ಉತ್ತರಕನ್ನಡ ಜಿಲ್ಲೆಯ ಘಟ್ಟದ ಮೇಲಿನ 7 ತಾಲೂಕಿನಲ್ಲಿ ರವಿವಾರ ಗ್ರಾಪಂ ಚುನಾವಣೆ

ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡ ಜಿಲ್ಲೆಯ ಘಟ್ಟ ಮೇಲಿನ ಏಳು ತಾಲೂಕಿನ ಗ್ರಾಪಂ ಚುನಾವಣೆ ರವಿವಾರ ನಡೆಯಲಿದೆ‌.
3452 ಅಭ್ಯರ್ಥಿಗಳು ಕಣದಲ್ಲಿದ್ದು 3,98,782 ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ. ಒಟ್ಟೂ 3763 ಸಿಬ್ಬಂದಿಗಳು ಕರ್ತವ್ಯ ನೆರವೇರಿಸಲು ಸಜ್ಜಾಗಿದ್ದಾರೆ ಕೋವಿಡ್ ಹಿನ್ನಲೆಯಲ್ಲಿ 802 ಆರೋಗ್ಯ ಸಿಬ್ಬಂದಿಗಳನ್ನು ಮತ್ತು 792 ಪೊಲೀಸ್ ಸಿಬ್ಬಂದಿಗಳನ್ನು ಮತಗಟ್ಟೆಗಳಿಗೆ ನಿಯೋಜನೆ ಮಾಡಲಾಗಿದೆ.
ಶಿರಸಿಯಲ್ಲಿ 857 ಅಭ್ಯರ್ಥಿಗಳು ಕಣದಲ್ಲಿದ್ದು,102892 ಮತದಾರರಿದ್ದಾರೆ.163 ಮತಗಟ್ಟೆ ಇದೆ ಸೂಕ್ಷ್ಮ ಮತಗಟ್ಟೆ31 ಅತಿ ಸೂಕ್ಷ್ಮ ಮತಗಟ್ಟೆ26 ಇದೆ ಮತ ಏಣಿಕೆ ಕೇಂದ್ರವನ್ನು ಮಾರಿಕಾಂಬಾ ಹೈಸ್ಕೂಲ್‍ಲ್ಲಿ ಮಾಡಲಾಗಿದೆ.
ಸಿದ್ದಾಪುರದಲ್ಲಿ 620 ಅಭ್ಯರ್ಥಿಗಳು ಕಣದಲ್ಲಿದ್ದು 71826 ಮತದಾರರಿದ್ದಾರೆ 125 ಮತಗಟ್ಟೆಗಳಿದ್ದು 24 ಸೂಕ್ಷ್ಮ ಮತಗಟ್ಟೆ ಇದೆ ಮತ ಏಣಿಕೆ ಕೇಂದ್ರವನ್ನು ಹಾಳದಕಟ್ಟಾ ಸರಕಾರಿ ಪ್ರೌಢಶಾಲೆಯಲ್ಲಿ ಮಾಡಲಾಗಿದೆ.
ಯಲ್ಲಾಪುರದಲ್ಲಿ 416 ಅಭ್ಯರ್ಥಿಗಳು ಕಣದಲ್ಲಿದ್ದು 50503 ಮತದಾರರಿದ್ದಾರೆ.97 ಮತಗಟ್ಟೆಗಳಿದ್ದು 14 ಸೂಕ್ಷ್ಮ ಮತ್ತು 7 ಅತಿಸೂಕ್ಷ್ಮ ಮತಗಟ್ಟೆ ಇದೆ. ಮತ ಏಣಿಕೆಯನ್ನು ವಿಶ್ವದರ್ಶನ ಎಜುಕೇಷನ್ ಸೊಸೈಟಿ ಶಾಲೆಯಲ್ಲಿ ಮಾಡಲಾಗಿದೆ.

