ಆದ್ಯೋತ್ ಸುದ್ದಿನಿಧಿ:
ಡಿ.10ರಂದು ನಡೆಯಲಿರುವ ವಿಧಾನಪರಿಷತ್ ಚುನಾವಣೆಗೆ ನಾಮಪತ್ರ ಸಲ್ಲಿಸಲು ಮಂಗಳವಾರ ಕೊನೆಯ ದಿನವಾಗಿದ್ದು
ಉತ್ತರಕನ್ನಡ ಕ್ಷೇತ್ರಕ್ಕೆ ಒಟ್ಟೂ ಆರು ನಾಮಪತ್ರಗಳಯ ಸಲ್ಲಿಕೆಯಾಗಿವೆ.
ಪ್ರಮುಖ ಎದುರಾಳಿಗಳಾದ ಕಾಂಗ್ರೆಸ್ ನ ಭೀಮಣ್ಣ ನಾಯ್ಕ ಹಾಗೂ ಬಿಜೆಪಿಯ ಗಣಪತಿ ಉಳ್ವೇಕರ್ ಇಂದು ನಾಮಪತ್ರ ಸಲ್ಲಿಸಿದ್ದಾರೆ.
ಅಂಗಾರಕ ಸಂಕಷ್ಟಿಯೂ ಇದ್ದ ಕಾರಣ ಸ್ಪರ್ದಾಳುಗಳೆಲ್ಲ ಇಂದೇ ನಾಮಪತ್ರ ಸಲ್ಲಿಸಿದರು.
ಭೀಮಣ್ಣ ನಾಯ್ಕ ನಾಮಪತ್ರ ಸಲ್ಲಿಸುವಾಗ ಮಾಜಿ ಸಚೀವ ಆರ್.ವಿ.ದೇಶಪಾಂಡೆ,ವಿಧಾನಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ,ಹಾಲಿ ವಿಧಾನಪರಿಷತ್ ಸದಸ್ಯ ಎಸ್.ವಿ.ಘೋಟ್ನೇಕರ್,ನಿವೇದಿತಾ ಆಳ್ವ,ಸುಷ್ಮಾ ರಾಜಗೋಪಾಲ ರೆಡ್ಡಿ,ಪ್ರಶಾಂತ ದೇಶಪಾಂಡೆ,ಮಂಕಾಳು ವೈದ್ಯ,ಸತೀಶ ಸೈಲ್ ಸೇರಿದಂತೆ ಕಾಂಗ್ರೆಸ್ ನ ಹಲವು ಪ್ರಮುಖರು ಉಪಸ್ಥಿತರಿದ್ದರು.