ಗಂಗಾಧರ ಕೊಳಗಿ “ಯಾನ” ಪ್ರವಾಸ ಅನುಭವ ಕಥನ ಕೃತಿ ಅನಾವರಣ

ಆದ್ಯೋತ್ ಸುದ್ದಿನಿಧಿ
ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರದಲ್ಲಿ ಸಾಹಿತಿ ಗಂಗಾಧರ ಕೊಳಗಿಯವರ ಯಾನ ಅಲೆಮಾರಿಯ ಅನುಭವ ಕಥನ ಕೃತಿ ಲೋಕಾರ್ಪಣೆಗೊಂಡಿತು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ,ಸಾಹಿತ್ಯ ಕ್ಷೇತ್ರ ಸಮಾಜದ ಪರಿವರ್ತನೆಗೆ, ಸಮಾಜದಲ್ಲಿ ಉತ್ತಮ ಸಂಸ್ಕøತಿ ರೂಪಿಸುವ, ಮೌಲ್ಯಗಳನ್ನು ಸ್ಥಾಪಿಸುವ ನಿಟ್ಟಿನಲ್ಲಿ ಬಹುದೊಡ್ಡ ಕೊಡುಗೆ ನೀಡಿದೆ. ಈ ಕ್ಷೇತ್ರದಲ್ಲಿ ಕೆಲಸ ಮಾಡುವವರ ಬಗ್ಗೆ ಯಾವತ್ತೂ ಗೌರವವಿದೆ ಸಾಹಿತ್ಯ ಕ್ಷೇತ್ರಕ್ಕೆ ಅತ್ಯುತ್ತಮ ಕೊಡುಗೆ ಈ ಕೃತಿ. ಸಹಜವಾದ ಜೀವನದ ನಂಬಿಕೆ ಉಳ್ಳ ಗಂಗಾಧರ ಕೊಳಗಿ ಪ್ರಕೃತಿ ಸಹಜವಾದ ಭಾವನೆಗೆ ಅಕ್ಷರ ರೂಪ ಕೊಟ್ಟಿದ್ದಾರೆ. ಸಿದ್ದಾಪುರದ ನೆಲ ಸ್ವಾತಂತ್ರ್ಯ ಹೋರಾಟದಲ್ಲಿ ಅಗಾಧ ಕೊಡುಗೆ ಕೊಟ್ಟ ನೆಲ. ಇಲ್ಲಿನ ಮಹಿಳಾ ಸ್ವಾತಂತ್ರ್ಯ ಯೋಧರುಗಳ ಕೊಡುಗೆಯೂ ಅವೀಸ್ಮರಣೀಯವಾದದ್ದು. ಅಂಥ ಶ್ರೇಷ್ಠ ಹಿನ್ನೆಲೆಯುಳ್ಳ ಈ ನೆಲದಲ್ಲಿ ಸಾಹಿತ್ಯದಲ್ಲೂ ಸಮಾಲೋಚನೆ, ಚಿಂತನೆಗಳ ಮೂಲಕ ಇನ್ನಷ್ಟು ಹೆಚ್ಚಿನ ಸಾಧನೆ ಮಾಡುವ ವಾತಾವರಣ ಮೂಡಬೇಕು ಎಂದು ಹೇಳಿದರು.

