6 ದಿನ 40 ಗಂಟೆಗಳ ಕಾಲ ನಡೆದ 15 ನೇ ವಿಧಾನಸಭೆಯ 7ನೇ ಅಧಿವೇಶನ

ಆದ್ಯೋತ್ ಸುದ್ದಿನಿಧಿ:
ಸೆಪ್ಟಂಬರ್ 21 ರಿಂದ 26 ರವರೆಗೆ 6 40 ಗಂಟೆಗಳ ಕಾಲ ನಡೆದ 15ನೇ ವಿಧಾನಸಭೆಯ 7 ಅಧಿವೇಶನವು ಕೊರೊನಾ ಭಯದ ನಡುವೆಯೂ ಯಶಸ್ವಿಯಾಗಿ ನಡೆದಿದ್ದು ಇದಕ್ಕೆ ಸಹಕರಿಸಿದ ವಿಧಾನಸಭೆಯ ಸಿಬ್ಬಂದಿಗಳಿಗೆ,ಅಧಿಕಾರಿಗಳಿಗೆ ಹಾಗೂ ವಿಧಾನಸಭೆಯ ಸದಸ್ಯರಿಗೆ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಕೃತಜ್ಞತೆ ಸಲ್ಲಿಸಿದ್ದಾರೆ.

ಈ ಬಗ್ಗೆ ಮಾಧ್ಯಮದವರಿಗೆ ಮಾಹಿತಿ ನೀಡಿರುವ ಕಾಗೇರಿಯವರು,ವಿಧಾನಸಭೆಯ ಸಮಿತಿಗಳ 6ವರದಿಗಳು,ಜಂಟಿಪರಿಶೀಲನಾ ಸಮಿತಿಯ ವಿಶೇಷ ವರದಿ, 57 ಅಧಿಸೂಚನೆಗಳು,19 ಅಧ್ಯಾದೇಶಗಳು,62ವಾರ್ಷಿಕ ವರದಿಗಳು,69 ಲೆಕ್ಕಪರಿಶೋಧನಾ ವರದಿ,1 ಅನುಷ್ಠಾನ ವರದಿ,1ಅನುಪಾಲನಾ ವರದಿ,3ವಿಶೇಷ ವರದಿಗಳನ್ನು ಒಪ್ಪಿಸಲಾಗಿದೆ ಎಂದು ಹೇಳಿದ್ದಾರೆ.
2020-21ನೇ ಸಾಲಿನ ಪೂರಕ ಅಂದಾಜುಗಳ ಮೊದಲನೇ ಕಂತಿನ ಬೇಡಿಕೆಗಳನ್ನು ಮತಕ್ಕೆ ಹಾಕಿ ಅಂಗೀಕಾರ ಪಡೆಯಲಾಯಿತು.ವಿಧಾನಪರಿಷತನಿಂದ ತಿದ್ದುಪಡಿಗಳೊಂದಿಗೆ ಅಂಗೀಕಾರವಾದ ರೂಪದಲ್ಲಿರುವ 2. ವಿಧೇಯಕಗಳು,ಧನವಿನಿಯೋಗ ವಿಧೇಯಕವೂ ಸೇರಿದಂತೆ ಒಟ್ಟೂ37ವಿಧೇಯಕಗಳ ಪೈಕಿ 36 ವಿಧೇಯಕಗಳನ್ನು ಅಂಗೀಕರಿಸಲಾಗಿದ್ದು 1 ವಿಧೇಯಕವನ್ನು ತಡೆಹಿಡಿಯಲಾಗಿದೆ.
ನಿಯಮ 60ರ ಅಡಿಯಲ್ಲಿ ನೀಡಿದ್ದ 3 ನಿಲುವಳಿ ಸೂಚನೆಯನ್ನು ಪರಿವರ್ತಿಸಲಾಗಿರುವುದನ್ನೂ ಸೇರಿಸಿ 20 ಸೂಚನೆಗಳನ್ನು ನಿಯಮ 69ರಡಿಯಲ್ಲಿ ಸ್ವೀಕರಿಸಿದ್ದು ಸದರಿ ಸೂಚನೆಗಳ ಪೈಕಿ ಒಂದು ಸೂಚನೆಯನ್ನು ಚರ್ಚಿಸಲಾಗಿದೆ ಎಂದು ಮಾಹಿತಿ ನೀಡಿರುವ ವಿಶ್ವೇಶ್ವರ ಹೆಗಡೆ ಕಾಗೇರಿ,ಈ ಅಧಿವೇಶನದಲ್ಲಿ ಒಟ್ಟೂ3071ಪ್ರಶ್ನೆಗಳನ್ನು ಸ್ವೀಕರಿಸಲಾಗಿದ್ದು 1109 ಪ್ರಶ್ನೆಗಳ ಉತ್ತರವನ್ನು ಸದನದಲ್ಲಿ ಮಂಡಿಸಲಾಗಿದೆ.

ನಿಯಮ351ರಡಿಯಲ್ಲಿ 60 ಸೂಚನೆಗಳನ್ನು ಅಂಗೀಕರಿಸಿದ್ದು 35 ಸೂಚನೆಗಳಿಗೆ ಉತ್ತರವನ್ನು ಸ್ವೀಕರಿಸಲಾಗಿದೆ.129ಸೂಚನೆಗಳ ಪೈಕಿ 9 ಸೂಚನೆಗಳನ್ನು ಚರ್ಚಿಸಲಾಗಿದೆ.72 ಸೂಚನೆಗಳ ಉತ್ತರವನ್ನು ಸ್ವೀಕರಿಸಲಾಗಿದೆ.ಇದೆಲ್ಲದರ ಜೊತೆಗೆ ಸರಕಾರದ ವಿರುದ್ಧ ಪ್ರತಿಪಕ್ಷಗಳು ಮಂಡಿಸಿದ್ದ ಅವಿಶ್ವಾಸ ನಿರ್ಣಯವನ್ನು ಧ್ವನಿಮತದ ಮೂಲಕ ತಿರಸ್ಕರಿಸಲಾಗಿದೆ. ಹೀಗೆ ಶೇ.90ರಷ್ಟು ಸದನಕಾರ್ಯಕಲಾಪಗಳನ್ನು ನಡೆಸಲಾಗಿದೆ ಎಂದು ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದ್ದಾರೆ.

About the author

Adyot

Leave a Comment