ಆದ್ಯೋತ್ ಸುದ್ದಿನಿಧಿ:
ಡಿಸಂಬರ್-5 ರಂದು ನಡೆದ ಕರ್ನಾಟಕ ಬಂದ್ ಸಂಪೂರ್ಣ ವಿಫಲವಾಗಿದೆ.ಅಲ್ಲಲ್ಲಿ ಪ್ರತಿಭಟನೆ,ಮನವಿ ಸಮರ್ಪಣೆಗೆ ಸೀಮಿತವಾದ ಬಂದ್ ವಿಫಲವಾಗಲು ಕಾರಣವೇನು?
ಕನ್ನಡಿಗರ ಭಾಷಾಭಿಮಾನ ಬತ್ತಿ ಹೋಗಿದೆಯೇ?, ಕರ್ನಾಟಕದಲ್ಲಿ ಕನ್ನಡ ಭಾಷಿಕರ ಸಂಖ್ಯೆ ಕ್ಷೀಣವಾಗಿದೆಯೇ? ಪರಭಾಷಿಕರ ಮಧ್ಯೆ ಕನ್ನಡಿಗರ ಧ್ವನಿ ಉಡುಗಿ ಹೋಗಿದೆಯೇ?
ಇವೆಲ್ಲ ಪ್ರಶ್ನೆಗಳ ಉತ್ತರ ಒಂದೇ ಹೌದು.
ಇದೆಲ್ಲದರ ನಡುವೆ ಕನ್ನಡದ ಅಭಿಮಾನವುಳ್ಳ ನಾಯಕರ ಕೊರತೆ ಎದ್ದು ಕಾಣುತ್ತಿದೆ.ಕನ್ನಡ ಕಾಪಾಡುತ್ತೇವೆ ಎಂದು ಹೇಳಿ ವಯಕ್ತಿಕ ಸ್ವಾರ್ಥ ಸಾಧನೆಗೆ ಸಂಘಟನೆಗಳನ್ನು ಕಟ್ಟಿಕೊಂಡು ಹೋರಾಡುವ ಈ ಸಂಘಟಕರಿಂದ ಕನ್ನಡಕ್ಕೆ ಯಾವ ಪ್ರಯೋಜನವೂ ಇಲ್ಲ. ಇವರೆಲ್ಲರೂ ಗುಂಪುಗಾರಿಕೆ ಮಾಡಿಕೊಂಡು ತಮ್ಮೊಳಗೆ ಕಚ್ಚಾಡಿಕೊಳ್ಳುವವರು ಇವರಲ್ಲಿ ಒಗ್ಗಟ್ಟು ಇಲ್ಲ ಎನ್ನುವುದು ರಾಜಕೀಯ ಪಕ್ಷಗಳಿಗೆ,ಆಡಳಿತ ನಡೆಸುತ್ತಿರುವ ರಾಜ್ಯ ಮತ್ತು ಕೇಂದ್ರ ಸರಕಾರಗಳಿಗೆ ಗೊತ್ತಿದೆ ಅದಕ್ಕಾಗೆ ಕೇಂದ್ರ ಸರಕಾರದಲ್ಲಿ 25 ಸಂಸದರನ್ನು ಹೊಂದಿದ್ದರೂ ನಮಗೆ ನ್ಯಾಯ ಸಿಗುತ್ತಿಲ್ಲ,ನಮ್ಮ ರಾಜ್ಯದ ಉಪಮುಖ್ಯಮಂತ್ರಿ ಡಾ.ಅಶ್ವಥನಾರಾಯಣ ರೆಡ್ಡಿಯವರು ಮರಾಠ ನಿಗಮ ಅಷ್ಟೆ ಅಲ್ಲ ತಮಿಳು ನಿಗಮವನ್ನು ಮಾಡುತ್ತೇವೆ ನೀವು ಏನು ಮಾಡುತ್ತೀರಿ? ಎಂಬಂತಹ ಉಢಾಪೆಯ ಮಾತನಾಡುತ್ತಾರೆ,ಕನ್ನಡಿಗರ ಬಂದ ವಿಫಲವಾಗಿದೆ ಎಂದು ಮರಾಠಿಗರು ಅಚ್ಚ ಕನ್ನಡದ ನೆಲ ಧಾರವಾಢದಲ್ಲಿ ವಿಜಯೋತ್ಸವ ಆಚರಿಸುತ್ತಾರೆ? ನಾವು ಕನ್ನಡಿಗರು ಏನೂ ನಡೆದಿಲ್ಲ ಎಂಬಂತೆ ನಮ್ಮ ಕೆಲಸದಲ್ಲಿ ಮುಳುಗಿದ್ದೆವೆ.