ಕೃತಿ ಅನಾವರಣಗೊಳಿಸಿದ ಬರಹಗಾರ ಡಾ.ಗಜಾನನ ಶರ್ಮ ಮಾತನಾಡಿ,ನಮ್ಮ ಸುತ್ತಲಿನ ಪರಿಸರವನ್ನು ಸೂಕ್ಷ್ಮವಾಗಿ ಗ್ರಹಿಸುತ್ತ, ಪಶ್ಚಿಮ ಘಟ್ಟದಲ್ಲಿನ ತಮ್ಮ ಅಲೆದಾಟದ ಅನುಭವವನ್ನು ಗಟ್ಟಿಯಾಗಿ ನಿರೂಪಿಸಿದ ಕೃತಿ ಯಾನ — ಅಲೆಮಾರಿಯ ಅನುಭವ ಕಥನ.ಈ ಕೃತಿಯಲ್ಲಿ ಪಶ್ಚಿಮಘಟ್ಟದ ಅಮೂಲ್ಯ ವಿವರಗಳ ಜೊತೆಗೆ ಅಲ್ಲಾಗುತ್ತಿರುವ ಬದಲಾವಣೆ, ಅದಕ್ಕಾದ ಹಾನಿಯ ಕುರಿತಾಗಿ ವೇದನೆಯ ಭಾವನೆಗಳಿವೆ. ಈ ಕೃತಿಯಲ್ಲಿ ಸೈಕಲ್ ಮೇಲೆ ಪಶ್ಚಿಮಘಟ್ಟದಲ್ಲಿ ನೂರಾರು ಕಿಮೀ. ಕ್ರಮಿಸಿದ, ಶರಾವತಿ ಹಿನ್ನೀರಿನಲ್ಲಿ ಉಕ್ಕಡದಲ್ಲಿ ಸ್ವಂತ ಹುಟ್ಟುಹಾಕಿ 70-80ಕಿಮೀ ಸಾಗಿದ, ಉ.ಕ.ಜಿಲ್ಲೆಯ ಗೇರುಸೊಪ್ಪೆ ರಾಣಿಯ ಕಾನೂರು ಕೋಟೆಯ ಕುರಿತಾದ, ಅಪರೂಪದ ಚೌತಿ ಮೆಣಸನ್ನು ಶೋಧಿಸುವ ಅನುಭವಗಳು ನಮಗೆ ನಮ್ಮನ್ನು ತೆರೆದು ತೋರಿಸುವ ಅನುಭವಗಳು ಎಂದರು.
ಪರಿಸರ ಚಿಂತಕ, ಲೇಖಕ ಪ್ರೊ|ಬಿ.ಎಂ.ಕುಮಾರಸ್ವಾಮಿ ಮಾತನಾಡಿ ಪಶ್ಚಿಮಘಟ್ಟ ಬಹುದೊಡ್ಡ ನಿಧಿ. ಅದರ ಪ್ರಾಮುಖ್ಯತೆ ನಮಗೆ ಗೊತ್ತಿಲ್ಲ. ಅದರ ಮಹತ್ವವನ್ನು ಸೂಕ್ಷ್ಮವಾಗಿ ಗ್ರಹಿಸಿ ಕುಸುರಿ ಕಲೆಯಂತೆ ನಿರೂಪಿಸಿದ ಕೃತಿ ಇದು. ಕನ್ನಡದ ಪ್ರವಾಸಿ ಕಥನದಲ್ಲಿ ಅರ್ಥಪೂರ್ಣವಾಗಿರುವದರ ಜೊತೆಗೆ ಪಶ್ಚಿಮಘಟ್ಟದಲ್ಲಿ ಸಂಚಾರ ಮಾಡುವವರಿಗೆ ಮಾರ್ಗದರ್ಶಿಯೂ, ಪಠ್ಯವೂ ಆಗುವಂಥ ಕೃತಿ ಎಂದರು.

