ಆದ್ಯೋತ್ ಸುದ್ದಿನಿಧಿ:
ಬಾಗಲಕೋಟೆ ಜಿಲ್ಲೆಯ ಐಹೊಳೆ ಸಮೀಪದ ಸುಕ್ಷೇತ್ರ ಸಿದ್ಧನಕೊಳ್ಳದಲ್ಲಿ ಪ್ರಾಧ್ಯಾಪಕರು,ಸಾಹಿತಿ,ಚಲನಚಿತ್ರ ಸಹ ನಿರ್ದೇಶಕ, ಚಲನಚಿತ್ರ ಪ್ರಚಾರಕರಾದ ಡಾ.ಪ್ರಭು ಅ ಗಂಜಿಹಾಳ ಬರೆದ “ನಮ್ಮ ಕನ್ನಡ ಶಾಲೆ” ಮಕ್ಕಳ ಕವನ ಸಂಕಲನವನ್ನು ಕುಷ್ಟಗಿ ಶಾಸಕರಾದ ಅಮರೇಗೌಡ ಭಯ್ಯಾಪೂರ ಬಿಡುಗಡೆ ಮಾಡಿದರು.
ಸುಕ್ಷೇತ್ರ ಸಿದ್ಧನಕೊಳ್ಳದಲ್ಲಿ ಶ್ರೀ ಸಿದ್ಧಶ್ರೀ ಗ್ರಾಮಾಭಿವೃದ್ಧಿ ಮತ್ತು ಸಮಾಜ ಸೇವಾಶ್ರಮ ಶ್ರೀ ಕ್ಷೇತ್ರ ಸಿದ್ಧನಕೊಳ್ಳ ಸಹಯೋಗದಲ್ಲಿ ಸಿದ್ಧಶ್ರೀ ಉತ್ಸವ 2021ರ ನಿಮಿತ್ತ ಡಾ.ಶಿವಕುಮಾರ ಸ್ವಾಮಿಗಳ ಸಾನಿಧ್ಯದಲ್ಲಿ ನಡೆದ ಸಿದ್ಧಶ್ರೀ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕವನ ಸಂಕಲನ ಬಿಡುಗಡೆ ಮಾಡಿದರು.
ಈ ಸಂದರ್ಭದಲ್ಲಿ 2021 ನೇ ಸಾಲಿನ ಸಿದ್ಧಶ್ರೀ ರಾಷ್ಟ್ರೀಯ ಪ್ರಶಸ್ತಿ ಪಡೆದ ಭಾರತೀಯ ಚಿತ್ರರಂಗದ ಬಹುಭಾಷಾ ಚಲನಚಿತ್ರ ನಿರ್ಮಾಪಕ ಆರ್.ವಿ.ಗುರುಪಾದಮ್ ,ಮಾಜಿ ಸಚಿವ ನಾಗರಾಜ್ ಶೆಟ್ಟಿ, ಮಾಜಿ ಸಂಸದ ಐ.ಜಿ.ಸನದಿ, ಗುಳೇದಗುಡ್ಡ ಮರಡಿ ಮಠದ ಕಾಡಶಿದ್ದೇಶ್ವರ ಶಿವಾಚಾರ್ಯರು, ಕಮತಗಿ ಹಿರೇಮಠದ ಶ್ರೀ ಶಿವಕುಮಾರ ಶಿವಾಚಾರ್ಯ ಸ್ವಾಮಿಗಳು ,ಜಿ.ಪಂ ಅಧ್ಯಕ್ಷೆ ಬಾಯಕ್ಕ ಮೇಟಿ, ಜಿ.ಪಂ.ಮಾಜಿ ಅಧ್ಯಕ್ಷೆ ವೀಣಾ ಕಾಶಪ್ಪನವರ,ನಬಿ ಅನಗವಾಡಿ, ಪ್ರವೀಣ ಪತ್ರಿ, ಭಾವೈಕ್ಯ ಬ್ರಹ್ಮ ನಿರ್ಮಾಪಕರು ವಿಜಯಕುಮಾರ ಗದ್ದಿ, ಚಲನಚಿತ್ರ ಛಾಯಾಗ್ರಾಹಕ ಶಿವಶರಣ ಸುಗ್ನಳ್ಳಿ,ಸಂಗಮೇಶ ಹುದ್ದಾರ ಮೊದಲಾದ ಗಣ್ಯರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಪ್ರಭು ಮಾಲಗಿತ್ತಿ ನಿರೂಪಿಸಿದರು.
ನಮ್ಮ ಕನ್ನಡ ಶಾಲೆ ಮಕ್ಕಳ ಕವನ ಸಂಕಲನವನ್ನು ಚಿಲಿಪಿಲಿ ಪ್ರಕಾಶನ ಧಾರವಾಡ ಹೊರತಂದಿದ್ದು ಒಟ್ಟು 75 ಕವನಗಳು ಇದರಲ್ಲಿದ್ದು ಮಕ್ಕಳ ಮನಸ್ಸನ್ನು ಸೆಳೆಯಬಲ್ಲವಾಗಿವೆ.