ಆದ್ಯೋತ್ ನ್ಯೂಸ್ ಡೆಸ್ಕ್ : ಉತ್ತರ ಕನ್ನಡ ಜಿಲ್ಲೆಯಲ್ಲಿ ಮಂಗನಕಾಯಿಲೆಯ ಅಟ್ಟಹಾಸ ಮುಂದುವರೆದಿದ್ದು, ಸಿದ್ದಾಪುರ ತಾಲೂಕಿನಲ್ಲಿ ಇಂದೂ ಕೂಡ 5 ಪ್ರಕರಣ ಕಾಣಿಸಿಕೊಳ್ಳುವುದರೊಂದಿಗೆ, ಜನರ ಆತಂಕವನ್ನು ಇನ್ನಷ್ಟು ಹೆಚ್ಚಿಸಿದೆ.
ರವಿವಾರ ಒಂದೇ ದಿನ ಸಿದ್ದಾಪುರ ತಾಲೂಕಾ ವ್ಯಾಪ್ತಿಯಲ್ಲಿ 4 ಕೆ.ಎಫ್.ಡಿ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದವು. ಅದು ಮುಂದುವರೆದು ಇಂದೂ ಕೂಡ ಒಂದೇ ದಿನ 5 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಕೋರ್ಲಕೈ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲೇ ಈ 5 ಪ್ರಕರಣಗಳು ಪತ್ತೆಯಾಗಿದ್ದು ಅಲ್ಲಿನ ಜನರು ಮತ್ತಷ್ಟು ಆತಂಕ ಪಡುವಂತೆ ಮಾಡಿದೆ. ಇದರೊಂದಿಗೆ ಜಿಲ್ಲೆಯ ಸಿದ್ದಾಪುರ ತಾಲೂಕಾ ವ್ಯಾಪ್ತಿಯಲ್ಲೇ 32 ಕೆ.ಎಫ್.ಡಿ ಪ್ರಕರಣಗಳು ದೃಢಪಟ್ಟಿವೆ. ಕೋರ್ಲಕೈ ಆರೋಗ್ಯ ಕೇಂದ್ರಕ್ಕೆ ಬೆಳಗಾವಿ ಜಂಟಿ ನಿರ್ದೇಶಕರು ಭೇಟಿ ನೀಡಿದ್ದು, ಪರಿಸ್ಥಿತಿಯ ಅವಲೋಕನ ನಡೆಸಿದ್ದಾರೆ. ಸಂಜೆ ರಾಜ್ಯ ಆರೋಗ್ಯ ಮಹಾನಿರ್ದೇಶಕರ ಜೊತೆ ವಿಡಿಯೋ ಸಂವಾದ ನಡೆಯಲಿದ್ದು, ಮಂಗನಕಾಯಿಲೆಯ ಪರಿಸ್ಥಿತಿಗಳ ಬಗ್ಗೆ ಜಂಟಿ ನಿರ್ದೇಶಕರು ವರದಿ ಸಲ್ಲಿಸೋ ಸಾಧ್ಯತೆಯಿದೆ ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ.
🕵😲😲