ಸಿದ್ದಾಪುರ : ತಾಲೂಕಿನ ಕಡಕೇರಿಯಲ್ಲಿ ನಡೆದ ಮುಕ್ತ ಹಾರ್ಡ್ ಟೆನಿಸ್ ಬಾಲ್ ಕ್ರಿಕೆಟ್ ಟೂರ್ನಿಯಲ್ಲಿ ಎಂ.ಬಿ.ಸಿ.ಸಿ ಬೇಡ್ಕಣಿ ತಂಡ ಪ್ರಥಮ ಸ್ಥಾನವನ್ನ ತನ್ನದಾಗಿಸಿಕೊಂಡಿತು.
ಕಡಕೇರಿ ಮಿತ್ರ ವೃಂದ ನಡೆಸಿದ 2ನೇ ವರ್ಷದ ಯಶಸ್ವೀ ಟೂರ್ನಿ ಇದಾಗಿದ್ದು, 2 ದಿನ ನಡೆದ ಟೂರ್ನಿಯಲ್ಲಿ ಸುಮಾರು 28 ತಂಡಗಳು ಪಾಲ್ಗೊಂಡು ತಮ್ಮ ಆಟವನ್ನ ಪ್ರದರ್ಶಿಸಿದವು. ಪ್ರಥಮ ದಿನ ಉತ್ತಮ ಆಟ ಪ್ರದರ್ಶಿಸಿದ ಎಂ.ಬಿ.ಸಿ.ಸಿ ತಂಡ ಹಾಗೂ 2ನೇ ದಿನ ಉತ್ತಮ ಆಟ ಪ್ರದರ್ಶಿಸಿದ ರಾಯಲ್ ರಾಕರ್ಸ್ ತಂಡಗಳು ಫೈನಲ್ ನಲ್ಲಿ ಪ್ರಶಸ್ತಿಗಾಗಿ ಪೈಪೋಟಿ ನಡೆಸಿದವು. ಉತ್ತಮವಾಗಿ ಟೂರ್ನಿ ಆಯೋಜಿಸಿದ ಕಡಕೇರಿ ಮಿತ್ರ ವೃಂದ ಜನರ ಮನ್ನಣೆಗೆ ಪಾತ್ರವಾಯಿತು.