ಅದ್ಯೋತ್ ಸುದ್ದಿ ನಿಧಿ : ಉತ್ತರ ಕನ್ನಡ ಜಿಲ್ಲೆಯನ್ನು ಹಳದಿ ವಲಯವಾಗಿ ಸೇರ್ಪಡೆ ಮಾಡಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ಆದೇಶಕ್ಕೆ ಅನುಗುಣವಾಗಿ ಶಿರಸಿಯಲ್ಲಿ ಸಿಲುಕಿದ್ದ ವಲಸೆ ಕಾರ್ಮಿಕರನ್ನ ಅವರ ಊರುಗಳಿಗೆ ಕಳಿಸಲಾಯಿತು.
ಕಳೆದ ಸುಮಾರು ಒಂದು ತಿಂಗಳಿನಿಂದ ಲಾಕ್ ಡೌನ್ ನಲ್ಲಿ ಸಿಲುಕಿದ್ದ ವಲಸೆ ಕಾರ್ಮಿಕರಿಗೆ ತವರಿಗೆ ಹೋಗೋ ಭಾಗ್ಯ ಸಿಕ್ಕಿರಲಿಲ್ಲ. ಹೊರ ತಾಲೂಕು ಹಾಗೂ ಜಿಲ್ಲೆಗಳಿಂದ ಬಂದಿದ್ದ ವಲಸೆ ಕಾರ್ಮಿಕರು ಇಲ್ಲಿಯೇ ವಸತಿ ಹೂಡಿದ್ದರು. ಈಗ ಕೇಂದ್ರ ಸರ್ಕಾರದಿಂದ ಬಂದ ಹೊಸ ಮಾರ್ಗಸೂಚಿಯ ಪ್ರಕಾರ ಲಾಕ್ ಡೌನ್ ನಲ್ಲಿ ಸಿಲುಕಿದ್ದ 82 ವಲಸೆ ಕಾರ್ಮಿಕರನ್ನ ಶಿರಸಿ ತಾಲೂಕಾ ಆಡಳಿತ ಅವರ ಊರುಗಳಿಗೆ ಕಳುಹಿಸುವ ವ್ಯವಸ್ಥೆ ಮಾಡಿದೆ. 4 ಬಸ್ಸುಗಳಲ್ಲಿ ಕಾರ್ಮಿಕರನ್ನು ರವಾನಿಸಿದ ಶಿರಸಿ ತಾಲೂಕಾ ಆಡಳಿತ ಸಾಮಾಜಿಕ ಅಂತರ ಹಾಗೂ ಮಾಸ್ಕ್ ಗಳೊಂದಿಗೆ ಅವರನ್ನು ಬೀಳ್ಕೊಟ್ಟಿತು.