ಮುಂಡಗೋಡದಲ್ಲಿ 527 ಅಭ್ಯರ್ಥಿಗಳು ಕಣದಲ್ಲಿದ್ದು 58076 ಮತದಾರರಿದ್ದಾರೆ 91 ಮತಗಟ್ಟೆಗಳಿದ್ದು 12 ಸೂಕ್ಷ್ಮ, 10 ಅತಿಸೂಕ್ಷ್ಮ, ಮತಗಟ್ಟೆ ಇದೆ ಮತ ಏಣಿಕೆಯನ್ನು ಸರಕಾರಿ ಪದವಿಪೂರ್ವ ಕಾಲೇಜನಲ್ಲಿ ಮಾಡಲಾಗಿದೆ.
ಹಳಿಯಾಳದಲ್ಲಿ 500 ಅಭ್ಯರ್ಥಿಗಳು ಕಣದಲ್ಲಿದ್ದು 65275 ಮತದಾರರಿದ್ದಾರೆ. 104 ಮತಗಟ್ಟೆಗಳಿದ್ದು 18 ಸೂಕ್ಷ್ಮ 12 ಅತಿಸೂಕ್ಷ್ಮ ಮತಗಟ್ಟೆ ಇದೆ. ಮತ ಏಣಿಕೆಯನ್ನು ಹವಗಿ ಸರಕಾರಿ ಪ್ರಥಮದರ್ಜೆ ಕಾಲೇಜ್‍ನಲ್ಲಿ ಮಾಡಲಾಗಿದೆ.
ದಾಂಡೇಲಿಯಲ್ಲಿ 111 ಅಭ್ಯರ್ಥಿಗಳು ಕಣದಲ್ಲಿದ್ದು 10047 ಮತದಾರರಿದ್ದಾರೆ.17 ಮತಗಟ್ಟೆಗಳಿದ್ದು 1 ಸೂಕ್ಷ್ಮ, 3 ಅತಿ ಸೂಕ್ಷ್ಮಮತಗಟ್ಟೆ ಇದೆ. ಮತ ಏಣಿಕೆಯನ್ನು ಜನತಾ ವಿದ್ಯಾಲಯದಲ್ಲಿ ಮಾಡಲಾಗಿದೆ.
ಜೊಯಿಡಾದಲ್ಲಿ 421 ಅಭ್ಯರ್ಥಿಗಳು ಕಣದಲ್ಲಿದ್ದು 40163 ಮತದಾರರಿದ್ದಾರೆ. 67 ಮತಗಟ್ಟೆಗಳಿದ್ದು 9 ಸೂಕ್ಷ್ಮ 14 ಅತಿ ಸೂಕ್ಷ್ಮ ಮತಗಟ್ಟೆ ಇದೆ ಮತ ಏಣಿಕೆಯನ್ನು ಸರಕಾರಿ ಪಾಲಿಟೆಕ್ನಿಕ್ ಕಾಲೇಜ್‍ನಲ್ಲಿ ಮಾಡಲಾಗಿದೆ.

******
ಸಿದ್ದಾಪುರ ತಾಲೂಕಿನ 23 ಗ್ರಾಪಂ ಚುನಾವಣೆಗೆ ಸಿದ್ದತೆ
ತಾಲೂಕಿನ 23 ಗ್ರಾಪಂಗಳಿಗೆ ರವಿವಾರ ನಡೆಯಲಿರುವ ಚುನಾವಣೆಗೆ ಸ್ಥಳೀಯ ಆಡಳಿತ ಸಂಪೂರ್ಣವಾಗಿ ಸಜ್ಜಾಗಿದ್ದು ಶನಿವಾರ ಮತಗಟ್ಟೆ ಸಿಬ್ಬಂದಿಗಳನ್ನು ಮತಪೆಟ್ಟಿಗೆಗಳನ್ನು,ಮತದಾನದ ಸಾಮಗ್ರಿಗಳನ್ನು ಕಳುಹಿಸುವ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಲಾಗಿದೆ.

