ಬೆಂಗಳೂರು : ಮಂಗಳೂರಿನ ಬಜ್ಪೆ ವಿಮಾನ ನಿಲ್ದಾಣದಲ್ಲಿ ಬಾಂಬ್ ಇರಿಸಿದ ವ್ಯಕ್ತಿ ಮಣಿಪಾಲದ ಅದಿತ್ಯ ರಾವ್ ಪೊಲೀಸರಿಗೆ ಶರಣಾಗಿದ್ದಾನೆ.
ಬೆಂಗಳೂರಿನ ಡಿಜಿ ಕಚೇರಿಗೆ ಶರಣಾಗಲು ಬಂದಿದ್ದ ಈತನನ್ನ ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ಮಣಿಪಾಲದ ಮಣ್ಣಪಳ್ಳದ ಆದಿತ್ಯ ರಾವ್ (36) ಬಾಂಬ್ ಇದ್ದ ಬ್ಯಾಗ್ ಅನ್ನು ಬಜ್ಪೆ ವಿಮಾನ ನಿಲ್ದಾಣದಲ್ಲಿ ಇಟ್ಟು ಪರಾರಿಯಾಗಿದ್ದ. ಪೊಲೀಸರ ಕೈಗೆ ಸಿಕ್ಕಿ ಬಿದ್ರೆ ಚಿತ್ರಹಿಂಸೆ ನೀಡ್ತಾರೆ ಅನ್ನೋ ಕಾರಣಕ್ಕೆ ತಪ್ಪೊಪ್ಪಿಕೊಂಡು ಶರಣಾಗಿದ್ದಾನೆ. ತಪ್ಪೊಪ್ಪಿಗೆ ಪತ್ರ ಕೂಡ ಬರೆದು ಕೊಟ್ಟಿದ್ದಾನೆ. ಬಿ.ಇ. ವ್ಯಾಸಂಗ ಮಾಡಿದ ಈತ ಹಿಂದೆ ಕೂಡ ಬೆಂಗಳೂರಿನಲ್ಲಿ ಬಾಂಬ್ ಇಡಲಾಗಿದೆಂದು ಹುಸಿ ಕರೆ ಮಾಡಿ ಪೊಲೀಸ್ ಅತಿಥಿಯಾಗಿದ್ದ.