ಆದ್ಯೋತ್ ಸುದ್ದಿನಿಧಿ
ಉತ್ತರಕನ್ನಡ ಜಿಲ್ಲೆಯ ಕುಮಟಾ ಬಾಡಾ ಗ್ರಾಮದ ಸಮುದ್ರತೀರದಲ್ಲಿ ಮೃತ ಚಿರತೆಯ ದೇಹ ಪತ್ತೆಯಾಗಿದ್ದು 4-5 ಅಡಿ ಉದ್ದವಿದೆ ಈಗಾಗಲೇ ಅರಣ್ಯ ಇಲಾಖೆಯವರಿಗೆ ಮಾಹಿತಿ ನೀಡಲಾಗಿದೆ.
ಬಾಡಾ ಗ್ರಾಮದಲ್ಲಿ ಚಿರತೆಯ ಮೃತದೇಹ ಪತ್ತೆಯಾಗಿದೆ ಸುಮಾರು 5 ವರ್ಷ ಪ್ರಾಯದ ಚಿರತೆ ಇದಾಗಿದ್ದು ತಲೆಯ ಭಾಗದಲ್ಲಿ ಪೆಟ್ಟು ಬಿದ್ದಿರುವುದು ಕಂಡುಬಂದಿದೆ. ಬೇರೆ ಎಲ್ಲೋ ಗಾಯಗೊಂಡು ನೀರಿಗೆ ಬಿದ್ದು ಇಲ್ಲಿಗೆ ತೇಲಿ ಬಂದಿರುವ ಸಾದ್ಯತೆ ಇದೆ ಎಂದು ಹೊನ್ನಾವರ ವಲಯದ ಉಪ ಅರಣ್ಯ ಸಂರಕ್ಷಣಾಧಿಕಾರಿ ಗಣಪತಿ ನಾಯ್ಕ ಆದ್ಯೋತ್ ನ್ಯೂಸ್ ಗೆ ತಿಳಿಸಿದ್ದಾರೆ.
ಮೇಲ್ನೋಟಕ್ಕೆ ಇದು ಆಕಸ್ಮಿಕ ಸಾವಿನಂತೆ ಕಂಡುಬರುತ್ತಿದೆ.ವೈದ್ಯಕೀಯ ಪರೀಕ್ಷೆಯ ನಂತರ ಹೆಚ್ಚಿನ ಮಾಹಿತಿ ದೊರೆಯಲಿದೆ. ಸಾವಿನ ಖಚಿತತೆ ತಿಳಿಯಲು ಹೈದರಾಬಾದ ಪ್ರಯೋಗಾಲಯಕ್ಕೆ ಕಳುಹಿಸಲಾಗುವುದು ಎಂದು ನಾಯ್ಕ ತಿಳಿಸಿದರು.
ಈ ಭಾಗದಲ್ಲಿ ಸಾಕಷ್ಟು ಚಿರತೆಗಳಿದ್ದು ಮನುಷ್ಯರ ವಾಸನೆ ಸುಲಭವಾಗಿ ಗುರುತಿಸುವುದರಿಂದ ಮನುಷ್ಯರ ಕಣ್ತಪ್ಪಸಿ ಓಡಾಡುತ್ತದೆ.ಹೀಗಾಗಿ ನಮಗೆ ಚಿರತೆ ಇರುವುದು ತಿಳಿಯುವುದಿಲ್ಲ ಇಂತಹ ಘಟನೆಗಳು ಸಂಭವಿಸಿದಾಗ ತಿಳಿಯುತ್ತದೆ ಎಂದು ತಿಳಿಸಿದರು