ಕಾರು ಅಪಘಾತ ಕೇಂದ್ರ ಸಚೀವ ಶ್ರೀಪಾದ ನಾಯಕ್ ಪತ್ನಿ ವಿಜಯಾ ನಾಯ್ಕ ಮರಣ

ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡ ಜಿಲ್ಲೆಯ ಅಂಕೋಲಾ ಸಮೀಪ ಹೊಸಕಂಬಿ ಗ್ರಾಮದಲ್ಲಿ ಕೇಂದ್ರ ಆಯುಷ ಇಲಾಖೆಯ ಸಚೀವ ಶ್ರೀಪಾದ ನಾಯಕ ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿದ್ದು ಸಚೀವರ ಪತ್ನಿ ವಿಜಯಾ ನಾಯಕ ಸ್ಥಳದಲ್ಲೆ ಸಾವನ್ನಪ್ಪಿದ್ದರೆ ಅವರ ಆಪ್ತ ಕಾರ್ಯದರ್ಶಿ ದೀಪಕ ಆಸ್ಪತ್ರೆಯಲ್ಲಿ ಮರಣ ಹೊಂದಿದ್ದಾರೆ.

ಸಚೀವರಿಗೆ ತೀವ್ರಗಾಯಗಳಾಗಿದ್ದು ಹೆಚ್ಚಿನ ಚಿಕಿತ್ಸೆಗೆ ಗೋವಾಕ್ಕೆ ಕರೆದೊಯ್ಯಲಾಗಿದೆ.
ಸೋಮವಾರ ಬೆಳಿಗ್ಗೆ ಯಲ್ಲಾಪುರಕ್ಕೆ ಆಗಮಿಸಿದ್ದ ಶ್ರೀಪಾದ ನಾಯಕರನ್ನು ಜಿಲ್ಲಾ ಉಸ್ತುವಾರಿ ಸಚೀವ ಶಿವರಾಮ ಹೆಬ್ಬಾರ ಸ್ವಾಗತಿಸಿದ್ದರು.

ಬೆಳಿಗ್ಗೆಯಿಂದ ಸಂಜೆಯವರೆಗೆ ಯಲ್ಲಾಪುರ ತಾಲೂಕಿನ ಚಂದಗುಳಿ ಗಂಟೆಗಣಪತಿ ದೇವಸ್ಥಾನ, ಕವಡಿಕೆರೆ ದೇವಸ್ಥಾನ, ಪಟ್ಟಣದ ಗ್ರಾಮದೇವಿ ದೇವಸ್ಥಾನ, ಈಶ್ವರ ದೇವಸ್ಥಾನಗಳಲ್ಲಿ ಪತ್ನಿಯೊಂದಿಗೆ ಗಣಹವನ ಹಾಗೂ ವಿಶೇಷ ಪೂಜೆ ಸಲ್ಲಿಸಿದ್ದರು.
ಅಲ್ಲಿಂದ ಗೋಕರ್ಣಕ್ಕೆ ತೆರಳುವಾಗ ಈ ದುರ್ಘಟನೆ ಸಂಭವಿಸಿದೆ‌

***

***

About the author

Adyot

Leave a Comment