ಸಿದ್ದಾಪುರದಲ್ಲಿ ಹೆಚ್ಚಾಗುತ್ತಿದೆ ಮಂಗನಖಾಯಿಲೆ: ಕೂಡಲೇ ಗಮನಹರಿಸಬೇಕಿದೆ ಸರ್ಕಾರ

ಆದ್ಯೋತ್ ನ್ಯೂಸ್ ಡೆಸ್ಕ್: ಸಿದ್ದಾಪುರ ತಾಲೂಕಿನಲ್ಲಿ ಮಂಗನಖಾಯಿಲೆ ಅರ್ಭಟ ಹೆಚ್ಚಾಗುತ್ತಿದ್ದು, ರವಿವಾರ ಮತ್ತೆ ನಾಲ್ವರಲ್ಲಿ ಮಂಗನಖಾಯಿಲೆ ಇರುವುದು ಖಚಿತವಾಗಿದೆ. ಈ ವರ್ಷ ಫೆಬ್ರವರಿಯಲ್ಲಿ ಕಾಣಿಸಿಕೊಂಡ ಮಂಗನಖಾಯಿಲೆ ಹೊನ್ನೆಘಟಕಿಯ ವ್ಯಕ್ತಿಯೊಬ್ಬರನ್ನು ಬಲಿತೆಗೆದುಕೊಂಡಿದೆ.


ಉಳಿದಂತೆ ಮಂಗನಖಾಯಿಲೆ ಕಾಣಿಸಿಕೊಂಡ 26 ಜನರಲ್ಲಿ
ಮೂರು ಜನರು ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 5-6 ಜನರು ತಾಲೂಕಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದ ಕೆಲವರು ಮನೆಯಲ್ಲೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಣಿಪಾಲದಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದ ವಾಜಗೋಡ ಗ್ರಾಪಂ ವ್ಯಾಪ್ತಿಯ ಕೆಸುವಿನಮನೆಯ ವ್ಯಕ್ತಿಯೊಬ್ಬರಿಗೆ ಪುನಃ ಜ್ವರ ಕಾಣಿಸಿಕೊಂಡ ಕಾರಣ ಸ್ಥಳೀಯ ಸರಕಾರಿ ಆಸ್ಪತ್ರೆಗೆ ಸೇರಿಸಲಾಗಿದೆ. ಕೊರೊನಾ ಅಬ್ಬರದ ನಡುವೆ ಸರಕಾರಕ್ಕೆ ಮಂಗನಖಾಯಿಲೆ ಸಂತ್ರಸ್ತರ ಬಗ್ಗೆ ಗಮನವೇ ಇಲ್ಲವಾಗಿದೆ. ಆರೋಗ್ಯಾಧಿಕಾರಿಗಳು, ಸ್ಥಳೀಯ ಆಡಳಿತ ಸಾಕಷ್ಟು ಪ್ರಯತ್ನ ನಡೆಸುತ್ತಿದ್ದರೂ ಮಂಗನಖಾಯಿಲೆ ಹಿಡಿತಕ್ಕೆ ಸಿಗುತ್ತಿಲ್ಲ. ಕಳೆದ ವರ್ಷ ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಮಂಗನಖಾಯಿಲೆ ಪೀಡಿತರಿಗೆ ಹಾಗೂ ಶಂಕಿತರಿಗೆ ಉಚಿತ ಚಿಕಿತ್ಸೆಯ ವ್ಯವಸ್ಥೆಯನ್ನು ಸರಕಾರ ಮಾಡಿತ್ತು. ಆದರೆ ಸರಕಾರ ಕಳೆದ ವರ್ಷ ಚಿಕಿತ್ಸೆ ನೀಡಿದ ಹಣವನ್ನು ಮಣಿಪಾಲ ಆಸ್ಪತ್ರೆಗೆ ಭರಿಸಿಲ್ಲ. ಇದರಿಂದ ಮಣಿಪಾಲ ಆಸ್ಪತ್ರೆಯವರು ಈ ಬಾರಿ ಉಚಿತ ಚಿಕಿತ್ಸೆ ನಿರಾಕರಿಸುತ್ತಿದ್ದಾರೆ. ಇದರಿಂದ ಬಡವರಿಗೆ, ಮಧ್ಯಮವರ್ಗದವರಿಗೆ ಸಾಕಷ್ಟು ತೊಂದರೆಯಾಗುತ್ತಿದೆ. ಸರಕಾರ ಕೂಡಲೇ ಉಚಿತ ಚಿಕಿತ್ಸೆ ನೀಡುವ ವ್ಯವಸ್ಥೆ ಮಾಡಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

About the author

Adyot

1 Comment

Leave a Comment