ಅದ್ಯೋತ್ ನ್ಯೂಸ್ ಡೆಸ್ಕ್ : ದೇಶಾದ್ಯಂತ ಕೊರೊನಾ ಹರಡದಂತೆ ತಡೆಯಲು ಏಪ್ರಿಲ್ 14 ರವರೆಗೆ ಲಾಕ್ ಡೌನ್ ಘೋಷಣೆಯಾಗಿತ್ತು. ಈಗ ಲಾಕ್ ಡೌನ್ ಅನ್ನು ಮುಂದುವರಿಸಬೇಕೇ ಅಥವಾ ಬೇಡವೇ ಅನ್ನೋ ಪ್ರಶ್ನೆ ಸರ್ಕಾರದ ಮುಂದಿದೆ. ಇದರ ಕುರಿತು ತಜ್ಞರ ಸಮಿತಿ ವರದಿ ನೀಡಿದ್ದು, ಕೊರೊನಾ ವ್ಯಾಪಕವಾಗಿ ಹರಡುತ್ತಿರೋ ಹಿನ್ನೆಲೆಯಲ್ಲಿ ಲಾಕ್ ಡೌನ್ ಮುಂದುವರಿಸೋದು ಅನಿವಾರ್ಯ ಎಂದು ಹೇಳಿದೆ.
ಈ ಕುರಿತು ರಾಜ್ಯ ಸರ್ಕಾರ ಕೂಡ ಮುಂದಿನ ಕ್ರಮಗಳಿಗೆ ಸಿದ್ಧವಾಗೋ ನಿಟ್ಟಿನಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ಮೂಲಕ ಒಂದು ಸುತ್ತೋಲೆಯನ್ನು ನೀಡಿದ್ದು, ಏಪ್ರಿಲ್ 14 ರಂದು ಲಾಕ್ ಡೌನ್ ಮುಕ್ತಾಯವಾಗಲಿದೆ. ಅದರ ನಂತರ ತಮ್ಮ ಅಧೀನದಲ್ಲಿರುವ ಇಲಾಖೆಗಳ ಮೂಲಕ ಯಾವ ಹತ್ತು ಕ್ರಮಗಳನ್ನ ಕೈಗೊಳ್ಳಬಹುದು ಅನ್ನೋ ವರದಿಯನ್ನು ಏಪ್ರಿಲ್ 9 ರ ಒಳಗಾಗಿ ಸಲ್ಲಿಸಿ ಅಂತ ಸರ್ಕಾರದ ಎಲ್ಲಾ ಅಧೀನ ಕಾರ್ಯದರ್ಶಿಗಳಿಗೆ ಪತ್ರವನ್ನ ರವಾನಿಸಿದೆ.