ಆದ್ಯೋತ್ ನ್ಯೂಸ್ ಡೆಸ್ಕ್: ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ನೂತನ ಕೊವಿಡ್ ಪ್ರಯೋಗಾಲಯವನ್ನು ಮಂಗಳವಾರ ಅಧಿಕೃತವಾಗಿ ಪ್ರಾರಂಭಿಸಲಾಯಿತು.
ಹಿರಿಯ ರೋಗಶಾಸ್ತ್ರಜ್ಞ ಡಾ.ಶರತ್ ಈ ಪ್ರಯೋಗಾಲಯದ ಮುಖ್ಯ ಮೇಲ್ವಿಚಾರಕರಾಗಿದ್ದು ಮೊದಲ ದಿನವೇ ಹತ್ತು ವ್ಯಕ್ತಿಗಳ ಗಂಟಲು ದ್ರವ ಮಾದರಿಗಳನ್ನು ಪರೀಕ್ಷಿಸಲಾಗಿದೆ. ಈ ಪ್ರಯೋಗಾಲಯದಿಂದ ಆಯಾ ದಿನವೇ ಕೊವಿಡ್ ಪರೀಕ್ಷಾ ವರದಿ ಲಭ್ಯವಾಗಲಿದೆ. ಇದರಿಂದ ಸಾಕಷ್ಟು ಮುಂಚಿತವಾಗಿ ಚಿಕಿತ್ಸೆ ನೀಡಲು ಅನುಕೂಲವಾಗಲಿದೆ.
ಉತ್ತರಕನ್ನಡ ಜಿಲ್ಲೆಯ ಮುಂಡಗೋಡನಲ್ಲಿರುವ ಟಿಬೆಟಿಯನ್ ಕಾಲೊನಿಯ ವಿವಿಧ ಸ್ಥಳಗಳಲ್ಲಿ ಕಳೆದ 14 ದಿನದಿಂದ ಕ್ವಾರಂಟೈನ್ ನಲ್ಲಿದ್ದ 254 ಜನರನ್ನು ಮಂಗಳವಾರ ಕ್ವಾರಂಟೈನ್ ನಿಂದ ಮುಕ್ತಗೊಳಿಸಲಾಗಿದೆ. ವಿದೇಶಗಳಿಗೆ ಹೋಗಿ ಬಂದವರು ಮತ್ತು ಅವರ ಸಂಪರ್ಕದಲ್ಲಿದ್ದ ಟಿಬೆಟಿಯನ್ ರನ್ನು ಮುಂಜಾಗ್ರತಾ ಕ್ರಮವಾಗಿ ಕ್ವಾರಂಟೈನ್ ಮಾಡಲಾಗಿತ್ತು.
ಇವರಲ್ಲಿ ಯಾರಿಗೂ ಕೊವಿಡ್ ಸೊಂಕಿನ ಲಕ್ಷಣಗಳು ಕಂಡುಬರದ ಕಾರಣ ಹಾಗೂ ಕ್ವಾರಂಟೈನ್ ಅವಧಿ ಮುಗಿದ ಕಾರಣ ಅವರೆಲ್ಲರನ್ನೂ ಮುಕ್ತಗೊಳಿಸಲಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.