ಮಂಗಳೂರು : ಮಂಗಳೂರಿನ ವಿಮಾನ ನಿಲ್ದಾಣದಲ್ಲಿ ಪತ್ತೆಯಾಗಿದ್ದ ಸಜೀವ ಬಾಂಬ್ ಇಟ್ಟ ಶಂಕಿತನ ರೇಖಾಚಿತ್ರ ನಿಲ್ದಾಣದ ಬಳಿಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಬೆಳಿಗ್ಗೆ ಶಂಕಿತ ವ್ಯಕ್ತಿಯೋರ್ವ ಮಂಗಳೂರಿನ ವಿಮಾನ ನಿಲ್ದಾಣದ ಬಳಿ ಬಾಂಬ್ ಇದ್ದ ಚೀಲವೊಂದನ್ನ ಇಟ್ಟುಹೋಗಿದ್ದ. ಅನಿರೀಕ್ಷಿತವಾಗಿ ಸಿ.ಐ.ಎಸ್.ಎಫ್ ಸಿಬ್ಬಂದಿ ಇದನ್ನ ನೋಡಿ ಪೊಲೀಸರಿಗೆ ತಿಳಿಸಿದ್ದರಿಂದ ದೊಡ್ಡ ಅನಾಹುತವೊಂದು ತಪ್ಪಿತ್ತು. ಈಗ ಪೊಲೀಸರಿಗೆ ಶಂಕಿತನ ಕುರಿತ ವಿಡಿಯೋ ಸಿಸಿಟಿವಿ ದೃಶ್ಯ ದೊರಕಿದ್ದು ಬಾಂಬ್ ಇಟ್ಟ ವ್ಯಕ್ತಿ ತಲೆ ಬಗ್ಗಿಸಿಕೊಂಡು ಆಟೋವನ್ನ ಹತ್ತಿದ್ದು ಸೆರೆಯಾಗಿದೆ ಎಂದು ಸಿ.ಐ.ಎಸ್.ಎಫ್ ಡಿಐಜಿ ಅನಿಲ್ ಪಾಂಡೆ ಹೇಳಿದ್ದಾರೆ. ಬಾಂಬ್ ನಿಷ್ಕ್ರೀಯ ದಳ ಅಗಮಿಸಿ ಬಾಂಬ್ ನಿಷ್ಕ್ರೀಯಗೊಳಿಸಿದೆ.