ಕರ್ನಾಟಕ ಲಾಕ್ ಡೌನ್

ಆದ್ಯೋತ್ ನ್ಯೂಸ್ ಡೆಸ್ಕ್ : ಕೊರೊನಾ ರೋಗ ಹರಡದಂತೆ ತಡೆಯಲು ರಾಜ್ಯ ಸರ್ಕಾರ ಇಡೀ ರಾಜ್ಯದಲ್ಲಿ ಸಂಪೂರ್ಣ ಲಾಕ್ ಡೌನ್ ಘೋಷಿಸಿದೆ.

ಮಾರ್ಚ್ 24 ರಿಂದ ಮಾರ್ಚ್ 31 ರವರೆಗೆ ರಾಜ್ಯದ ಎಲ್ಲ ಜಿಲ್ಲೆಗಳೂ ಸಂಪೂರ್ಣ ಬಂದ್ ಆಗಲಿವೆ. ಈಗಾಗಲೇ ರಾಜ್ಯ ಸರ್ಕಾರ 9 ಜಿಲ್ಲೆಗಳಲ್ಲಿ ಸಂಪೂರ್ಣ ಲಾಕ್ ಡೌನ್ ಘೋಷಿಸಿತ್ತು. ಆದರೆ ಉಳಿದ ಜಿಲ್ಲೆಗಳಲ್ಲಿ ಕೂಡ ಸಾರ್ವಜನಿಕರ ಸ್ಪಂದನೆ ಸರಿಯಾಗಿ ದೊರಕದ ಹಿನ್ನೆಲೆಯಲ್ಲಿ ಮತ್ತು ರೋಗ ಹರಡದಂತೆ ತಡೆಯಲು ಸಂಪೂರ್ಣ ರಾಜ್ಯವನ್ನ ಲಾಕ್ ಡೌನ್ ಮಾಡಿ ಕರ್ನಾಟಕ ಸರ್ಕಾರ ಆದೇಶ ಹೊರಡಿಸಿದೆ. ಅದೇ ರೀತಿ ಸಾರ್ವಜನಿಕರು ಮನೆಯಲ್ಲೇ ಇದ್ದು ಸಹಕರಿಸುವಂತೆ ಮನವಿ ಮಾಡಿದೆ.

#ಮನೆಯಲ್ಲೇ ಇರೋಣ..
#ಕೊರೊನಾ ತೊಲಗಿಸೋಣ..
#ದೇಶವನ್ನ ಉಳಿಸೋಣ..
# ಇದು ಅದ್ಯೋತ್ ನ್ಯೂಸ್ ಅಭಿಯಾನ.

About the author

Adyot

Leave a Comment