ಶಿರಸಿಯಲ್ಲಿ ಕೆಡಿಸಿಸಿ ಬ್ಯಾಂಕ್ ಶತಮಾನೋತ್ಸವ ಕಾರ್ಯಕ್ರಮ

ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡ ಜಿಲ್ಲೆಯ ಶಿರಸಿಯಲ್ಲಿ ಜಿಲ್ಲೆಯ ಹೆಮ್ಮೆಯ ಸಹಕಾರಿ ಬ್ಯಾಂಕ್ ಆಗಿರುವ ಕೆಡಿಸಿಸಿ ಬ್ಯಾಂಕ್ ನ ಶತಮಾನೋತ್ಸವ ಕಾರ್ಯಕ್ರಮ ಜರುಗಿತು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಹಕಾರಿ ಸಚೀವ ಎಸ್.ಟಿ.ಸೋಮಶೇಖರ ಮಾತನಾಡಿ,
ಹಿಂದಿನ ಕಾಂಗ್ರೆಸ್ ಸರ್ಕಾರ ನನಗೆ ಮಂತ್ರಿ ಸ್ಥಾನ ಕೊಡಿತ್ತಿಲ್ಲ ಈ ಸರ್ಕಾರವನ್ನ ತೆಗಿಬೇಕು ಅಂತ ಶಿವರಾಮ್ ಹೆಬ್ಬಾರ್
ನನ್ನ ಹಾಗೂ ಭೈರತಿ ಬಸವರಾಜ ಹತ್ತಿರ ಹೇಳುತ್ತಿದ್ದರು.ಅದೇ ಪ್ರಕಾರವಾಗಿ ಸರಕಾರ ಬಿದ್ದು ಈಗ ನಾವು ಮಂತ್ರಿಗಳಾಗಿದ್ದೇವೆ
ಕಾಂಗ್ರೆಸ್ ನಲ್ಲಿದ್ದ ನಮ್ಮನ್ನ ಬಿಜೆಪಿಗೆ ಕರೆತರುವಲ್ಲಿ ಶಿವರಾಮಹೆಬ್ಬಾರರ ಪ್ರಯತ್ನ ಇದೆ. ಅಂದು ನಾವೆಲ್ಲ ಬಾಗಿಲು ಹಾಕಿಕೊಂಡು ಕಾಲ ಕಳೆದಿದ್ದೇವೆ ಅಂತ ಬಿಜೆಪಿಗೆ ವಲಸೆ ಬಂದ ಸಂದರ್ಭದ ಚಿತ್ರಣವನ್ನು ತೆರೆದಿಟ್ಟರು.

ಮೈಸೂರು,ಮಂಡ್ಯ,ಶಿವಮೊಗ್ಗ,ಗುಲ್ಬರ್ಗ ಡಿಸಿಸಿ ಬ್ಯಾಂಕ್ ಗಳಲ್ಲಿ ಸಮಸ್ಯೆ ಇದ್ದು ಅದನ್ನು ಸರಿಪಡಿಸಲಾಗಿದೆ. ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಸಹಕಾರಿ ತರಬೇತಿ ಕೇಂದ್ರಕ್ಕೆ ಅನುಮೋದನೆ ನೀಡುವಂತೆ ಮನವಿ ಮಾಡಿದ್ದಾರೆ ಇದಕ್ಕೆ ಅನುಮೋದನೆ ನೀಡುತ್ತೆನೆ.ರಾಜ್ಯದ21 ಡಿಸಿಸಿ ಬ್ಯಾಂಕಗಳಲ್ಲಿ ಕೆಡಿಸಿಸಿ ಬ್ಯಾಂಕ್ ನಂ1ರಲ್ಲಿದೆ ಸಾಲ ನೀಡುವುದಲ್ಲದೆ ವಸೂಲಾತಿಯಲ್ಲೂ ಅಗ್ರಸ್ಥಾನವನ್ನು ಪಡೆದಿದೆ ಎಂದು ಹೇಳಿದರು.

ಸ್ಫೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ, ಡಿಸಿಸಿ
ಬ್ಯಾಂಕ ನಮ್ಮೆಲ್ಲರ ದ್ವನಿಯಾಗಿ ಕೆಲಸ ಮಾಡುತ್ತಿದೆ. ಉತ್ತರಕನ್ನಡ ಜಿಲ್ಲೆಯ ಮೂಲಕ ಸಹಕಾರಿ ಕ್ಷೇತ್ರದ ಮಹತ್ವ ಈ ಬ್ಯಾಂಕ ತೋರಿಸಿಕೊಟ್ಟಿದೆ. ಜಿಲ್ಲೆಯ ಅನೇಕ ಸಹಕಾರಿ ಸಂಘಗಳು ಶತಮಾನೋತ್ಸವ ಆಚರಿಸಿಕೊಳ್ಳುತ್ತಿದೆ. ಇದು ಉತ್ತರಕನ್ನಡ ಜಿಲ್ಲೆಯ ಜನರು ಸಹಕಾರಿ‌ಕ್ಷೇತ್ರದ ಅಡಿಯಲ್ಲಿ ಎಷ್ಟರ ಮಟ್ಟಿಗೆ ತೊಡಗಿಸಿಕೊಂಡಿದ್ದೆವೆ ಎಂಬುದು ತಿಳಿಯುತ್ತದೆ.
ಎಂದು ಹೇಳಿದರು.

