ಆದ್ಯೋತ್ ನ್ಯೂಸ್ ಡೆಸ್ಕ್ : ಕರೋನಾ ವೈರಸ್ ಆತಂಕ ಹಿನ್ನಲೆಯಲ್ಲಿ ಉತ್ತರ ಕನ್ನಡ ಜಿಲ್ಲಾಡಳಿತ ವೈರಸ್ ಅನ್ನು ತಡೆಯೋ ನಿಟ್ಟಿನಲ್ಲಿ ಸರ್ವಸಿದ್ಧತೆಗಳನ್ನ ಮಾಡಿಕೊಳ್ಳುತ್ತಿದೆ. ಇದರ ಭಾಗವಾಗಿ ಜಿಲ್ಲೆಯಲ್ಲಿ ಥರ್ಮಲ್ ಸ್ಕ್ಯಾನರ್ ಅಳವಡಿಕೆಗೆ ತಯಾರಿ ನಡೆಸುತ್ತಿದೆ.
ಕರ್ನಾಟಕದ ಗಡಿನಾಡಾದ ಉತ್ತರ ಕನ್ನಡ ಜಿಲ್ಲೆಯ ಪ್ರಮುಖ ಸ್ಥಳಗಳಲ್ಲಿ ಥರ್ಮಲ್ ಸ್ಕ್ಯಾನರ್ ಅಳವಡಿಕೆಗೆ ಜಿಲ್ಲಾಡಳಿತ ತಯಾರಿ ನಡೆಸಿದ್ದು, ಇಂದು ಸಂಜೆ ಒಳಗಾಗಿ ಎಂಟು ಥರ್ಮಲ್ ಸ್ಕ್ಯಾನರ್ ಜಿಲ್ಲೆಯ ಪ್ರಮುಖ ಸ್ಥಳಗಳಿಗೆ ಅಳವಡಿಸಲಿದೆ. ಜಿಲ್ಲೆಯ ಪ್ರಮುಖ ಪ್ರವಾಸಿ ಸ್ಥಳಗಳಾದ ಮುಂಡಗೋಡಿನ ಟಿಬೇಟಿಯನ್ ಕಾಲೋನಿ, ಕಾರವಾರ ನಗರ, ಕಾರವಾರ ಬಂದರು, ಗೋಕರ್ಣ, ಮುರಡೇಶ್ವರ, ಶಿರಸಿ ಹಾಗೂ ದಾಂಡೇಲಿಯಲ್ಲಿ ಥರ್ಮಲ್ ಸ್ಕ್ಯಾನರ್ ಗಳನ್ನು ಅಳವಡಿಕೆ ಮಾಡಲಾಗುತ್ತದೆ ಎಂದು ಜಿಲ್ಲಾಡಳಿತ ತಿಳಿಸಿದೆ. ಈಗಾಗಲೇ ಗೋಕರ್ಣದಲ್ಲಿ ಸುಮಾರು 7000 ಜನರನ್ನ ತಪಾಸಣೆಗೊಳಪಡಿಸಲಾಗಿದೆ. ಇದರಲ್ಲಿ ಸುಮಾರು 2000 ವಿದೇಶಿಗರು ಸೇರಿದ್ದಾರೆ.