ಶಿವಮೊಗ್ಗ : ಜಿಲ್ಲೆಯ ವ್ಯಾಪ್ತಿಯಲ್ಲಿ ಮಂಗನಕಾಯಿಲೆಯ ಆತಂಕ ಹೆಚ್ಚಾಗಿದ್ದು, ಅರಣ್ಯ ಇಲಾಖೆಯ ಅಧಿಕಾರಿಗಳು ಮಂಗನ ಕಾಯಿಲೆಯ ಲಸಿಕೆಯನ್ನ ಪಡೆಯೋ ಮೂಲಕ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಪ್ರಯತ್ನಕ್ಕೆ ಕೈ ಹಾಕಿದ್ದಾರೆ. ಈ ಮೂಲಕ ಯಾವುದೇ ಹೆದರಿಕೆ ಇಲ್ಲದೆ ಕೆ.ಎಫ್.ಡಿ ಲಸಿಕೆ ಪಡೆಯಿರಿ ಅನ್ನೋ ಸಂದೇಶವನ್ನ ಸಾರ್ವಜನಿಕರಿಗೆ ರವಾನಿಸಿದ್ದಾರೆ.
ಸಮುದಾಯ ಆರೋಗ್ಯ ಕೇಂದ್ರ ಆಯನೂರು ವ್ಯಾಪ್ತಿಯ ಸಿರಿಗೆರೆಯಲ್ಲಿ ವಲಯ ಅರಣ್ಯ ಅಧಿಕಾರಿಗಳ ಕಚೇರಿ ಹಣಗೆರೆ ವನ್ಯಜೀವಿ ವಲಯ ಸಿರಿಗೆರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಕೆ.ಎಫ್.ಡಿ ಲಸಿಕೆಯನ್ನ ನೀಡಲಾಯಿತು. ಕಾರ್ಯಕ್ರಮದಲ್ಲಿ ಶಿವಮೊಗ್ಗ ವನ್ಯಜೀವಿ ವಿಭಾಗದ ಡಿ.ಸಿ.ಎಫ್ ಐ.ಎಂ ನಾಗರಾಜ್ ಡಿ ಸಿ ಎಫ್ ಹಾಗೂ ವನ್ಯಜೀವಿ ಉಪವಿಭಾಗದ ಎಸಿಎಫ್ ವಿಜಯಕುಮಾರ್ ಪಾಲ್ಗೊಂಡಿದ್ದರು. ಸಿರಿಗೆರೆ ಉಪಕೇಂದ್ರದ ಆರೋಗ್ಯ ಸಹಾಯಕರಾದ ಬೀನಾ ಆರ್ ಹಾಗೂ ಮಧುಕುಮಾರ್ ಎಂಜಿ ಇವರು ಲಸಿಕೆಯನ್ನು ನೀಡಿದರು. ನಂತರ ಕೆ.ಎಫ್.ಡಿ ಲಸಿಕೆಯ ಬಗ್ಗೆ ಹಾಗೂ ಮಂಗನ ಕಾಯಿಲೆಯ ಬಗ್ಗೆ ಆರೋಗ್ಯ ಶಿಕ್ಷಣವನ್ನು ನೀಡಲಾಯಿತು.