ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡ ಜಿಲ್ಲೆಯ ಕಾರವಾರದಲ್ಲಿ ಬುಧವಾರ ಜಿಲ್ಲಾಧಿಕಾರಿ ಡಾ.ಹರೀಶಕುಮಾರ ಅಧ್ಯಕ್ಷತೆಯಲ್ಲಿ ಹಬ್ಬ ಹರಿದಿನಗಳ ಸಂದರ್ಭದಲ್ಲಿ ಅನಧಿಕೃತ ಪ್ರಾಣಿ ಹತ್ಯೆ,ಜಾನುವಾರುಗಳ ಸಾಗಣಿಕೆ ತಡೆಗಟ್ಟುವ ನಿಟ್ಟಿನಲ್ಲಿ ಸಭೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಡಾ.ಹರೀಶಕುಮಾರ,
ಕರ್ನಾಟಕ ಗೋವಧೆ ಪ್ರತಿಬಂಧಕ ಅಧಿನಿಯಮ 1964 ಅನ್ವಯ ಯಾವುದೇ ಜಾನುವಾರುಗಳನ್ನು ಒಂದು ಸ್ಥಳದಿಂದ
ಇನ್ನೊಂದು ಸ್ಥಳಕ್ಕೆ ಸಾಗಾಟ ಮಾಡುವಾಗ ಪಶುವೈದ್ಯರಿಂದ ಅಧಿಕೃತ ಪ್ರಮಾಣ ಪತ್ರ ಇರಬೇಕಾಗುತ್ತದೆ ಹಾಗೂ ಪ್ರತಿಯೊಂದು ಜಾನುವಾರ ಸಾಗಾಟ ಮಾಡುವಾಗ ವಾಹನದಲ್ಲಿ
ಸಾಕಷ್ಟು ಸ್ಥಳಾವಕಾಶ ಇರಬೇಕಾಗುತ್ತದೆ.ಪ್ರಾಣಿಹಿಂಸೆ ಪ್ರತಿಬಂಧಕ ಅಧಿನಿಯಮ 1960ರ ಪ್ರಕಾರ ಯಾವುದೇ ಆಕಳು, ಆಕಳು ಕರುಗಳನ್ನು ರಾಜ್ಯದಲ್ಲಿ ವಧೆ ಮಾಡತಕ್ಕದ್ದಲ್ಲ ಅಥವಾ ವಧೆಗಾಗಿ ಹೊರ ರಾಜ್ಯಕ್ಕೆ ಸಾಗಾಣಿಕೆ ಮಾಡುವುದನ್ನು ನಿಷೇಧಿಸಲಾಗಿದೆ ಎಂದು ಹೇಳಿದ ಜಿಲ್ಲಾಧಿಕಾರಿಗಳು ಅನಧಿಕೃತವಾಗಿ ಜಾನುವಾರುಗಳ ಸಾಗಾಣಿಕೆ, ವಧೆ ಪ್ರಕರಣಗಳು ಕಂಡು ಬಂದಲ್ಲಿ ಸೂಕ್ತ ಕಾನೂನುಕ್ರಮ ಕೈಗೊಳ್ಳಲು ಪೊಲೀಸ್ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ರೋಶನ್, ಪಶುಸಂಗೋಪನಾ ಇಲಾಖೆಯ ಉಪನಿರ್ದೇಶಕರಾದ ಡಾ.ನಂದಕುಮಾರ ಪೈ ಹಾಗೂ ಇತರರು ಉಪಸ್ಥಿತರಿದ್ದರು.
——-
ಜಾನುವಾರು ಸಾಗಣಿಕೆ ಮಾಡಲು ಏನು ಮಾಡಬೇಕು?
ಜಾನುವಾರುಗಳನ್ನು ಕೇವಲ ಆಹಾರಕ್ಕಾಗಿ ಮಾತ್ರ ಉಪಯೋಗಿಸುವುದಿಲ್ಲ ಕೃಷಿ ಕೆಲಸಗಳಿಗೆ,ಹೈನುಗಾರಿಕೆಗೂ ಜಾನುವಾರುಗಳು ಅವಶ್ಯಕತೆ ಇರುತ್ತದೆ ಇಂತಹ ಸಮಯದಲ್ಲಿ ಜಾನುವಾರುಗಳ ಸಾಗಣಿಕೆ ಮಾಡಲು ಏನು ಮಾಡಬೇಕು ಎಂದು ಬಹಳಷ್ಟು ಜನರಿಗೆ ತಿಳಿದಿಲ್ಲ.
ಈ ಪ್ರಮಾಣ ಪತ್ರವನ್ನು ಎಲ್ಲಿ ಮಾರಾಟ ಮಾಡಲಾಗುತ್ತದೆಯೋ
ಅಲ್ಲಿಯ ಪಶುವೈದ್ಯರು ನೀಡುತ್ತಾರೆ.
ಪ್ರಮಾಣ ಪತ್ರ ಪಡೆಯಲು ಅರ್ಜಿ ಭರ್ತಿ ಮಾಡಬೇಕು
ಖರೀದಿದಾರನ ಹಾಗೂ ಮಾರಾಟಗಾರನ ಹೆಸರು,
ಆಧಾರ ನಂಬರ್,ಮೊಬೈಲ್ ನಂಬರ್,ಎಲ್ಲಿಂದ ಎಲ್ಲಿಗೆ ಹೋಗುವುದು, ಹೋಗುವ ಮಾರ್ಗ,ವಾಹನದ ನಂಬರ್,ಚಾಲಕನ ಮಾಹಿತಿ ಇತ್ಯಾದಿ ಮಾಹಿತಿಯುಳ್ಳ ಅರ್ಜಿಯಲ್ಲಿ ತುಂಬಿ ಸಕಾಲದಲ್ಲಿ ಸಲ್ಲಿಸಿದರೆ ಮೂರು ದಿನಗಳ ಒಳಗೆ ಪ್ರಮಾಣ ಪತ್ರ ಸಿಗುವುದು.ಪ್ರಮಾಣ ಪತ್ರ ಇಲ್ಲದೆ ಯಾವುದೇ ಉದ್ದೇಶಕ್ಕಾಗಿ ಜಾನುವಾರು ಸಾಗಾಟ ಮಾಡಿದರೂ ಅದು ಅನಧಿಕೃತವಾಗಿರುತ್ತದೆ ಎಂದು ಪಶುಸಂಗೋಪನಾ ಇಲಾಖೆಯ ಉಪನಿರ್ದೇಶಕ ಡಾ.ನಂದಕುಮಾರ ಪೈ ಆದ್ಯೋತ್ ನ್ಯೂಸ್ ಗೆ ಮಾಹಿತಿ ನೀಡಿದ್ದಾರೆ.