ಭಟ್ಕಳದಲ್ಲಿ ಅಧಿಕಾರಿಗಳ ಜೊತೆ ವಿಡಿಯೋ ಮೂಲಕ ಸಂಸದರ ಸಭೆ,

ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡ ಜಿಲ್ಲೆಯ ಭಟ್ಕಳದ ತಹಸೀಲ್ಧದಾರ ಕಚೇರಿಯಲ್ಲಿ
ಬುಧವಾರ ಸಂಸದ ಅನಂತಕುಮಾರ ಹೆಗಡೆ ಕೊವಿಡ್19 ತಡೆಗಟ್ಟುವ ಕುರಿತು ಸ್ಥಳೀಯ ಅಧಿಕಾರಿಗಳ ಜೊತೆಗೆ ಸಭೆ ನಡೆಸುವುದರ ಜೊತೆಗೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳೊಂದಿಗೆ ವಿಡಿಯೋ ಸಭೆ ನಡೆಸಿದರು.
ಮಾ.20ರಿಂದ ಕೊವಿಡ್ ಲಾಕ್ ಡೌನ್ ಪ್ರಾರಂಭವಾಗಿದ್ದು ಭಟ್ಕಳದಲ್ಲಿ ಇಲ್ಲಿಯವರೆಗೆ 22 ಮಂದಿ ಸಾವಿನ್ನಪ್ಪಿದ್ದಾರೆ
ಈ ಬಗ್ಗೆ ಯಾವುದೇ ಮಾಹಿತಿಯನ್ನು ತಾಲೂಕಾಢಳಿತ ಹಾಗೂ ಆರೋಗ್ಯ ಇಲಾಖೆ ಗಮನಕ್ಕೆ ತಿಳಿಸದೇ ಹೂತಿರುವ ಬಗ್ಗೆ ಸಂಪುರ್ಣ ಮಾಹಿತಿ ಕಲೆ ಹಾಕಿ ವರದಿ ನೀಡ ಬೇಕು ಎಂದು ಅನಂತ ಕುಮಾರ ಹೆಗಡೆ ಜಿಲ್ಲಾಢಳಿತ,ತಾಲೂಕಾಢಳಿತ ಪೊಲೀಸರಿಗೆ ಖಡಕ್ ಸೂಚನೆ ನೀಡಿದರು.
ಭಟ್ಕಳ ಕೋರೋನಾದಿಂದ ಮುಕ್ತವಾಗುವ ಹಂತದಲ್ಲಿ ಈಗ ಇನ್ನೊಂದು ಪ್ರಕರಣ ಬಂದಿದ್ದು ಉಲ್ಭಣಗೊಳ್ಳುವ ಮೊದಲು,ಅಧಿಕಾರಿಗಳು ಇನ್ನಷ್ಟು ಹೆಚ್ಚಿನ ಮುತುವರ್ಜಿಯಿಂದ ಕೆಲಸ ಮಾಡಬೇಕಿದೆ.
ಪಟ್ಟಣ ವ್ಯಾಪ್ತಿಯಲ್ಲಿನ ಜನರ ಮನೆ ಮನೆಗೆ ಹೋಗಿ ಜನರ ಆರೋಗ್ಯದ ಸ್ಥಿತಿ ಗತಿಯ ಮಾಹಿತಿ ಪಡೆಯಲು ಹೋಗುವ ಆಶಾ ಕಾರ್ಯಕರ್ತೆಯರು ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿಗಳಿಗೆ ಜನರು ಸರಿಯಾಗಿ ಮಾಹಿತಿ ನೀಡುತ್ತಿಲ್ಲ ಎಂದು ತಿಳಿದು ಬಂದಿದೆ.ಎಂದು ಸಂಸದರು ಹೇಳಿದರು.
ಆಶಾ ಕಾರ್ಯಕರ್ತೆಯರು ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿಗಳ ಜೊತೆಗೆ ಮಹಿಳಾ ಹಾಗೂ ಪುರುಷ ಪೊಲೀಸ ಸಿಬ್ಬಂದಿಗಳನ್ನು ನೇಮಿಸಿ ಮಾಹಿತಿ ನಿರಾಕರಿಸುವವರನ್ನು ಮನೆಯಿಂದ ಹೊರಗೆ ಕರೆಯಿಸಿ ಅವರ ಆರೋಗ್ಯದ ಸಮೀಕ್ಷೆ ಮಾಡಿ ವರದಿ ಒಪ್ಪಿಸಬೇಕು ಎಂದ ಸೂಚಿಸಿದರು.
ತಾಲೂಕಿನಲ್ಲಿ ಲಾಕ್ ಡೌನ ವೇಳೆ ಅಗತ್ಯ ವಸ್ತುಗಳ ವಿತರಣೆಯಲ್ಲಿ ಕೇವಲ ಇಲ್ಲಿನ ತಂಜೀಂ ಸಂಸ್ಥೆ ಸಂಬಂಧಟ್ಟವರಿಗೆ ಮಾತ್ರ ತಾಲೂಕಾಢಳಿತ ಪಾಸ್ ನೀಡಿದ್ದು ಈ ಬಗ್ಗೆ ಶಾಸಕರಿಂದ ಹಿಡಿದು ಜನಸಾಮಾನ್ಯರ ತನಕ ಆರೋಪಗಳು ತನ್ನ ಗಮನಕ್ಕೆ ಬಂದಿದೆ ಎಂದು ಅನಂತಕುಮಾರ ಹೇಳಿದರು.

