ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡ ಜಿಲ್ಲೆ ಕುಮಟಾದ ರೋಟರಿ ಶ್ರೀ ಕಲಾನಿಕೇತನ ಸಭಾಭವನದಲ್ಲಿ ಸೋಮವಾರ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ್ ಸಮ್ಮುಖದಲ್ಲಿ ಭಾರತೀಯ ಜನತಾಪಕ್ಷಕ್ಕೆ ವಿವಿಧ ಪಕ್ಷಗಳ ಮುಖಂಡರು,ಕಾರ್ಯಕರ್ತರು ಸೇರ್ಪಡೆಗೊಂಡರು.
ಈ ಸಂದರ್ಭದಲ್ಲಿ ಮಾತನಾಡಿದ ಶಿವರಾಮ ಹೆಬ್ಬಾರ,
ದೇಶದ ರಾಜ್ಯದ ಸಮಗ್ರ ಅಭಿವೃದ್ಧಿಗೆ ಭಾರತೀಯ ಜನತಾಪಕ್ಷ ಅವಿರತವಾಗಿ ಕಾರ್ಯನಿರ್ವಹಿಸುತ್ತಿದ್ದು ಪ್ರದಾನಿ ನರೇಂದ್ರ ಮೋದಿಯವರ ನಾಯಕತ್ವದಿಂದ ಭಾರತ ಜಗತ್ತಿನ ಎಲ್ಲರಾಷ್ಟ್ರಗಳಿಗೆ ಗುರುವಾಗಿ ನಿಂತಿದೆ ದೇಶ ಕೊವಿಡ್ ಸೇರಿದಂತೆ ಇನ್ನಿತರ ಎಲ್ಲಾ ಸಮಸ್ಯೆಗಳನ್ನು ಸಮರ್ಥವಾಗಿ ಎದುರಿಸುತ್ತಿದೆ ಇಂದು ದೇಶದಲ್ಲಿ ಬಿಜೆಪಿಗೆ ಪರ್ಯಾಯವೇ ಇಲ್ಲವಾಗಿದೆ ಇಂತಹ ಸಂದರ್ಭದಲ್ಲಿ ನೀವೆಲ್ಲ ಪಕ್ಷಕ್ಕೆ ಸೇರ್ಪಡೆಯಾಗುತ್ತಿರುವುದು ಸಮಯೋಚಿತವಾಗಿದೆ ಎಂದು ಹೇಳಿದರು.
ಜೆ.ಡಿ.ಎಸ್ ಪಕ್ಷದಿಂದ ಮಂಜುನಾಥ ಪಟಗಾರ ಹೆಗಡೆ ಗ್ರಾ.ಪಂ ಮಾಜಿ ಅಧ್ಯಕ್ಷರು,ಗೀತಾ ಮುಕ್ರಿ ತಾ.ಪಂ ಉಪಾಧ್ಯಕ್ಷರು,ಛಾಯಾ ವೆಂಗುರ್ಲೆಕರ್ ಪುರಸಭಾ ಸದಸ್ಯರು
ಬಾಬು ಅಗ್ರಹಾರ ಗ್ರಾಪಂ ಸದಸ್ಯರು ಹೆಗಡೆ,ಕಾಂಗ್ರೇಸ್ ಪಕ್ಷದಿಂದ ಪಾಂಡುರಂಗ ಎಂ ಪಟಗಾರ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ನಿರ್ದೇಶಕರು, ಸುಬ್ರಾಯ ಎಂ. ಪಟಗಾರ, ರಾಮಚಂದ್ರ ಎಚ್. ಪಟಗಾರ, ಶ್ರೀ ಆರ್.ವಿ.ಹೆಗಡೆ ಎಪಿಎಂಸಿ ನಿರ್ದೇಶಕರು ಪಕ್ಷಕ್ಕೆ ಸೇರ್ಪಡೆಗೊಂಡರು.
ಸಚಿವರು ಪಕ್ಷದ ಶಾಲು ಹೊದೆಸಿ ಬಾವುಟ ನೀಡಿ ಪಕ್ಷಕ್ಕೆ ಬರಮಾಡಿಕೊಂಡರು. ಈ ವೇಳೆಗೆ ಕುಮಟಾ ಶಾಸಕ ದಿನಕರ ಶೆಟ್ಟಿ, ಬಿ.ಜೆ.ಪಿ ಜಿಲ್ಲಾಧ್ಯಕ್ಷ ವೆಂಕಟೇಶ ನಾಯಕ್,ವಿನೋದ್ ಪ್ರಭು, ಬಿ.ಜೆ.ಪಿ ಮಂಡಲಾಧ್ಯಕ್ಷ ಹೇಮಂತ ಗಾಂವಕರ ಮುಂತಾದವರು ಉಪಸ್ಥಿತರಿದ್ದರು.