ಆದ್ಯೋತ್ ಸುದ್ದಿನಿಧಿ;
ಉತ್ತರಕನ್ನಡ ಜಿಲ್ಲೆಯಲ್ಲಿ ಮೊದಲ ಹಂತದ ಕೊವಿಡ್-19 ಲಸಿಕೆ(dry run)ಯನ್ನು ಶುಕ್ರವಾರ ನೀಡಲು ಜಿಲ್ಲಾಡಳಿತ ಸಿದ್ದವಾಗಿದೆ. ಮಂಚೂಣಿಯಲ್ಲಿರುವ ಆರೋಗ್ಯ ಕಾರ್ಯಕರ್ತರಿಗೆ ಪ್ರಥಮ ಆದ್ಯತೆಯಲ್ಲಿ ಲಸಿಕೆ ನೀಡಲು ತೀರ್ಮಾನಿಸಲಾಗಿದೆ.
ಇದಕ್ಕಾಗಿ ಜಿಲ್ಲೆಯ ಆರು ಆಸ್ಪತ್ರೆಗಳನ್ನು ಗುರುತಿಸಲಾಗಿದೆ ಮತ್ತು ವೀಕ್ಷಕರನ್ನು ನಿಯಮಿಸಲಾಗಿದೆ.
ಕಾರವಾರದಲ್ಲಿ ಜಿಲ್ಲಾ ಆಸ್ಪತ್ರೆ(ಕಿಮ್ಸ್) ಹಾಗೂ ಕಾರವಾರ ಬೈತಕೋಲದ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವ್ಯವಸ್ಥೆ ಮಾಡಲಾಗಿದ್ದು ಸಹಾಯಕ ಆಯುಕ್ತ ವಿದ್ಯಾಶ್ರೀ ಚಂದರ್ಗಿ ಹಾಗೂ ತಹಸೀಲ್ದಾರ ಆರ್.ವಿ.ಕಟ್ಟೆ ಯವರನ್ನು ವೀಕ್ಷಕರನ್ನಾಗಿ ನಿಯಮಿಸಲಾಗಿದೆ.
ಶಿರಸಿಯಲ್ಲಿ ಟಿ.ಎಸ್.ಎಸ್.ಆಸ್ಪತ್ರೆ ಹಾಗೂ ಹೆಗಡೆಕಟ್ಟಾ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವ್ಯವಸ್ಥೆ ಮಾಡಲಾಗಿದೆ.
ವೀಕ್ಷಕರನ್ನಾಗಿ ಸಹಾಯಕ ಆಯುಕ್ತ ಆಕೃತಿ ಬನ್ಸಾಲ್ ಹಾಗೂ ತಹಸೀಲ್ದಾರ ಎಂ.ಆರ್.ಕುಲಕರ್ಣಿ ನಿಯಮಿಸಲಾಗಿದೆ.
ಹೊನ್ನಾವರದಲ್ಲಿ ತಾಲೂಕು ಆಸ್ಪತ್ರೆಯಲ್ಲಿ ವ್ಯವಸ್ಥೆ ಮಾಡಲಾಗಿದೆ ಹಾಗೂ ತಹಸೀಲ್ದಾರ ವಿವೇಕ ಶೇಣೈಯವರನ್ನು ವೀಕ್ಷಕರನ್ನಾಗಿ ನಿಯಮಿಸಲಾಗಿದೆ.
ದಾಂಡೇಲಿಯಲ್ಲಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ವ್ಯವಸ್ಥೆ ಮಾಡಲಾಗಿದ್ದು ತಹಸೀಲ್ದಾರ ಶೈಲೇಶ ಎಸ್.ಪರಮಾನಂದರನ್ನು ವೀಕ್ಷಕರನ್ನಾಗಿ ನಿಯಮಿಸಲಾಗಿದೆ.