ಶಾಸಕಿ ರೂಪಾಲಿ ನಾಯ್ಕರಿಂದ ವಿವಿಧ ಕಾಮಗಾರಿಗಳ ಉದ್ಘಾಟನೆ

ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡ ಜಿಲ್ಲೆಯ ಜಿಲ್ಲಾಕೇಂದ್ರವಾದ ಕಾರವಾರದಲ್ಲಿ ಬುಧವಾರ ಶಾಸಕಿ ರೂಪಾಲಿ ನಾಯ್ಕ ವಿವಿಧ ಕಾಮಗಾರಿಗಳ ಭೂಮಿ ಪೂಜೆ ಹಾಗೂ ಉದ್ಘಾಟನೆ ನೆರವೇರಿಸಿದರು.
ಕಾರವಾರ ನಗರ ಸಭೆಯ ಹಳೆಕಚೇರಿಯ ಹಿಂಬಾಗದಲ್ಲಿ ವಾಣಿಜ್ಯ ಮಳಿಗೆ ನಿರ್ಮಣ ಕಾಮಗಾರಿ,ಈಜುಕೊಳದ ಹಿಂಭಾಗದ ಹೂ ಹಣ್ಣು ಮಾರುಕಟ್ಟೆ ನಿರ್ಮಾಣ, ನಗರಸಭೆ ಕಚೇರಿ ಆವರಣದಲ್ಲಿ ಹೈಟೆಕ್ ಶೌಚಾಲಯ ನಿರ್ಮಾಣದ ಭೂಮಿ ಪೂಜೆ ನೆರವೇರಿಸಿದರು.

ಬಸ್ ನಿಲ್ದಾಣದ ಎದುರಿನ ಉದ್ಯಾನದಲ್ಲಿ ಓಪನ್ ಜಿಮ್ ಹಾಗೂ ಗಾಂಧಿ ನಗರದಲ್ಲಿ ನಿರ್ಮಾಣ ಮಾಡಿದ ಸಮುದಾಯ ಭವನದ ಉದ್ಘಾಟನೆಯನ್ನು ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ರೂಪಾಲಿ ನಾಯ್ಕ,ಅಭಿವೃದ್ಧಿ ಕೆಲಸವನ್ನು ಶಾಸಕರೇ ಮಾಡಬೇಕು ಎಂದೇನಿಲ್ಲ ಅಧಿಕಾರಿಗಳು,ಸಾರ್ವಜನಿಕರು ಕೈಜೋಡಿಸಿದರೆ ಒಟ್ಟಾರೆ ಅಭಿವೃದ್ಧಿ ಸಾಧ್ಯವಾಗುತ್ತದೆ.ಕನಸು ಕಾಣುವುದು ಸುಲಭ ಅದನ್ನು ಈಡೇರಿಸುವುದಕ್ಕೆ ಎಲ್ಲರೂ ಶ್ರಮಿಸಬೇಕು. ಉದ್ಯಾನಗಳಲ್ಲಿ ಅಳವಡಿಸಲಾದ ಜಿಮ್ ಪರಿಕರಗಳನ್ನು ನಗರ ನಿವಾಸಿಗಳು ಸದುಪಯೋಗ ಪಡಿಸಿಕೊಳ್ಳಬೇಕು. ಉದ್ಯಾನಗಳನ್ನು ಮನೆಯಂತೆ ಅಂದವಾಗಿಟ್ಟುಕೊಳ್ಳಲು ಸ್ಥಳೀಯರೂ ಮುಂದಾಗಬೇಕು ಎಂದು ಹೇಳಿದರು. .

ನಗರಸಭೆ ಹಳೇ ಕಚೇರಿ ಹಿಂಭಾಗ ಅಂದಾಜು ₹39 ಲಕ್ಷ ಮೊತ್ತದಲ್ಲಿ ವಾಣಿಜ್ಯ ಮಳಿಗೆ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಲಾಗಿದೆ. ಇದರಿಂದ ನಗರಸಭೆಗೆ ಆದಾಯ ಹೆಚ್ಚಾಗಲಿದೆ ಹಾಗೂ ಹೂ, ಹಣ್ಣು ಮಾರುಕಟ್ಟೆ ನಿರ್ಮಾಣದಿಂದ ಒಂದೇ ಸ್ಥಳದಲ್ಲಿ ಅವುಗಳ ಖರೀದಿ ಸಾಧ್ಯವಾಗುತ್ತದೆ ಎಂದು ಹೇಳಿದ ಅವರು ಉದ್ಯಾನದಲ್ಲಿ ಜಿಮ್‌ ಪರಿಕರ ಅಳವಡಿಸಿರುವುದರಿಂದ ಆರೋಗ್ಯ ವೃದ್ಧಿ ಸಾಧ್ಯವಾಗುತ್ತದೆ. ಬೆಳಿಗ್ಗೆ ಹಾಗೂ ಸಂಜೆ ವಾಯುವಿಹಾರಕ್ಕೆ ಬರುವವರು ಇದರ ಸದುಪಯೋಗ ಪಡೆದುಕೊಂಡು ಸದೃಢ ಆರೋಗ್ಯ ಪಡೆಯಬಹುದು ಎಂದರು.
ನಗರಸಭೆ ಸದಸ್ಯರು,ಅಸಿಸ್ಟೆಂಟ್ ಕಮಿಷನರ್
ಪ್ರಿಯಾಂಗ ಎಂ.ಮುಂತಾದವರು ಉಪಸ್ಥಿತರಿದ್ದರು.

About the author

Adyot

1 Comment

Leave a Comment