ಪಟ್ಟಣದ ಹಾಳದಕಟ್ಟಾ ಸರಕಾರಿ ಪ್ರೌಢಶಾಲೆಯಲ್ಲಿ ಗ್ರಾಪಂ ಚುನಾವಣೆಯ ಕೆಲಸ-ಕಾರ್ಯ ನಡೆಲು ಅನುಕೂಲ ಕಲ್ಪಿಸಲಾಗಿದೆ. ಇಲ್ಲಿಯೇ ಮತ ಏಣಿಕೆಯೂ ನಡೆಯಲಿದೆ.
23 ಗ್ರಾಪಂನ 223 ಸ್ಥಾನಕ್ಕೆ ನಡೆಯಲಿರುವ ಚುನಾವಣೆಯಲ್ಲಿ 620 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಒಟ್ಟೂ 125 ಮತಗಟ್ಟೆಗಳಿದ್ದು 150 ಪೊಲೀಸ್ ಸಿಬ್ಬಂದಿಗಳೂ ಸೇರಿದಂತೆ 840 ಸಿಬ್ಬಂದಿಗಳನ್ನು ಆಯೋಜಿಸಲಾಗಿದೆ. ದೊಡ್ಮನೆ ಗ್ರಾಪಂನ ಕುಡೆಗೋಡು (ಮತಗಟ್ಟೆಸಂಖ್ಯೆ105) ಅವಿರೋಧ ಆಯ್ಕೆ ನಡೆದಿದೆ.ಅತಿಸೂಕ್ಷ್ಮ ಮತಗಟ್ಟೆಗಳಿಲ್ಲ ಆದರೆ 24 ಸೂಕ್ಷ್ಮ ಮತಗಟ್ಟೆಗಳಿದೆ ಈ ಮತಗಟ್ಟೆಗಳಿಗೆ ಓರ್ವ ಹೆಡ್ ಕಾನ್‍ಸ್ಟೇಬಲ್ ಹಾಗೂ ಓರ್ವ ಪೊಲೀಸ್‍ರನ್ನು ನಿಯಮಿಸಲಾಗಿದೆ. ಮತಗಟ್ಟೆಗೆ ಸಿಬ್ಬಂದಿಗಳನ್ನು ಸಾಗಿಸಲು 15 ಸಾರಿಗೆ ಸಂಸ್ಥೆಯ ಬಸ್,13 ಜೀಪ್,16 ಟೆಂಪೋಗಳನ್ನು ವ್ಯವಸ್ಥೆ ಮಾಡಲಾಗಿದೆ. 144 ಅಂಚೆ ಮತದಾರರ ನೊಂದಾವಣೆಯಾಗಿದ್ದು ಶಾಲೆಯ ಸಾಂಸ್ಕøತಿಕ ಕಾರ್ಯಕ್ರಮ ನಡೆಸುವ ಸಭಾಭವನದಲ್ಲಿ ಮತದಾನಕ್ಕೆ ಅನುಕೂಲ ಕಲ್ಪಿಸಲಾಗಿದೆ ಎಂದು ತಹಸೀಲ್ದಾರ ಮಂಜುಳಾ ಭಜಂತ್ರಿ ಮಾಹಿತಿ ನೀಡಿದ್ದಾರೆ.

