ಆದ್ಯೋತ್ ಸುದ್ದಿ ನಿಧಿ : ಕೊರೊನಾ ಹಿನ್ನೆಲೆಯಲ್ಲಿ ದೇಶಾದ್ಯಂತ ವಿಧಿಸಲಾಗಿದ್ದ ಲಾಕ್ ಡೌನ್ ಅನ್ನು ಮೇ 30 ರವರೆಗೆ ವಿಸ್ತರಿಸಿ ಕೇಂದ್ರ ಸರ್ಕಾರ ಆದೇಶಿಸಿದೆ.
ಈವರೆಗೆ ಇದ್ದ ಲಾಕ್ ಡೌನ್ ಮೇ 17ರವರೆಗೆ ಅಂದರೆ ಇಂದು ಕೊನೆಯಾಗಲಿದ್ದು, ಈ ನಿಟ್ಟಿನಲ್ಲಿ ರಾಜ್ಯಗಳ ಜೊತೆ ಮಾತನಾಡಿದ್ದ ಕೇಂದ್ರ ಸರ್ಕಾರ ಲಾಕ್ ಡೌನ್ ಅನ್ನು ವಿಸ್ತರಿಸಿದೆ. ಅದೇ ರೀತಿ ಹಲವಾರು ಮಾರ್ಗಸೂಚಿಗಳನ್ನು ಕೇಂದ್ರ ಸರ್ಕಾರ ನೀಡಿದೆ.
ಮಾರ್ಗಸೂಚಿಗಳು ಇಂತಿವೆ.
1. ಯಾವುದೇ ರೀತಿಯ ದೇಶೀಯ ಹಾಗೂ ಅಂತಾರಾಷ್ಟ್ರೀಯ ಪ್ರಯಾಣ ಇರುವುದಿಲ್ಲ.
2. ಮೆಟ್ರೋ ರೈಲು ಸೇವೆ ಇರಲ್ಲ.
3. ಹೋಟೆಲ್, ಲಾಡ್ಜ್ ಗಳು ಬಂದ್ ಇರಲಿವೆ.
4. ಹೋಮ್ ಡಿಲೇವರಿಗೆ ಅವಕಾಶ.
5. ಶಾಲಾ-ಕಾಲೇಜುಗಳು, ಕೋಚಿಂಗ್ ಸೆಂಟರ್ ಗಳು ಬಂದ್ ಇರಲಿವೆ.
6. ಆನ್ಲೈನ್ ಟೀಚಿಂಗ್ ಗೆ ಅವಕಾಶ.
7. ಚಿತ್ರಮಂದಿರಗಳು, ಶಾಪಿಂಗ್ ಮಾಲ್ ಗಳು, ಜಿಮ್, ಬಾರ್ ಗಳಿಗೆ ಅವಕಾಶವಿಲ್ಲ. ಆದರೆ ಸ್ಟೇಡಿಯಂ ಗಳಿಗೆ ಅವಕಾಶ ನೀಡಲಾಗಿದೆ. ಪ್ರೇಕ್ಷಕರಿಗೆ ಪ್ರವೇಶ ನಿರಾಕರಿಸಲಾಗಿದೆ.
8. ಹೆಚ್ಚು ಜನ ಸೇರುವ ಸಾಮಾಜಿಕ, ಧಾರ್ಮಿಕ, ರಾಜಕೀಯ ಸಭೆ ಸಮಾರಂಭಗಳನ್ನು ನಿಷೇಧಿಸಲಾಗಿದೆ.
9. ಯಾವುದೇ ಪ್ರಾರ್ಥನಾ ಮಂದಿರಗಳಿಗೆ ಅವಕಾಶವಿರುವುದಿಲ್ಲ.
ಇನ್ನು ಕರ್ನಾಟಕ ರಾಜ್ಯ ಸರ್ಕಾರ ಇನ್ನೂ 2 ದಿನಗಳ ಕಾಲ ಹಳೆಯ ಲಾಕ್ ಡೌನ್ ಮುಂದುವರಿಸುವಂತೆ ಆದೇಶ ನೀಡಿದೆ. ಕೇಂದ್ರ ಸರ್ಕಾರದ ಮಾರ್ಗಸೂಚಿಗಳನ್ನು ಅವಲೋಕಿಸಿ ನಾಳೆ ರಾಜ್ಯ ಸರ್ಕಾರದ ಸಭೆ ನಡೆಸಲಿದೆ. ನಂತರ ರಾಜ್ಯದ ಹೊಸ ಮಾರ್ಗಸೂಚಿ ಬಿಡುಗಡೆಯಾಗಲಿದೆ.