ಲಯನ್ಸ ಮಾಜಿ ಜಿಲ್ಲಾ ಗವರ್ನರ್ ಡಾ|ರವಿ ಹೆಗಡೆ ಹೂವಿನಮನೆ ಮಾತನಾಡಿ ಪರಿಸರವನ್ನು ಪ್ರೀತಿಸುವ ಭಾವನೆ ಅನನ್ನಯವಾದದ್ದು. ಪರಿಸರದ ಜೊತೆ ಪ್ರೀತಿ ಇದ್ದವನು ಮಾತ್ರ ಸಮಾಜಕ್ಕೆ ಅದನ್ನು ಹಂಚುತ್ತಾನೆ. ಇಂದಿನ ಮತ್ತು ಮುಂದಿನ ತಲೆಮಾರಿಗೆ ವಾಸ್ತವದ ಸಂಗತಿಯನ್ನು ಪ್ರಾಮಾಣಿಕವಾಗಿ ಒದಗಿಸುವ ಕೃತಿ ಇದು ಎಂದರು,
ನಾರಿಶಕ್ತಿ ರಾಷ್ಟ್ರೀಯ ಪ್ರಶಸ್ತಿ ಪುರಸ್ಕøತೆ ನೊಮಿಟೊ ಕಾಮದಾರ್ ಮಾತನಾಡಿ ಕಳೆದ 28ಕ್ಕೂ ಹೆಚ್ಚು ವರ್ಷಗಳಿಂದ ಹೊನ್ನೆಮರಡುವನ್ನು ಕೇಂದ್ರವಾಗಿಟ್ಟುಕೊಂಡು ಪರಿಸರದ ಕಾರ್ಯವನ್ನು ಮಾಡುತ್ತ ಬರುತ್ತಿದ್ದೇವೆ ಎಂದರು.
ತಹಸೀಲದಾರ ಮಂಜುಳಾ ಭಜಂತ್ರಿ ಮಾತನಾಡಿ ಸಾಹಿತ್ಯ ನಮ್ಮಲ್ಲಿ ಉತ್ತಮ ಪ್ರೇರಣೆಗಳನ್ನು ಮೂಡಿಸುವ ಮಾಧ್ಯಮ ಎಂದರು.
ಈ ಸಂದರ್ಭದಲ್ಲಿ ನಾರಿಶಕ್ತಿ ರಾಷ್ಟ್ರೀಯ ಪ್ರಶಸ್ತಿ ಪುರಸ್ಕøತೆ ನೊಮಿಟೊ ಕಾಮದಾರ್ ಅವರನ್ನು ಸನ್ಮಾನಿಸಲಾಯಿತು.
ಕೃತಿಕಾರ ಗಂಗಾಧರ ಕೊಳಗಿ ಸ್ವಾಗತಿಸಿದರು. ಲೇಖಕ ಜಿ.ಜಿ.ಹೆಗಡೆ ಬಾಳಗೋಡ ನಿರೂಪಿಸದರು. ರಾಜ್ಯ ಪರಿಸರ ಪ್ರಶಸ್ತಿ ಪುರಸ್ಕøತ ಎಂ.ಬಿ.ನಾಯ್ಕ ಕಡಕೇರಿ ವಂದಿಸಿದರು.
####
ಸಿದ್ದಾಪುರ
ತಾಲೂಕಿನ ನೆಲೆಮಾಂವ ಸೇವಾ ಸಹಕಾರಿ ಸಂಘ ನಿಯಮಿತ ಹೇರೂರಿನ ಎನ್‍ಎಸ್‍ಎಸ್ ಸುಪರ್ ಮಾರ್ಕೆಟ್‍ನ ಉದ್ಘಾಟನೆ ನಡೆಯಿತು.

ಸುಪರ್ ಮಾರ್ಕೆಟ್ ಉದ್ಘಾಟಿಸಿ ಮಾತನಾಡಿದ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಸಂಘ ಸಂಸ್ಥೆಗಳು ಸ್ಥಳೀಯವಾಗಿ ಬೆಳೆದ ಬೆಳೆಗಳಿಗೆ ಮೌಲ್ಯವರ್ಧನೆ ಮಾಡುವುದಕ್ಕೆ ಮುಂದಾಗಬೇಕು. ಸ್ಥಳೀಯವಾಗಿ ಬೆಳೆದ ಬೆಳೆಗಳಿಗೆ ಪ್ರೋತ್ಸಾಹ ನೀಡಿ ಗ್ರಾಮೀಣ ಬದುಕಿನ ರೈತರು ಆರ್ಥಿಕವಾಗಿ ಸುಧಾರಿಸಿಕೊಳ್ಳುವುದಕ್ಕೆ ಕಾರಣರಾಗಬೇಕು.ಸುಪರ್ ಮಾರ್ಕೆಟನಲ್ಲಿ ಗ್ರಾಹಕರು ಪ್ರಾಮಾಣಿಕತೆಯಿಂದ ಸಹಕರಿಸಬೇಕು. ಅಗತ್ಯ ಇರುವ ವಸ್ತುಗಳನ್ನು ಪಡೆದುಕೊಳ್ಳಬೇಕು ಎಂದು ಹೇಳಿದರು.

