ಮೇ 3ರ ವರೆಗೆ ದೇಶಾದ್ಯಂತ ಲಾಕ್ ಡೌನ್ ವಿಸ್ತರಣೆ

ಆದ್ಯೋತ್ ನ್ಯೂಸ್ ಡೆಸ್ಕ್ : ಭಾರತದ ಸ್ಥಿತಿಯನ್ನ ಅವಲೋಕಿಸಿದಾಗ ಲಾಕ್ ಡೌನ್ ಅನ್ನು ಇನ್ನು ಸ್ವಲ್ಪ ದಿನಗಳ ಕಾಲ ವಿಸ್ತರಿಸುವ ಅವಶ್ಯಕತೆಯಿದ್ದು, ಮೇ 3 ರ ವರೆಗೆ ಲಾಕ್ ಡೌನ್ ದೇಶಾದ್ಯಂತ ವಿಸ್ತರಣೆ ಮಾಡಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.


ದೇಶವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಇಲ್ಲಿಯವರೆಗೆ ಜನ ಲಾಕ್ ಡೌನ್ ಗೆ ಸ್ಪಂದಿಸಿದ ರೀತಿ ಅಮೋಘವಾದುದು. ಹಬ್ಬಗಳ ಸಮಯದಲ್ಲೂ ಕೂಡ ಜನರ ಸ್ಪಂದನೆಗೆ ಧನ್ಯವಾದ ಸಮರ್ಪಿಸುತ್ತೇನೆ. ಅಂಬೇಡ್ಕರ್ ಜಯಂತಿಯ ಶುಭಾಷಯಗಳನ್ನ ಜನತೆಗೆ ತಿಳಿಸುತ್ತೇನೆ. ಬೇರೇ ದೇಶಗಳಿಗೆ ಹೋಲಿಸಿದಾಗ ಭಾರತದ ಸ್ಥಿತಿ ಒಳ್ಳೆಯದಿದೆ. ಆರ್ಥಿಕವಾಗಿ ನೋಡಿದಾಗ ಕೊರೊನಾದ ಈ ಸಮಯ ಯಾವ ರಾಷ್ಟ್ರಗಳಿಗೂ ಒಳ್ಳೆಯದಲ್ಲ. ಎಲ್ಲಾ ರಾಜ್ಯಗಳ ಜೊತೆ ಚರ್ಚಿಸಿದಾಗ ಲಾಕ್ ಡೌನ್ ಮುಂದುವರಿಸುವ ಒಮ್ಮತದ ಅಭಿಪ್ರಾಯ ವ್ಯಕ್ತವಾಗಿದೆ. ಆದ್ದರಿಂದ ಮೇ 3 ರ ವರೆಗೆ ದೇಶಾದ್ಯಂತ ಲಾಕ್ ಡೌನ್ ವಿಸ್ತರಣೆ ಮಾಡಲಾಗುವುದು. ಕೊರೊನಾ ಹಾಟ್ ಸ್ಪಾಟ್ ಗಳಲ್ಲಿ ವಿಶೇಷ ಎಚ್ಚರಿಕೆ ಅವಶ್ಯ. 20 ಏಪ್ರಿಲ್ ನಿಂದ 7 ಶರತ್ತುಗಳೊಂದಿಗೆ ಹಲವಾರು ಕಡೆಗಳಲ್ಲಿ ಸಡಿಲಿಕೆ ನೀಡಲಾಗುತ್ತದೆ. ಬಡವರ ದೈನಂದಿನ ಜೀವನವನ್ನು ಗಮನದಲ್ಲಿರಿಸಿಕೊಂಡು ಸಡಿಲಿಕೆ ನೀಡಲಾಗುವುದು. ಈ ಕುರಿತು ನಾಳೆ ಸರ್ಕಾರದಿಂದ ವಿಸ್ತೃತ ಗೈಡ್ ಲೈನ್ ಬಿಡುಗಡೆ ಮಾಡಲಾಗುತ್ತದೆ ಎಂದರು.

About the author

Adyot

Leave a Comment