ಆದ್ಯೋತ್ ಸುದ್ದಿ ನಿಧಿ : 4ನೇ ಹಂತದ ಲಾಕ್ ಡೌನ್ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಮಾರ್ಗಸೂಚಿ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಕಂಟೇನ್ಮೆಂಟ್ ಜೋನ್ ಹೊರತುಪಡಿಸಿ ಉಳಿದೆಡೆ ಬೆಳಿಗ್ಗೆ 7 ರಿಂದ ಸಂಜೆ 6 ರವರೆಗೆ ಎಲ್ಲಾ ಅಂಗಡಿಗಳಿಗೂ ತೆರೆಯುವ ಅವಕಾಶ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಹೇಳಿದರು.
ಕಾರವಾರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಡಾ.ಹರೀಶ್ ಕುಮಾರ್, ಉಳಿದ ಎಲ್ಲಾ ಕೇಂದ್ರ ಹಾಗೂ ರಾಜ್ಯದ ಮಾರ್ಗಸೂಚಿಗಳು ಜಿಲ್ಲೆಯಲ್ಲಿ ಅನ್ವಯವಾಗುತ್ತವೆ. ಸಂಜೆ 7 ರಿಂದ ಬೆಳಿಗ್ಗೆ 7ರ ವರೆಗೆ ನಿಷೇಧಾಜ್ಞೆ ಜಾರಿಯಲ್ಲಿರಲಿದೆ. ನಿಷೇಧಾಜ್ಞೆ ಉಲ್ಲಂಘಿಸುವವರ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುವುದು. ಜಿಲ್ಲೆಯಿಂದ ಜಿಲ್ಲೆಗೆ ಸಂಚರಿಸಲು ಪಾಸ್ ಅವಶ್ಯಕತೆ ಇಲ್ಲ. ಜಿಲ್ಲಾಧಿಕಾರಿಯಾಗಿ ಕೆ.ಎಸ್.ಆರ್.ಟಿ.ಸಿ ಡಿಸಿಯವರ ಜವಾಬ್ದಾರಿ ನಾನು ತಗೊಳೋಲ್ಲ. ಅವರು ಸೊಷ್ಯಲ್ ಡಿಸ್ಟನ್ಸ್ ಮೆಂಟೇನ್ ಮಾಡಿಲ್ಲ ಅಂದ್ರೆ ಅವರ ಮೇಲೇನೂ ಕ್ರಮ ಅನಿವಾರ್ಯ ಎಂದರು.
ನಂತರ ಮಾತನಾಡಿದ ಎಸ್ಪಿ ಶಿವಪ್ರಕಾಶ್ ದೇವರಾಜು, ದಯವಿಟ್ಟು ಜನರು ಅರ್ಥ ಮಾಡಿಕೊಳ್ಳಿ. ಅನಗತ್ಯವಾಗಿ ಯಾರೂ ಓಡಾಡಬೇಡಿ. ಬೀಚ್ ಹತ್ತಿರ ಸಂಜೆ ಜನ ಓಡಾಡುತ್ತಿದ್ದಾರೆ. ಅಕ್ಷರಸ್ಥರೇ ಈ ರೀತಿ ಮಾಡುತ್ತಿದ್ದಾರೆ. ಇದು ಕಂಟ್ರೋಲ್ ಆಗಿಲ್ಲ ಅಂದ್ರೆ ಕೇಸ್ ದಾಖಲಿಸುತ್ತೇವೆ. ಡ್ರೋಣ್ ಬಿಟ್ಟಾಗ ಒಂದೇ ಸಲ ಸಾವಿರಾರು ಜನರ ಮೇಲೆ ಕೇಸ್ ಬೀಳುತ್ತೆ. ಇದು ಸುಲಭದ ಕೆಲಸ. ಆದ್ದರಿಂದ ಅನಗತ್ಯವಾಗಿ ಯಾರೂ ಓಡಾಡಬೇಡಿ. ಹೊರಗಿನಿಂದ ಕದ್ದು ಮುಚ್ಚಿ ಬಂದು ಮನೆಯೊಳಗಿದ್ರೆ ಕೇಸ್ ದಾಖಲಿಸುತ್ತೇವೆ. ಸುಳ್ಳು ಹೇಳಿದ್ರೆ ಹುಷಾರ್. ಈಗಾಗಲೇ 2 ಕೇಸ್ ದಾಖಲಾಗಿದೆ ಅಂತ ಖಡಕ್ ಸೂಚನೆ ನೀಡಿದರು.