ವಿಜೃಂಭಣೆಯಿಂದ ನಡೆದ ಕನ್ನಡ ತಾಯಿಯ ಮಹಾರಥೋತ್ಸವ

ಸಿದ್ದಾಪುರ : ಕನ್ನಡ ತಾಯಿ ರಾಜರಾಜೇಶ್ವರಿ ಭುವನಗಿರಿಯ ಭುವನೇಶ್ವರಿ ದೇವಿಯ ಮಹಾರಥೋತ್ಸವ ವಿಜೃಂಭಣೆಯಿಂದ ನಡೆಯಿತು.



ಬೆಳಿಗ್ಗೆಯಿಂದ ಮಹಾರಥೋತ್ಸವದ ಪೂಜಾ ವಿಧಿ ವಿಧಾನಗಳು, ಬಲಿಪೂಜೆ ನಡೆದು ಕನ್ನಡತಾಯಿ ಭುವನೇಶ್ವರಿ ದೇವಿಯ ವಿಗ್ರಹವನ್ನ ಮರದ ರಥದಲ್ಲಿ ಕುಳ್ಳಿರಿಸಿ ರಥವನ್ನ ಎಳೆಯಲಾಯಿತು. ರವಿವಾರವಾದ್ದರಿಂದ ಸಹಜವಾಗಿಯೇ ಜನಸಾಗರ ದೇವಿಯ ದರ್ಶನಕ್ಕೆ ಹರಿದುಬಂದಿತ್ತು. ಮಧ್ಯಾಹ್ನದ ನಂತರ ಜಾತ್ರೆ ಕಳೆಗಟ್ಟಿತು. ರಾತ್ರಿ ಕೂಡ ದೇವಿಯ ರಥವನ್ನು ಎಳೆಯಲಾಯಿತು. ರಥವನ್ನು ಎಳೆಯುವಾಗ ದೇವಿಗೆ ಹರಕೆ ಹೇಳಿಕೊಂಡ ಭಕ್ತಾದಿಗಳು ಅಕ್ಕಿ, ಬಾಳೆಹಣ್ಣು, ಕಡಲೆ ಮುಂತಾದ ಸುವಸ್ತುಗಳನ್ನು ರಥಕ್ಕೆ ಎಸೆಯೋ ಮುಖಾಂತರ ತಮ್ಮ ಹರಕೆಯನ್ನ ತೀರಿಸಿಕೊಂಡರು. ಪ್ರತಿವರ್ಷದಂತೆ ಈ ವರ್ಷ ಕೂಡ ರಾಜ್ಯದ ವಿವಿದಧೆಡೆಗಳಿಂದ ಸಾವಿರಾರು ಭಕ್ತರು ಆಗಮಿಸಿ ದೇವಿಯ ದರ್ಶನವನ್ನು ಪಡೆದು ಪುನೀತರಾದರು.

About the author

Adyot

Leave a Comment