ಟಿಎಸ್‍ಎಸ್‍ನ ಉಪಾಧ್ಯಕ್ಷ ರಾಮಕೃಷ್ಣ ಶ್ರೀಪಾದ ಹೆಗಡೆ ಕಡವೆ ಅಧ್ಯಕ್ಷತೆವಹಿಸಿದ್ದರು.
ಸಿದ್ದಾಪುರ ಎಪಿಎಂಸಿ ಅಧ್ಯಕ್ಷ ಕೆ.ಕೆ.ನಾಯ್ಕ ಸುಂಕತಿ,್ತ ಕೆಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಮೋಹನದಾಸ ನಾಯ್ಕ, ಜಿಪಂ ಸದಸ್ಯ ಎಂಜಿ.ಹೆಗಡೆ ಗೆಜ್ಜೆ ಕಿಬ್ಬಳ್ಳಿ, ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ಮಹಾಬಲೇಶ್ವರ ಹೆಗಡೆ, ಸದಸ್ಯ ರಘುಪತಿ ಹೆಗಡೆ, ಎಪಿಎಂಸಿ ಸದಸ್ಯ ಜಿ.ಎಂ.ಹೆಗಡೆ, ಹೇರೂರು ಸಿದ್ಧಿವಿನಾಯಕ ದೇವಸ್ಥಾನದ ಅಧ್ಯಕ್ಷ ನರಸಿಂಹಮೂರ್ತಿ ಎಸ್.ಹೆಗಡೆ, ಜಾಮಿಯಾ ಮಸೀದಿ ಅಧ್ಯಕ್ಷ ಅಬ್ದುಲ್ ಶುಕೂರ್ ಸುಲೇಮಾನ್ ಸಾಬ್,ಸಹಕಾರ ಸಂಘಗಳ ಲೆಕ್ಕ ಪರಿಶೋಧನಾ ಇಲಾಖೆಯ ಉಪನಿರ್ದೇಶಕ ಜಿ.ಕೆ.ರಾಮಪ್ಪ, ಹೇರೂರು ಗ್ರಾಪಂ ಆಡಳಿತಾಧಿಕಾರಿ ಲಾಸ್ಯ ಭಟ್ಟ, ಕೃಷಿ ನಿರ್ದೇಶಕ ಟಿ.ಎಚ್.ನಟರಾಜ್, ತಾಲೂಕು ಸಹಾಯಕ ಕೃಷಿ ನಿರ್ದೇಶಕಿ ಸುಮಾ ಎಸ್.ಎಂ, ಸಂಘದ ಉಪಾಧ್ಯಕ್ಷ ಗಣಪತಿ ಹೆಗಡೆ ಉಂಬಳಮನೆ ಹಾಗೂ ಎಲ್ಲ ನಿರ್ದೇಶಕರು ಉಪಸ್ಥಿತರಿದ್ದರು.
ಸಂಘದ ಅಧ್ಯಕ್ಷ ಜಿ.ಬಿ.ಭಟ್ಟ ಹೋಬಳಿ-ನೆಲೆಮಾಂವ್ ಸ್ವಾಗತಿಸಿದರು. ಮುಖ್ಯ ಕಾರ್ಯನಿರ್ವಾಹಕ ವಿ.ಜಿ.ಹೆಗಡೆ ವಂದಿಸಿದರು. ಕಲಾ ಹೆಗಡೆ, ರಂಜನಾ ಹೆಗಡೆ ಕಾರ್ಯಕ್ರಮ ನಿರ್ವಹಿಸಿದರು. ಸಂಘದ ಸಿಬ್ಬಂದಿಗಳು ಸಹಕರಿಸಿದರು.

About the author

Adyot

Leave a Comment