ಕನ್ನಡಿ ಕಿರುಚಿತ್ರ ಅಮೇರಿಕಾದಲ್ಲೂ ಮಿಂಚಿಂಗ್

ಆದ್ಯೋತ್ ಸುದ್ದಿನಿಧಿ:
ಹುಬ್ಬಳ್ಳಿ ಮಂದಿಯ ಕಿರುಚಿತ್ರ ಕನ್ನಡಿ ಅಮೇರಿಕದಲ್ಲೂ ಮಿಂಚಿಂಗ್
ಕೊರೊನಾ ಬಂದು ಲಾಕ್‌ಡೌನ್ ಆದಾಗ ಮನೆಯಲ್ಲಿದ್ದು ಹೊತ್ತು ಹೋಗುತ್ತಿಲ್ಲ ಎಂದು ಒದ್ದಾಡಿದ ಜನರೂ ಇದ್ದಾರೆ. ಇಂತಹ ಜನರ ನಡುವೆ ಕೆಲವರು ಕ್ರಿಯೇಟಿವಿಟಿಯಾಗಿ ಹೊಸತನ ಮಾಡಿದವರೂ ಸಾಕಷ್ಟು ಜನರಿದ್ದಾರೆ.
ಹೀಗೆ ಹೊಸತನ ಮಾಡಿ ಸುದ್ದಿಯಲ್ಲಿ ಇರುವ ಜನರಲ್ಲಿ ಹುಬ್ಬಳ್ಳಿಯ ಕೆಲವರು ಇದ್ದಾರೆ. ರವಿರತ್ನ ಕ್ರಿಯೇಶನ್‌ದಡಿ ’ಕನ್ನಡಿ’ ಮನವ ಬಲ್ಲವರಾರು ಅಡಿಬರಹದ ಕಿರು ಚಿತ್ರ ಹೊರತಂದಿದ್ದಾರೆ.
ಈ ಕಿರುಚಿತ್ರ ಹಲವರ ಮನ ಮುಟ್ಟುವಲ್ಲಿ ಯಶಸ್ವಿಯಾಗಿದೆ.
ಕರ್ನಾಟಕದಲ್ಲಿ ಸಾಕಷ್ಟು ಸುದ್ದಿ ಮಾಡಿದ್ದ ಈ ಚಿತ್ರವನ್ನು
ಅಮೇರಿಕದ ಫಿಲುಮ್ ಎಂಬ ಯಾಪ್ ಅಲ್ಲಿನ ಜನತೆಗೆ ತೋರಿಸಲು ಮುಂದಾಗಿದೆ.

ಈ ಕಿರು ಚಿತ್ರದ ಇನ್ನೊಂದು ವಿಶೇಷ ಎಂದರೆ ಕಿರು ಚಿತ್ರಕ್ಕೂ ಪ್ರೊಮೊಶನ್ ಮಾಡಿದ್ದು. ಕಿರು ಚಿತ್ರಕ್ಕೆ ಇದುವರೆಗೆ
ಯಾರೂ ಮಾಡಿಲ್ಲ. ಇದು ತಂಡದ ಹೆಗ್ಗಳಿಕೆ. ಇದಕ್ಕೆ ಚಿತ್ರರಂಗದ ಖ್ಯಾತ ನಿರ್ದೇಶಕರು,ಕಲಾವಿದರು ಚಿತ್ರದ ಕುರಿತು ಮಾತನಾಡಿದ್ದನ್ನು ಎರಡು ವಿಡಿಯೋ ಮೂಲಕ ಸಾಮಾಜಿಕ ಜಾಲ ತಾಣದಲ್ಲಿ ಸದ್ದು ಮಾಡಿದೆ.
ಇದರಲ್ಲಿ ನಿರ್ದೇಶಕರಾದ ಪೃಥ್ವಿರಾಜ್ ಕುಲಕರ್ಣಿ, ಅರವಿಂದ ಮುಳಗುಂದ,ಕೆ.ಎನ್. ನಜೀರ, ಉಮೇಶ ಪುರಾಣಿಕ, ಕಲಾವಿದರಾದ ಸಿದ್ಧರಾಜ ಕಲ್ಯಾಣಕರ, ಗಣೇಶ ಕೇಸರಕರ, ಬಸವರಾಜ ಕಟ್ಟಿ, ಪ್ರತೀಕ ಕುರಹಟ್ಟಿ, ರಾಜು ಗಡ್ಡಿ ಹಾಗೂ ನಟಿಯರಾದ ಶ್ವೇತಾ ಧಾರವಾಡ,ದೀಪಾ ಜಗದೀಶ, ಸುನಂದಾ, ಆಶಿಕಾ ಬಳ್ಳಾರಿ ಅವರು ಬೈಟ್ ನೀಡಿದ್ದು ಎಲ್ಲರ ಮನ ಸೆಳೆದಿದೆ.
ಎಲ್‌ಐಸಿ ನಿವೃತ್ತ ಅಧಿಕಾರಿ,ಕಲಾವಿದ ರವೀಂದ್ರ ಪಂತ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುವ ಮೂಲಕ ಇದರ ನಿರ್ಮಾಣ ಮಾಡಿದ್ದಾರೆ. ಡಾ. ವೀರೇಶ ಹಂಡಿಗಿ ಬರೆದ ಕತೆ,ಚಿತ್ರಕತೆಗೆ ರವೀಂದ್ರ ರಾಮದುರ್ಗಕರ ಪಾತ್ರ ಮಾಡುವ ಮೂಲಕ ಆಕ್ಷನ್ ಕಟ್ ಹೇಳಿದ್ದಾರೆ. ಹಲವು ಕಿರು ಚಿತ್ರ ಹಾಗೂ ಸಿನಿಮಾಗಳಿಗೆ ಕೆಲಸ ಮಾಡಿದ ಕೃಷ್ಣ ಪಂತ ಅವರ ಕ್ಯಾಮರಾ ಕೈಚಳಕ ಮೆಚ್ಚುವಂತಹದ್ದು.
ಇತರ ಪಾತ್ರಗಳಲ್ಲಿ ರ್ಯಾಂಪ್‌ವಾಕ್‌ನಲ್ಲಿ ಗಮನ ಸೆಳೆದ ನವತಾರೆ ಪ್ರಶಸ್ತಿ ಪಡೆದ ಪ್ರಿಯಾಂಕಾ ನವಲೂರ , ರಾಘವೇಂದ್ರ ಪಂತ, ಪ್ರಕಾಶ ಜೋಶಿ,ರಶ್ಮಿ ಜೋಶಿ ಇತರರು ಮಿಂಚಿದ್ದಾರೆ. ಕಲೆ ಮತ್ತು ಪ್ರಚಾರದ ಹೋಣೆಯನ್ನು ಡಾ.ಪ್ರಭು ಗಂಜಿಹಾಳ ಹೊತ್ತಿದ್ದಾರೆ.