ತಾಲೂಕಿನ ಗ್ರಾಪಂ ಚುನಾವಣೆಗೆ ಒಟ್ಟೂ ಪಿಆರ್‍ಓ-138,ಓಪಿಆರ್‍ಓ-138,ಪಿಓ-276,ಡಿ ದರ್ಜೆ-138 ನೇಮಕ ಮಾಡಲಾಗಿದೆ. ಪ್ರತಿಮತಗಟ್ಟೆಗೆ ಪಿಆರ್‍ಓ-1,ಎಪಿಆರ್‍ಓ-1,ಪಿಓ-2 ಡಿದರ್ಜೆ-1 ಹಾಗೂ ಅಗತ್ಯವಿದ್ದಷ್ಟು ಪೊಲೀಸ್ ಸಿಬ್ಬಂದಿಗಳನ್ನು ಆಯೋಜಿಸಲಾಗುವುದು ತಾಲೂಕಿನಲ್ಲಿ ಒಟ್ಟೂ 12 ಜನರು ಕೋವಿಡ್ ಸೊಂಕಿತರಿದ್ದು ಅವರು ಮತದಾನ ಮಾಡುವುದರ ಬಗ್ಗೆ ಇನ್ನೂ ಮಾಹಿತಿ ಬಂದಿಲ್ಲ ಅವರು ಮತದಾನ ಮಾಡುವುದಾದರೆ ಎಲ್ಲಾ ರೀತಿಯ ಸುರಕ್ಷತೆಯನ್ನು ಒದಗಿಸಿ ಮತದಾನಕ್ಕೆ ಅವಕಾಶ ನೀಡಲಾಗುವುದು ಎಂದು ಮಂಜುಳಾ ಭಜಂತ್ರಿ ತಿಳಿಸಿದ್ದಾರೆ.
ತಾಲೂಕಿನಲ್ಲಿ ಅತಿಸೂಕ್ಷ್ಮ ಮತಗಟೆ ಇಲ್ಲ ಆದರೆ 24 ಸೂಕ್ಷ್ಮ ಮತಗಟ್ಟೆಗಳನ್ನು ಗುರುತಿಸಲಾಗಿದೆ ಅಲ್ಲಿ ಪೊಲೀಸ್ ಸಿಬ್ಬಂದಿಗಳ ಜೊತೆಗೆ ಹೆಡ್‍ಕಾನಸ್ಟೇಬಲ್‍ಗಳನ್ನು ನೇಮಕ ಮಾಡಲಾಗಿದೆ 75 ಪೊಲೀಸ್ ಸಿಬ್ಬಂದಿ ಹಾಗೂ 50 ಹೋಂಗಾರ್ಡ್‍ಗಳನ್ನು ನಿಯೋಜಿಸಲಾಗಿದೆ. ಚುನಾವಣೆಗೆ ಸಂಬಂದಿಸಿದಂತೆ ಎಲ್ಲಾ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಲಾಗಿದೆ. ಯಾವುದೇ ಅಹಿತಕಾರಿ ಘಟನೆ ನಡೆಯದಂತೆ ಚುನಾವಣೆ ನಡೆಸಲಾಗುವುದು. ಪಿ‌.ಎಸ್.ಐ ಮಂಜುನಾಥ ಬಾರ್ಕಿ ತಿಳಿಸಿದ್ದಾರೆ

ಗ್ರಾಪಂ ಚುನಾವಣೆಗೆ ಹೊರಟಿರುವ ಸಾರಿಗೆ ಸಂಸ್ಥೆಯ ಸಿಬ್ಬಂದಿಗಳಿಗೆ ಅಂಚೆ ಮತದಾನಕ್ಕೆ ಅವಕಾಶ ಕಲ್ಪಿಸಿಲ್ಲ, ಎಷ್ಟೋ ಸಿಬ್ಬಂದಿಗಳು ಗ್ರಾಮೀಣ ಪ್ರದೇಶದವರಾಗಿದ್ದು ಅವರಿಗೆ ಅಂಚೆ ಮತದಾನಕ್ಕೆ ಅವಕಾಶ ಕಲ್ಪಿಸಬೇಕಿತ್ತು ತಮ್ಮ
ಮತದಾನದ ಹಕ್ಕನ್ನು ಕಸಿಯಲಾಗಿದೆ ಎಂದು ಸಾರಿಗೆ ನೌಕರರು ದೂರಿದ್ದಾರೆ.

About the author

Adyot

Leave a Comment