ಆದ್ಯೋತ್ ನ್ಯೂಸ್ ಡೆಸ್ಕ್ : ರಾಜ್ಯ ಸರ್ಕಾರಿ ಸಾರಿಗೆ ನಿಗಮದ ಕರ್ನಾಟಕ ರಸ್ತೆ ಸಾರಿಗೆ, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಹಾಗೂ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗಳು ಪ್ರಯಾಣಕರಿಗೆ ಬಸ್ ದರ ಏರಿಕೆಯ ಬಿಗ್ ಶಾಕ್ ನೀಡಿವೆ.
ಈ ಹಿಂದೆಯೇ ರಾಜ್ಯ ಸಾರಿಗೆ ನಿಗಮವು ಸರ್ಕಾರಿ ಬಸ್ ಗಳ ದರ ಏರಿಕೆಯ ಪ್ರಸ್ತಾಪವನ್ನು ಸರ್ಕಾರದ ಮುಂದೆ ಇಟ್ಟಿದ್ದವು. ಶೇಕಡಾ 18 ದರ ಏರಿಕೆ ಮಾಡಬೇಕೆಂದು ಸಾರಿಗೆ ನಿಗಮ ಪಟ್ಟು ಹಿಡಿದಿತ್ತು. ಇದನ್ನು ಪರಿಶೀಲಿಸಿದ ರಾಜ್ಯ ಸರ್ಕಾರ ಬಸ್ ದರಗಳನ್ನ ಶೇಕಡಾ 12 ರಷ್ಟು ಏರಿಕೆ ಮಾಡಿ ಆದೇಶ ಹೊರಡಿಸಿದೆ. ಈ ಆದೇಶ ಇಂದು ಮಧ್ಯರಾತ್ರಿಯಿಂದ ಜಾರಿಗೆ ಬರಲಿದ್ದು, ನಾಳೆ ಬೆಳಿಗ್ಗೆಯಿಂದ ಎಲ್ಲ ಬಸ್ ದರಗಳು ಹೆಚ್ಚಾಗಲಿವೆ. ಕರ್ನಾಟಕದಲ್ಲಿ ಸಾರಿಗೆ ದರ ಈಗಾಗಲೇ ಹೆಚ್ಚಿಗೆ ಇದ್ದು, ಸರ್ಕಾರದ ಈ ಆದೇಶ ಬಸ್ ಪ್ರಯಾಣಿಕರಿಗೆ ನುಂಗದ ತುತ್ತಾಗಲಿದೆ. ಪೆಟ್ರೋಲ್ ದರ ಏರಿಕೆ ಆದಾಗ ಬಸ್ ದರ ಹೆಚ್ಚಿಸೋ ಸರ್ಕಾರಗಳು ಪೆಟ್ರೋಲ್ ದರ ಇಳಿದಾಗ ಸಾರಿಗೆ ದರವನ್ನೂ ಕೂಡ ಇಳಿಸಬೇಕು ಅನ್ನೋದು ಸಾರ್ವಜನಿಕರ ಅಭಿಪ್ರಾಯವಾಗಿದೆ.