ಮೈಕ್ರೋ ಎ.ಟಿ.ಎಮ್ ಉದ್ಘಾಟನೆ ಮಾಡಿ ಮಾತನಾಡಿದ ಕೃಷಿಸಚೀವ ಬಿ.ಸಿ.ಪಾಟೀಲ, ಕೃಷಿಯು ಎಲ್ಲ ಕ್ಷೇತ್ರಗಳಿಗೂ ಮುಖ್ಯವಾಗಿದ್ದು ಆದ್ದರಿಂದ ಸಹಕಾರಿ ಕ್ಷೇತ್ರವು ಹೊರತಾಗಿಲ್ಲ.
ಈ ಭಾಗದಲ್ಲಿ ಕೃಷಿ ಬೆಳೆದಿದೆ.ಕೃಷಿಕ ಬೆಳೆದಿಲ್ಲ. ಗೇರು,ತೆಂಗು,ಅಡಿಕೆ‌ ಎಲ್ಲದಕ್ಕೂ ಮಾರುಕಟ್ಟೆ ದೊರೆತಾಗ ಕೃಷಿಕ ಬೆಳೆಯುತ್ತಾನೆ. ರೈತರೊಂದಿಗೆ ಒಂದು ದಿನ‌ ಎಂಬ ಕಾರ್ಯಕ್ರಮ ಆರಂಭ ಮಾಡಿದ್ದೆನೆ. ಯಲ್ಲಾಪುರದ ಕೈಗಡಿ ಗ್ರಾಮಕ್ಕೆ ದಿ.1ರಂದು ಬರುತ್ತನೆ.ಕೇಂದ್ರ ಸಚಿವರಾದ ಶೋಬಾ ಕರಂದ್ಲಾಜೆರವರು ಬರುತ್ತಾರೆ.ರೈತರು ಬಂದರೆ ಸಂವಾದ ಮಾಡಿ‌ಕೃಷಿಯಲ್ಲಿ ಬದಲಾವಣೆ ತರಲು ಪ್ರಯತ್ನಿಸುತ್ತೆನೆ. ಎಂದು ಹೇಳಿದರು.

ನಗರಾಭಿವೃದ್ಧಿ ಸಚೀವ ಭೈರತಿ ಬಸವರಾಜ,ಅಪೆಕ್ಸ್ ಬ್ಯಾಂಕ ಅಧ್ಯಕ್ಷ ಬೆಳ್ಳಿಪ್ರಕಾಶ,ಮಾಜಿ ಸಚೀವ ಆರ್.ವಿ.ದೇಶಪಾಂಡೆ
ದಕ್ಷಿಣಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ ಅಧ್ಯಕ್ಷ ಎಮ್.ಎನ್.ರಾಜೇಂದ್ರಕುಮಾರ ಮಾತನಾಡಿದರು.

ಕೆಡಿಸಿಸಿ ಬ್ಯಾಂಕ ಅಧ್ಯಕ್ಷ ಶಿವರಾಮ ಹೆಬ್ಬಾರ ಪ್ರಾಸ್ತಾವಿಕ ಮಾತನಾಡಿ,ಕೊವಿಡ್ ಕಾರಣದಿಂದ ಶತಮಾನೋತ್ಸವ ಕಾರ್ಯಕ್ರಮ ಎರಡು ವರ್ಷದ ನಂತರ ಮಾಡಬೇಕಾಯಿತು.1920 ರಲ್ಲಿ ಸ್ಥಾಪನೆಗೊಂಡ ಕೆಡಿಸಿಸಿ ಬ್ಯಾಂಕ್ 53 ಶಾಖೆ ಹೊಂದಿದೆ.ಶಿರಸಿಯಲ್ಲು ಮಹಿಳಾ ಶಾಖೆಯನ್ನು ಪ್ರಾರಂಭಿಸಲಾಗಿದೆ.ಮುಂಡಗೋಡ ತಾಲೂಕಿನ‌ ಪಾಳಾದಲ್ಲಿ ಶತಮಾನೋತ್ಸವ ಸಂದರ್ಭದಲ್ಲಿ ಹೊಸಶಾಖೆ ಪ್ರಾರಂಬಿಸಿದ್ದೆವೆ ಎಂದು ಹೇಳಿದರು.

About the author

Adyot

Leave a Comment