ಆದ್ಯೋತ್ ಸುದ್ದಿನಿಧಿ:
ಉತ್ತರಕರ್ನಾಟಕದ ಎನ್.ಎಸ್.ಮೂವೀಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಮೀರಾ ಚಿತ್ರಕ್ಕೆ ಅಥಣಿ ಮೂಲದ ಸೈನಾ ದರಿಗೌಡ ಆಯ್ಕೆಯಾಗಿದ್ದಾರೆ.
ಆನ್ ಲೈನ್ ಮೂಲಕ ಅಡೀಶನ್ ಮಾಡಲಾಗಿದ್ದು ಸುಮಾರು 500ಜನರು ಈ ಅಡಿಶನಲ್ ನಲ್ಲಿ ಭಾಗವಹಿಸಿದ್ದರು.
ಚಿತ್ರದ ಮೊದಲಾರ್ಧ ಭಾಗದ ಮೀರಾ ಪಾತ್ರಕ್ಕೆ ಬೆಂಗಳೂರಿನ ಚಿನ್ಮಯಿ ಕುಂಬಾರ್ ಆಯ್ಕೆಯಾಗಿದ್ದಾರೆ.
ಮೂರನೇಕಣ್ಣು ಸಿನಿಮಾದ ಮೂಲಕ ಚಿತ್ರರಂಗದಲ್ಲಿ ಸಂಚಲನ ಮೂಡಿಸಿದ್ದ ನಿರ್ದೇಶಕ ನಜೀರ್ ಕೆ.ಎನ್. ಈಗ ಎರಡನೇ ಸಿನಿಮಾ ಮೀರಾ ಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ..
ಉಳಿದಂತೆ ರಾಧಾಕೃಷ್ಣ ಬಸ್ರೂರ ಸಂಗೀತ ನೀಡುತ್ತಿದ್ದಾರೆ.ಜಿ.ವಿ.ನಾಗರಾಜ ಛಾಯಾಗ್ರಹಣ,ಡಿ.ಜೆ.ಪ್ರಕಾಶ ಸಂಕಲನಕಾರರಾಗಿದ್ದಾರೆ.ಸಾಹಿತ್ಯ ಜಮೀರ್ ಮನಿಯರ್,ಪ್ರಚಾರ ಸಂಪರ್ಕ ಡಾ.ಪ್ರಭು ಗಂಜಿಹಾಳ,ಡಾ.ವಿರೇಶ ಅಂಡಗಿ,ಇರ್ಷಾದ,ಗುರು,ಆನಂದ,ಶಿವಕುಮಾರ್,ಮಂಜುನಾಥ,ಕೊಟ್ರಯ್ಯ,ಶಶಿ,ಯಮನೂರು,ಬಸುದೇವ ಆನಂದಕುಷ್ಟಗಿ ಇನ್ನಿತರರಿದ್ದಾರೆ.
ಸಿನೇಮಾ ನಿರ್ದೇಶನದ ಜೊತೆಗೆ ಕಥೆ,ಚಿತ್ರಕಥೆ,ಸಾಹಿತ್ಯ,ಸಂಭಾಷಣೆಯನ್ನು ನಾಜೀರ್.ಕೆ.ಎನ್.ಮಾಡುತ್ತಿದ್ದಾರೆ.
ಶುಭಾಶಯಗಳು