ಈ ಬಗ್ಗೆ ಉತ್ತರಿಸಿದ ಅಧಿಕಾರಿಗಳು,ಪಾ‌ಸ್ ವಿತರಣೆಯಲ್ಲಿ ಯಾವುದೇ ತಾರತಮ್ಯ ಮಾಡದೇ ಶಾಸಕರು ನೀಡಿದ ಪಟ್ಟಿ ಗನುಸಾರವಾಗಿಯೂ ಪಾಸ್ ವಿತರಣೆ ಮಾಡಿದ್ದೇವೆ ಎಂದು ತಿಳಿಸಿದರು. 
ಇನ್ನು ಮುಂದೆ ತಾಲೂಕಿನಲ್ಲಿ ಸಾವನ್ನಪ್ಪುತ್ತಿರುವವ ಬಗ್ಗೆ ಮಾಹಿತಿ ಕಲೆ ಹಾಕಲು ಯಾವ ಕ್ರಮ ತೆಗೆದುಕೊಳ್ಳಲಿದ್ದೀರಿ ಎಂದು ಸಂಸದ ಅನಂತ ಕುಮಾರ ಹೆಗಡೆ ಜಿಲ್ಲಾಧಿಕಾರಿಗಳಿಗೆ ಪ್ರಶ್ನಿಸಿದರು
ತಾಲೂಕಿನಲ್ಲಿನ ಎಲ್ಲಾ ಮುಸ್ಲಿಂ ಸಮಾಧಿ(ಖಬರಸ್ಥಾನ)ಯಲ್ಲಿ ದಿನಕ್ಕೆ ಸರದಿಯಂತೆ ಎರಡು ಬೀಟ್ ಪೊಲೀಸರನ್ನು ನೇಮಿಸುತ್ತೇವೆ. ಇನ್ನು ಮುಂದೆ ಯಾವುದೇ ವ್ಯಕ್ತಿ ಸಾವನ್ನಪ್ಪಿದ್ದಲ್ಲಿ ಆರೋಗ್ಯ ಇಲಾಖೆಗೆ ಮಾಹಿತಿ ತಿಳಿಸಿ ಮೃತ ವ್ಯಕ್ತಿಯ ಸ್ಯಾಬ್ ಸಂಗ್ರಹಿಸಿ ಅವರ ವರದಿ ನೆಗೆಟಿವ್ ಬಂದ ಮೇಲೆ ಹೂಳಲು ಸೂಚನೆ ನೀಡಲಿದ್ದೇವೆ ಎಂದು ಜಿಲ್ಲಾಧಿಕಾರಿ ಡಾ. ಹರೀಶ ಕುಮಾರ ಉತ್ತರಿಸಿದರು.
ಭಟ್ಕಳದ ಪಟ್ಟಣ ವ್ಯಾಪ್ತಿಯನ್ನು ಕಂಟೈನಮೇಂಟ್ ಜೋನ್ಆಗಿ ಇನ್ನಷ್ಟು ಪೊಲೀಸ ನಾಕಾ ಬಂದಿ ಹೆಚ್ಚು ಮಾಡುವಂತೆ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸಂಸದರು ಸೂಚಿಸಿದರು.
ಜಿಲ್ಲೆಯ ಉಪ ವಿಭಾಗದಿಂದ ಪೊಲೀಸ ಅಧಿಕಾರಿ, ಸಿಬ್ಬಂದಿಗಳನ್ನು ನೇಮಿಸಿಕೊಳ್ಳಲಿದ್ದೇವೆ.ಶಿರಸಿಯಲ್ಲಿನ ಒಂದು ಕೆ.ಎಸ್.ಆರ್.ಪಿ. ತುಕಡಿಯನ್ನು ಬಳಸಿಕೊಂಡು ಕಂಟೈನಮೆಂಟ್ ವಲಯವನ್ನು ಬಿಗಿಗೊಳಿಸಲಿದ್ದೇವೆ ಎಂದು ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜು ತಿಳಿಸಿದರು. 
ಈ ಸಂಧರ್ಭದಲ್ಲಿ ಸಹಾಯಕ ಆಯುಕ್ತ ಭರತ ಎಸ್., ಜಿಲ್ಲಾ ಆರೋಗ್ಯಾಧಿಕಾರಿ ಡಾ. ಅಶೋಕ ಕುಮಾರ್, ಆರೋಗ್ಯ ಇಲಾಖೆ ನೋಡೆಲ್ ಅಧಿಕಾರಿ ಡಾ. ಶರದ ನಾಯಕ, ತಹಸೀಲ್ದಾರ್ ಎಸ. ರವಿಚಂದ್ರ., ಡಿವೈಎಸ್ಪಿ ಗೌತಮ್ ಕೆ.ಸಿ. ಮುಂತಾದ ಅಧಿಕಾರಿಗಳು ಉಪಸ್ಥಿತರಿದ್ದರು.

About the author

Adyot

Leave a Comment