ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡ ಜಿಲ್ಲೆಯ ಕಾರವಾರದ ಎಂ.ಜಿ ರಸ್ತೆಯಲ್ಲಿರುವ ಜಿಲ್ಲಾ ಪಂಚಾಯತ ಹಿಂದುಗಡೆ ಇರುವ ಅಭಿಲೇಖಾಲಯದ ಮೂರಂತಸ್ತಿನ ಕಟ್ಟಡಕ್ಕೆ ಶನಿವಾರ ಬೆಳಿಗ್ಗೆ 9 ಗಂಟೆಯ ಸುಮಾರಿಗೆ ವಿದ್ಯುತ್ ಷಾರ್ಟ ಸೆರ್ಕ್ಯೂಟ್ ನಿಂದ
ಬೆಂಕಿ ವ್ಯಾಪಸಿದೆ ಎಂದು ತಿಳಿದು ಬಂದಿದೆ.
ಕಟ್ಟಡದ ಕೆಳಭಾಗದಲ್ಲಿ ಪೀಠೋಪಕರಣಗಳು,ಕಚೇರಿಯ ದಾಖಲೆಗಳು ಸಂಪೂರ್ಣ ಬೆಂಕಿಗಾಹುತಿಯಾಗಿದ್ದು
ಮೇಲ್ಬಾಗದ ಕಟ್ಟಡಕ್ಕೂ ಬೆಂಕಿ ಆವರಿಸಿದ್ದು ಸಾಕಷ್ಟು ಹಾನಿಯಾಗಿದೆ. ಮಹತ್ವದ ದಾಖಲೆಗಳು ನಾಶವಾಗಿರುವ ಸಾಧ್ಯತೆ ಇದೆ
ಸ್ಥಳಕ್ಕೆ ಅಗ್ನಿ ಶಾಮಕದಳದ ಸಿಬ್ಬಂದಿಗಳು ಆಗಮಿಸಿ ಬೆಂಕಿ ನಂದಿಸಿದ್ದಾರೆ.
ಸ್ಥಳಕ್ಕೆ ಜಿಲ್ಲಾಧಿಕಾರಿ ಮುಲ್ಲೈಮುಗಿಲನ್,ಸಿಇಒ ಪ್ರಿಯಾಂಗ ಎಂ. ಸೇರಿದಂತೆ ಹಿರಿಯ ಅಧಿಕಾರಿಗಳು ಭೇಟಿ ನೀಡಿದ್ದಾರೆ.