ಕಾರವಾರ : ಕೇಂದ್ರ ಸರ್ಕಾರದ ಕಾರ್ಮಿಕ ನೀತಿಯನ್ನು ವಿರೋಧಿಸಿ ಕರೆ ನೀಡಲಾಗಿದ್ದ ಅಖಿಲ ಭಾರತ ಮುಷ್ಕರಕ್ಕೆ ಜಿಲ್ಲೆಯಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಜಿಲ್ಲೆಯಲ್ಲಿ ಎಂದಿನಂತೆ ವ್ಯಾಪಾರ ವ್ಯವಹಾರಗಳು ಸಾಗಿದ್ದು, ಶಾಲಾ ಕಾಲೇಜುಗಳು ಸಹಜವಾಗಿ ನಡೆದಿವೆ. ಬಸ್ ಹಾಗೂ ವಾಹನ ಸಂಚಾರ ಕೂಡ ಎಂದಿನಂತೆ ಸಂಚಾರ ನಡೆಸಿವೆ. ಬಂದ್ ಪ್ರಯುಕ್ತ ಕಾರವಾರದಲ್ಲಿ ಸಿಐಟಿಯು ಕಾರ್ಯದರ್ಶಿ ಯಮುನಾ ಗಾಂವ್ಕರ ನೇತೃತ್ವದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಯಿತು.