ವಿದ್ಯುತ್ ಇಲಾಖೆಯ ನೌಕರರಿಂದ ಸಾಂಕೇತಿಕ ಪ್ರತಿಭಟನೆ

ಆದ್ಯೋತ್ ಸುದ್ದಿನಿಧಿ:
ವಿದ್ಯುತ್ ಇಲಾಖೆಯನ್ನುಖಾಸಗೀಕರಣಗೊಳಿಸಲು ಹೊರಟಿರುವ ಕೇಂದ್ರಸರಕಾರದ ನಿರ್ಧಾರದ ವಿರುದ್ದ ವಿದ್ಯುತ್ ಇಲಾಖೆಯ ನೌಕರರು ಸೋಮವಾರ ಕಪ್ಪುಪಟ್ಟಿ ಧರಿಸಿ ಕರ್ತವ್ಯ ನಿರ್ವಹಿಸುವ ಮೂಲಕ ಸಾಂಕೇತಿಕ ಪ್ರತಿಭಟನೆ ನಡೆಸಿದರು
1930ರಲ್ಲಿ ಜರ್ಮಮಿಯಲ್ಲಿ ಈ ಆರ್ಥಿಕ ನೀತಿಯನ್ನು ಬಳಸಿಕೊಳ್ಳಲಾಗಿತ್ತು.1991ರಲ್ಲಿ ಭಾರತದಲ್ಲಿ ಹೊಸ ಆರ್ಥಿಕ ನೀತಿಯನ್ನು ಜಾರಿಗೆ
ತಂದಿತು.ಜಾಗತೀಕರಣ,ಉದಾರೀಕರಣ,ಖಾಸಗೀಕರಣ ಮುಂತಾದವು ಅಸ್ತಿತ್ವಕ್ಕೆ ಬಂದವು.
ಈ ಖಾಸಗೀಕರಣದ ಪರಿಣಾಮಗಳು
ಸರಕಾರಕ್ಕೆ ದೊರಕುವ ಲಾಭಾಂಶ ಕಡಿಮೆ ಖಾಸಗಿ ಸಂಸ್ಥೆಗಳಿಗೆ ಅಧಿಕವಾಗಿರುತ್ತದೆ.ಸಾರ್ವಜನಿಕ ವಸ್ತು ಹಾಗೂ ಸೇವೆಗಳು ಸರ್ಕಾರದ ಹಿಡಿತದಲ್ಲಿರಬೇಕು.ಕಾನೂನು ಆರೋಗ್ಯ ರಕ್ಷಣೆ ಶಿಕ್ಷಣ ಮತ್ತು ಮೂಲಸೌಕರ್ಯಗಳು ಸರ್ಕಾರದ ಅಧೀನದಲ್ಲಿ ಇರಬೇಕು ಅನ್ನುವದನ್ನು ಮರೆತು ಹೊಸ ಮಸೂದೆಯನ್ನು ಸರ್ಕಾರವು ರೂಪಿಸಿರುತ್ತದೆ.ಖಾಸಗೀ ಸಂಸ್ಥೆಗಳು ಲಾಭದ ಹಿತದೃಷ್ಟಿಯನ್ನು ಹೊಂದಿರುತ್ತವೆ.ಸಾರ್ವಜನಿಕ ಸೇವೆ ಮುಖ್ಯವಾಗಿರುವುದಿಲ್ಲ.ಖಾಸಗಿ ಸಂಸ್ಥೆಗಳ ಕಾರ್ಯದಕ್ಷತೆಗೆ ಅನುಗುಣವಾಗಿ ಯೋಜನೆಗಳನ್ನು ಸರ್ಕಾರ ರೂಪಿಸಬೇಕಾಗುತ್ತದೆ.ಇದರಿಂದ ಭ್ರಷ್ಟಾಚಾರ ಹೆಚ್ಚಾಗುತ್ತದೆ.
ಖಾಸಗೀಕರಣದಿಂದ ವಿದ್ಯುತ್ ಅಪಘಾತಕ್ಕೆ ಒಳಗಾದ ಅನೇಕ ನೌಕರರು ಹಾಗೂ ಗುತ್ತಿಗೆದಾರರು ಅರೆಕಾಲಿಕ ಸಿಬ್ಬಂದಿಗಳು ಕೆಲಸ ಕಳೆದುಕೊಳ್ಳುತ್ತಾರೆ.ವಿದ್ಯುತ್ ಇಲಾಖೆ ಎಂಬುದು ಸಾಮಾಜಿಕ ಆರ್ಥಿಕ ಮಹತ್ವದ ಒಂದು ಸೇವೆ.ಸೇವೆ ಎಂಬ ಮೂಲಸ್ವರೂಪ ಬದಲಾಗಿ ಅದು ಮಾರುಕಟ್ಟೆ ಪ್ರೇರಿತ ಲಾಭದ ಸರಕಾಗುತ್ತದೆ.ರೈತಬಾಂಧವರು ,ಬಡವರು, ಕೂಲಿಕರ್ಮಿಕರು,ಶ್ರಮಿಕರು, ದೀನದಲಿತರು ಇವರಿಗೆ ಸರ್ಕಾರ ದಿಂದ ದೊರೆಯುವ ಸಬ್ಸಿಡಿ ಯೋಜನೆಗಳು ಭಾಗ್ಯಜ್ಯೋತಿ, ಕುಟೀರಜ್ಯೋತಿ, ರೈತರಿಗೆ ದೊರೆಯುವ ಹಾಗೂ ಉದ್ದಿಮೆದಾರರು ಹಲವಾರು ಸಬ್ಸಿಡಿ ಯೋಜನೆಗಳಿಂದ ವಂಚಿತರಾಗುತ್ತಾರೆ.