80 ರ ದಶಕದಲ್ಲಿ ನಡೆದ ಗೋಕಾಕ್ ಚಳುವಳಿಯ ನಂತರ ಕನ್ನಡಕ್ಕಾಗಿ ನಿಸ್ವಾರ್ಥ ಚಳುವಳಿಯೇ ನಡೆದಿಲ್ಲ.ಅಂದಿನ ಕನ್ನಡ ಹೋರಾಟಗಾರ ಜಿ.ನಾರಾಯಣಕುಮಾರ ಕನ್ನಡ ನಟರ,ಸಾಹಿತಿಗಳ ವಿಶ್ವಾಸಕ್ಕೆ ತೆಗೆದುಕೊಂಡರು ಚೆನೈನಲ್ಲಿದ್ದ ಡಾ.ರಾಜಕುಮಾರರನ್ನು ಕರೆತಂದರು,ಪ್ರೋ.ಚಂದ್ರಶೇಖರ ಪಾಟೀಲ ಸಾಹಿತಿಗಳ ಮನವೊಲಿಸಿದರು ಹೀಗೆ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಚಳುವಳಿ ಯಶಸ್ವಿಯಾಗುವಂತೆ ಮಾಡಿದರು.
ಆದರೆ ಈಗ ನಡೆಯುತ್ತಿರುವುದು ಏನು? ಸುಮಾರು 50-60 ಕನ್ನಡ ಸಂಘಟನೆಗಳಿವೆ ಇವರೆಲ್ಲ ಯಾರು? ಯಾಕಾಗಿ ಈ ಸಂಘಟನೆ ಮಾಡಿಕೊಂಡಿದ್ದಾರೆ? ಇವರಿಗೆಲ್ಲ ಕನ್ನಡ ಸಾಹಿತ್ಯ,ಸಂಸ್ಕೃತಿ,ಸಾಹಿತಿಗಳ ಬಗ್ಗೆ ಅರಿವಿದೆಯೇ? ಈ ಸಂಘಟನೆಗಳ ಬಗ್ಗೆ ಕನ್ನಡಗರಿಗೆ ಏನು ಗೊತ್ತಿದೆ?
ಇಲ್ಲ ಇವರ ಬಗ್ಗೆ ಯಾವ ಕನ್ನಡಿಗನಿಗೂ ಗೊತ್ತಿಲ್ಲ.
ಇವರು ಯಾರನ್ನೂ ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ ಕನ್ನಡದ ಹೆಸರಿನಲ್ಲಿ ಸ್ಟಾರ್ ನಟರಾಗಿ ಬೆಳೆದವರನ್ನ,ಕನ್ನಡ ಸಾಹಿತಿಗಳನ್ನು
ಸಂಪರ್ಕಿಸಿಲ್ಲ ತಾವು ಕನ್ನಡದ ಕಟ್ಟಾಳುಗಳು ಎಂದು ಹೇಳಿಕೊಳ್ಳುತ್ತ ಬಂದ್ ನಡೆಸಲು ಹೊರಟು ವಿಫಲರಾಗಿದ್ದಾರೆ.
ಸಮೂಹ ಮಾದ್ಯಮಗಳು ಇಲ್ಲದ ಕಾಲದಲ್ಲಿ ಗೋಕಾಕ್ ಚಳುವಳಿ ಯಶಸ್ವಿಯಾಗಿದೆ ಆದರೆ ಇಂದು ಅಗಾಧ ಪ್ರಮಾಣದ ಪ್ರಚಾರ ಸಾದನಗಳಿವೆ ಆದರೂ ಚಳುವಳಿ ವಿಫಲವಾಗುತ್ತಿವೆ ಎಂದರೆ ಇವರು ಕನ್ನಡಿಗರ ವಿಶ್ವಾಸಗಳಿಸಲು ಸೋತಿದ್ದಾರೆ.
ಹಿಂದೆ ಕನ್ನಡಕ್ಕಾಗಿ ನಡೆದ ಗೋಕಾಕ ಚಳುವಳಿಗೆ ಅಂದಿನ ಕನ್ನಡ ಹೋರಾಟಗಾರ ಜಿ.ನಾರಾಯಣಕುಮಾರ ನಟಸಾರ್ವಭೌಮ ಡಾ.ರಾಜಕುಮಾರ ರಂಹ ಕಟ್ಟಾಳುಗಳನ್ನು ಕರೆತಂದಿದ್ದರು.ಅಲ್ಲದೆ ಪ್ರೋ ಚಂದ್ರಶೇಖರಪಾಟೀಲ ಸಾಹಿತಿಗಳನ್ಙು ಅಖಾಡಕ್ಕಿಳಿಸಿದ್ದರು.ಇದರಿಂದ ಸರಕಾರವೇ ಅಲ್ಲಾಡಿತ್ತು ಕನ್ನಡಿಗರ ಬೇಡಿಕೆಗೆ ಮರ್ಯಾದೆ ಸಿಕ್ಕಿತ್ತು
ಈಗಲೂ ಇಂತಹ ಕನ್ನಡದಕಟ್ಟಾಳುವಿನ ಅವಶ್ಯಕತೆ ಇದೆ.
****
ಡಿ.ಜಿ.