್ಯಾರ್ಥಿಗಳನ್ನು ಈ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ. ಈತ ಪಟ್ಟಣದ ಸಿದ್ಧಿವಿನಾಯಕ ಶಾಲೆಯ 6ನೇ ತರಗತಿ ವಿದ್ಯಾರ್ಥಿ. ಸ್ಪರ್ಧೆಯಲ್ಲಿ ರಾಜ್ಯಾದ್ಯಂತ 1868 ಮಕ್ಕಳು ಚಿತ್ರ ರಚಿಸಿ ಭಾಗವಹಿಸಿದ್ದರು. ಕೊರೊನಾ ವೈರಸ್ ನ ಭೀತಿಯಲ್ಲಿ ಇಡೀ ದೇಶವೇ ಲಾಕ್ ಡೌನ್ ಆಗಿರುವ ಸಂದರ್ಭದಲ್ಲಿ ರಾಣಿಬೆನ್ನೂರಿನ ಕಾಗದ ಸಾಂಗತ್ಯ ವೇದಿಕೆ ರಾಜ್ಯ ಮಟ್ಟದ ಮಕ್ಕಳ ಚಿತ್ರ ಕಲಾ ಸ್ಪರ್ಧೆಯನ್ನು ಆಯೋಜಿಸಿತ್ತು. ಈ ಸ್ಪರ್ಧೆಯಲ್ಲಿ ರಾಜ್ಯದ ವಿವಿಧ ಭಾಗಗಳಿಂದ 1868 ಮಕ್ಕಳು ಮೂರು ವಿಭಾಗಗಳಲ್ಲಿ ‘ಪರಿಸರ ಜಾಗೃತಿ ‘ ಚಿತ್ರ ರಚಿಸಿ ಭಾಗವಹಿಸಿದ್ದರು. ಮಕ್ಕಳ ಚಿತ್ರವನ್ನು ವಾಟ್ಸಪ್ ಮತ್ತು ಇ-ಮೇಲ್ ಮೂಲಕ ತರಿಸಿಕೊಂಡ ವೇದಿಕೆ ಮಕ್ಕಳಲ್ಲಿಯ ಕ್ರಿಯಾಶೀಲತೆಗೆ ಅನುಗುಣವಾಗಿ ಆಯ್ಕೆಯ ಮಾನದಂಡವನ್ನು ಇಟ್ಟುಕೊಂಡು ಮಕ್ಕಳನ್ನು ಆಯ್ಕೆ ಮಾಡಲಾಗಿದೆ. ಈ ಸ್ಪರ್ಧೆಯಲ್ಲಿ ವಿಜೇತರ ಚಿತ್ರಗಳಿಗಿಂತ ವಿಭಿನ್ನತೆಯಿಂದ ಕೂಡಿದ ಚಿತ್ರ ರಚಿಸಿದ ಮಕ್ಕಳಿಗೆ “ಕಲಾಭೂಷಣ” ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ. ಕಳೆದ ನಾಲ್ಕು ವರ್ಷಗಳಿಂದ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಪ್ರಥಮ ಸ್ಥಾನ ಪಡೆಯುತ್ತಿರುವ ಕು. ಸುಹಾಸ್ ಈ ಹಿಂದೆ ತಾಲ್ಲೂಕು ಹಾಗೂ ಜಿಲ್ಲಾ ಮಟ್ಟದ ವಿವಿಧ ಚಿತ್ರ ಕಲಾ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ ಸ್ಥಾನವನ್ನು ಪಡೆದುಕೊಂಡಿದ್ದಾನೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಆಯೋಜಿಸಿದ್ದ ರಾಜ್ಯ ಮಟ್ಟದ “ಕಲಾಶ್ರೀ” ಸ್ಪರ್ಧೆಗೆ ಆಯ್ಕೆಯಾಗಿರುವುದನ್ನು ಇಲ್ಲಿ ಸ್ಮರಿಸಬಹುದಾಗಿದೆ. ಈತನ ಈ ಸಾಧನೆಗೆ ಪಾಲಕರು ಹಾಗೂ ಶಾಲಾ ಶಿಕ್ಷಕರು ಅಭಿನಂದಿಸಿದ್ದಾರೆ.


ಕಲಾಭೂಷಣ ಪುರಸ್ಕಾರ: ಸುಹಾಸ್ ನೊಂದಿಗೆ ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆಯ 8ನೇ ತರಗತಿಯ ರೆಹಾನ್ ಅಹ್ಮದ್, ಶಿವಮೊಗ್ಗದ 10ನೇ ತರಗತಿಯ ಸ್ನೇಹಶ್ರೀ ಎಸ್ ಜಿ., ಧಾರವಾಡದ 8ನೇ ತರಗತಿಯ ಮೋಹಿತ್ ಎಸ್ ಮತ್ತೋಡು, ಉಡುಪಿಯ 9ನೇ ತರಗತಿಯ ಬಿ. ಪಿ. ಪ್ರಾರ್ಥನಾ ಹೆಬ್ಬಾರ, 6ನೇ ತರಗತಿಯ ಆಸ್ಮಿ ಪ್ರಭು, ಚಿಕ್ಕಬಳ್ಳಾಪುರದ 9ನೇ ತರಗತಿಯ ಕಾವ್ಯಾಶ್ರೀ ವಿ., ಮಂಡ್ಯದ 7ನೇ ತರಗತಿಯ ಸೌಂದರ್ಯ ಎನ್., ಹೂವಿನಹಡಗಲಿಯ 9ನೇ ತರಗತಿಯ ಮರಿಯಪ್ಪ ಬಾವಿಮನಿ, ಹಾವೇರಿಯ 4ನೇ ತರಗತಿಯ ವಿ. ಆರ್. ಗೌತಮಿ ಇವರುಗಳನ್ನು ಆಯ್ಕೆ ಮಾಡಲಾಗಿದೆ.

About the author

Adyot

2 Comments

Leave a Comment