ಬಿಡುಗಡೆಗೆ ಸಿದ್ಧವಾಯ್ತು ‘ಮಾಲ್ಗುಡಿ ಡೇಸ್’

ಆದ್ಯೋತ್ ಡೆಸ್ಕ್ : ವಿಜಯ ರಾಘವೇಂದ್ರ ನಾಯಕ ನಟನಾಗಿ ಅಭಿನಯಿಸಿರೋ ಮಾಲ್ಗುಡಿ ಡೇಸ್ ಚಿತ್ರದ ಬಿಡುಗಡೆಯ ದಿನಾಂಕ ಅಂತೂ ಅಂತಿಮಗೊಂಡಿದೆ. ತುಂಬಾ ತಿಂಗಳುಗಳಿಂದ ಬಿಡುಗಡೆಗೆ ನಿರೀಕ್ಷಿಸುತ್ತಿದ್ದ ಮಾಲ್ಗುಡಿ ಡೇಸ್ ಚಿತ್ರ ಫೆಬ್ರವರಿ 7 ರಂದು ಬೆಳ್ಳಿ ತೆರೆಗೆ ಅಪ್ಪಳಿಸಲಿದೆ.

ಕಿಶೋರ್ ಮೂಡಬಿದ್ರೆ ನಿರ್ದೇಶಿಸಿರೋ ಚಿತ್ರ ಶಂಕರನಾಗ್ ನಿರ್ದೇಶಿಸಿರೋ ಮಾಲ್ಗುಡಿ ಡೇಸ್ ಗಿಂತ ವಿಭಿನ್ನವಾಗಿರಲಿದ್ದು, ಸದಾ ಹೊಸ ಪ್ರಯೋಗಗಳಿಗೆ ಒಗ್ಗಿಕೊಳ್ಳೋ ವ್ಯಕ್ತಿತ್ವವಿರೋ ವಿಜಯ ರಾಘವೇಂದ್ರ ರ ಸುದೀರ್ಘ ಸಿನಿ ಬದುಕಿನಲ್ಲಿ ಈ ಚಿತ್ರ ಹೊಸ ಮೈಲಿಗಲ್ಲಾಗೋ ಸಾಧ್ಯತೆಯಿದೆ. ಚಿತ್ರದಲ್ಲಿ ವಿಜಯ ರಾಘವೇಂದ್ರ 60 ವರ್ಷ ದಾಟಿದ ವೃದ್ಧನ ಪಾತ್ರ ನಿರ್ವಹಿಸುತ್ತಿದ್ದು, ನಾಯಕಿಯಾಗಿ ಗ್ರಿಷ್ಮಾ ಶ್ರೀಧರ್ ನಟಿಸಿದ್ದಾರೆ.

About the author

Adyot

Leave a Comment