ಈ ಮೊದಲು ದೆಹಲಿ, ಓಡಿಸ್ಸಾ ,ಮುಂಬೈ ಗಳಲ್ಲಿ ರಿಲಯನ್ಸ,ಟಾಟಾ,ಆದಾನಿ ಯಂತಹ ಖಾಸಗಿ ಸಂಸ್ಥೆಗಳು ವಿದ್ಯುತ್ ಬಿಲ್ ಪಾವತಿಸದ ಕಾರಣ ಅವರ ಲೈಸೆನ್ಸ್ ರದ್ದು ಮಾಡಿರುವದನ್ನು ಸುಪ್ರೀಂಕೋರ್ಟ್ ಕೂಡ ಎತ್ತಿಹಿಡಿದಿರುತ್ತದೆ.ಸಮವರ್ತಿ ಪಟ್ಟಿಯಲ್ಲಿರುವ ವಿದ್ಯುತ್ ಕ್ಷೇತ್ರವನ್ನು ಕೇಂದ್ರಪಟ್ಟಿಗೆ ಸೇರಿಸುವ ಪ್ರಯತ್ನ ರಾಜ್ಯಗಳ ಹಿತಕ್ಕೆ ಧಕ್ಕೆಯುಂಟು ಮಾಡುತ್ತದೆ.ರಾಜ್ಯಸರ್ಕಾರಗಳು ಜನಸಾಮಾನ್ಯರಿಗೆ ನೀಡುತ್ತಿರುವ ಅನೇಕ ರಿಯಾಯಿತಿ(ಸಬ್ಸಿಡಿ) ಗಳು ಮರೆಯಾಗುತ್ತವೆ..ಈಗಾಗಲೇ ಇಂಧನ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿವರ್ಗ,ನೌಕರ ವರ್ಗ, ಕಾರ್ಮಿಕರು,ದಿನಗೂಲಿ ಕಾರ್ಮಿಕರು,ಗುತ್ತಿಗೆದಾರರು, ಶುಚಿಗಾರರುಗಳಿಗೆ ಖಾಸಗೀಕರಣವು ಮರಣಶಾಸನವಾಗುತ್ತದೆ.
ದಕ್ಷತೆಯ ಹೆಸರಿನಲ್ಲಿ ನೌಕರರನ್ನು ಶೋಷಣೆ ಗೊಳಪಡಿಸಲಾಗುತ್ತದೆ.ಲಾಭದ ಅಪೇಕ್ಷೆ ಇರುವುದರಿಂದ ಸಿಬ್ಬಂದಿಯ ಕಡಿತವನ್ನು ಮಾಡಲಾಗುತ್ತದೆ.ಇದರಿಂದ ಸಾವಿರಾರು ನೌಕರರು ತೊಂದರೆಗೆ ಒಳಗಾಗುತ್ತಾರೆ.ಇಲಾಖಾ ನೌಕರರಿಗೆ ಹಲವಾರು ಸೌಲಭ್ಯಗಳನ್ನು ಆರ್ಥಿಕ ಮಿತವ್ಯಯದ ಹೆಸರಿನಲ್ಲಿ ಕಡಿತಗೊಳಿಸುತ್ತಾರೆ.
ಇಂತಹ ಜನಸಾಮಾನ್ಯರಿಗೆ ಬೇಡವಾದ ಖಾಸಗೀಕರಣದಂತಹ ಹೊಸ ವಿದ್ಯುತ್ ನೀತಿ ನಮಗೆ ಬೇಡ ಇದನ್ನು ಎಲ್ಲರೂ ಒಕ್ಕೊರಲಿನಿಂದ ವಿರೋಧಿಸಬೇಕು ಎಂದು ಕವಿಪ್ರನಿ ಮತ್ತು ನೌಕರರ ಸಂಘ ಅಸ್ಸೋಸಿಯೇಶನ್ ಗಳ ಒಕ್ಕೂಟ ಕರೆಕೊಟ್ಟಿತ್ತು.
ಸಂಘದ ಅಧ್ಯಕ್ಷ ಟಿ.ಆರ್.ರಾಮಕೃಷ್ಣಯ್ಯ ಹಾಗೂ ಪ್ರಧಾನ ಕಾರ್ಯದರ್ಶಿ ಕೆ. ಬಲರಾಮ್ ಕರೆಯಂತೆ ರಾಜ್ಯಾದ್ಯಂತ ವಿದ್ಯುತ್ ನೌಕರರು ಕಪ್ಪುಪಟ್ಟಿ ಧರಿಸಿ ಸಾಂಕೇತಿಕ ಪ್ರತಿಭಟನೆ ನಡೆಸಿದರು.

ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರದಲ್ಲಿ ಹೆಸ್ಕಾಂ ನೌಕರರು ರವಿ ನಾಯ್ಕ ನೇತೃತ್ವದಲ್ಲಿ ಸಾಂಕೇತಿಕ ಪ್ರತಿಭಟನೆ ನಡೆಸಿದರು.

About the author

Adyot

Leave a Comment