ಕತೆ ಸಾರಾಂಶ :
ಒಬ್ಬ ಅಧಿಕಾರಿ ಜನರ ಜತೆ ಬೆರೆಯದೇ ಸಹಾಯ ಸಹಕಾರ ನೀಡದೆ ಇರುವ ವ್ಯಕ್ತಿ ನಿವೃತ್ತಿ ನಂತರ ಅವನ ಪತ್ನಿ ತೀರಿಕೊಂಡಿರುತ್ತಾಳೆ. ಮಗ,ಮಗಳು ವಿದೇಶದಲ್ಲಿರುತ್ತಾರೆ. ಇವನದು ಒಬ್ಬಂಟಿ ಬದುಕು. ಲಾಕ್‌ಡೌನ್‌ದಲ್ಲಿ ಒಬ್ಬರಿಗೊಬ್ಬರು ಭೇಟಿ ಯಾಗದ ಸ್ಥಿತಿ. ಇದ್ದ ಒಬ್ಬ ಗೆಳೆಯ ಸಹ ಮನೆಗೆ ಬರುತ್ತಿಲ್ಲ. ಮಗ ತನ್ನ ಕೆಲಸದ ಒತ್ತಡದಲ್ಲಿದ್ದು ದೇಶಕ್ಕೆ ಮರಳಲಾಗದ ಸ್ಥಿತಿ. ಮಗಳೊಂದಿಗೆ ಮಾತನಾಡಿ ತನ್ನ ಒಂಟಿತನ ತೋಡಿಕೊಂಡಾಗ ಮಗಳು ಹೇಳುವ ಮಾತಿಗೆ ತಂದೆ ಕಣ್ಣಿರು ಹಾಕಿ ತನ್ನ ಗತಕಾಲದ ದಿನಗಳನ್ನು ನೆನಪಿಸಿಕೊಳ್ಳುತ್ತಾನೆ.
ಕೊನೆಗೆ ಟ್ರೆಜರಿ ಬಳಿ ಹೋಗಿ ನಿಲ್ಲುತ್ತಾನೆ ಅವನ ಕಣ್ನಮುಂದೆ ಹಣ,ಬಂಗಾರ ಇದೆ. ಆದರೆ ಜನರೇ ಇಲ್ಲ ಎಂಬ ಸಂದೇಶದೊಂದಿಗೆ ಚಿತ್ರ ಮುಗಿಯುತ್ತದೆ.

ಉತ್ತಮ ಕತೆ ಹಾಗೂ ಎಲ್ಲ ಕಲಾವಿದರು ಉತ್ತಮ ಅಭಿನಯ ನೀಡಿದ್ದಾರೆ. ಒಂದು ಸಿನಿಮಾಕ್ಕೆ ಏನು ಬೇಕು ಎಲ್ಲವೂ ಇಲ್ಲಿರುವುದರಿಂದ ಬೆಳ್ಳಿ ತೆರೆಗೆ ತರುವ ಪ್ರಯತ್ನ ಮಾಡಬೇಕಿತ್ತು. ತಂಡದಿಂದ ಸಿನಿಮಾಗಳು ಹೊರಬರಲಿ.
ಶಂಕರ ಸುಗತೆ,ಅಧ್ಯಕ್ಷರು ಉಕ ಚಲನಚಿತ್ರ ವಾಣಿಜ್ಯ ಮಂಡಳಿ

About the author

Adyot

2 Comments

  • ಈ ಚಿತ್ರ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ನಾನು ಈ ಕಿರುಚಿತ್ರ ಚಿತ್ರ ಬಿಡುಗಡೆ ಮಾಡಿದ ಸಂದರ್ಭದಲ್ಲಿ. ಚಿತ್ರ ವೀಕ್ಷಿಸಿದಾಗ ಗೊತ್ತಾಯಿತು ಇವರೆಲ್ಲರೂ ಹೊಸಬರೆ ಆದರೂ ಉತ್ತಮ ಕಥಾ ವಸ್ತುವನ್ನಿಟ್ಟುಕೊಂಡು ಮಾಡಿದ ಪ್ರಥಮ ಪ್ರಯತ್ನ ಯಶಸ್ವಿಯಾಗಿದೆ.
    ಶಂಕರ ಸುಗತೆ. ಅಧ್ಯಕ್ಷರು, ಉತ್ತರ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ. ಹುಬ್ಬಳ್ಳಿ ಧಾರವಾಡ.

Leave a Comment