ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡ ಜಿಲ್ಲೆಯ ಶಿರಸಿಯಲ್ಲಿ ಕೇಂದ್ರಸರಕಾರ ತೈಲಬೆಲೆ ಏರಿಸಿರುವುದನ್ನು ಖಂಡಿಸಿ ಜಿಲ್ಲಾ ಕಾಂಗ್ರೆಸ್ ಜನಜಾಗೃತಿ ಸೈಕಲ್ ಜಾಥಾವನ್ನು ಆಯೋಜಿಸಿತ್ತು.
ಶ್ರೀಮಾರಿಕಾಂಬೆಯ ದರ್ಶನ ಪಡೆದು ಸೈಕಲ್ ತುಳಿಯುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಮಾತನಾಡಿ,ಕೇಂದ್ರ ಮತ್ತು ರಾಜ್ಯಸರಕಾರಗಳು ಇಂಧನ ಬೆಲೆ ಏರಿಸಿರುವ ಪರಿಣಾಮ ಅಗತ್ಯವಸ್ತುಗಳ ಬೆಲೆ ಏರುತ್ತಿದೆ ಇದರಿಂದ ಜನಸಾಮಾನ್ಯರ ಜೀವನನಿರ್ವಹಣೆ ಸಂಕಷ್ಟಕ್ಕೆ ಸಿಲುಕಿದೆ.ನಮ್ಮ ಸರಕಾರ ಇದ್ದಾಗ ಅಗತ್ಯಕ್ಕೆ ತಕ್ಕಂತೆ ಅಲ್ಪ ಬೆಲೆ ಏರಿಸಿದಾಗ ಹೋರಾಟ ಮಾಡಿದ ಸಂಸದ ಅನಂತಕುಮಾರ ಹೆಗಡೆ,ಶೋಭಕ್ಕ,ಯಡೊಯೂರಪ್ಪ ಈಗ ಏನು ಮಾಡುತ್ತಿದ್ದಾರೆ ಎಂದು ಹೇಳಿದರು.
ಕಳೆದ ತಿಂಗಳು ಐದು ದಿನಗಳ ಕಾಲ ಐದುಸಾವಿರ ಕಡೆಗೆ ಬೆಲೆ ಏರಿಕೆ ವಿರುದ್ದ ಹೋರಾಟ ಮಾಡಿದ್ದೇವೆ.ಉ.ಕ.ಜಿಲ್ಲೆ ಸ್ವಾತಂತ್ರ್ಯ ಹೋರಾಟದಲ್ಲಿ ಬ್ರಿಟೀಷ್ ವಿರುದ್ದ ಹೋರಾಡಿದಂತಹ ಜಿಲ್ಲೆ
ನಾನು ಬೆಂಗಳೂರಿನಲ್ಲಿ ಈ ಹೋರಾಟಕ್ಕೆ ಚಾಲನೆ ನೀಡಬಹುದಿತ್ತುಆದರೆ ಮಾರಿಕಾಂಬೆಯ ದರ್ಶನ ಪಡೆದು ಹೋರಾಟವನ್ನು ಪ್ರಾರಂಭಿಸಬೇಕು ಬ್ರಿಟಿಷ್ ರನ್ನು ತೊಲಗಿಸಿದಂತೆ ಜನವಿರೋಧಿ ಬಿಜೆಪಿಯನ್ನು ತೊಲಗಿಸಲು ಐತಿಹಾಸಿಕ ಜಿಲ್ಲೆಯಾದ ಉ.ಕ.ಜಿಲ್ಲೆಯೇ ಸೂಕ್ತ ಎಂದು ಇಲ್ಲಿಂದಲೇ ಹೋರಾಟ ಪ್ರಾರಂಭ ಮಾಡಿದ್ದೇನೆ ಎಂದು ಹೇಳಿದರು.
ನಮ್ಮ ಹೋರಾಟವನ್ನು ತಡೆಯಲು ಸರಕಾರ ಪ್ರಯತ್ನಿಸಿದೆ ಉಪವಿಭಾಗಾಧಿಕಾರಿ ನಮ್ಮೊಡನೆ ಪ್ರೊಟೋಕಾಲ್ ಉಲ್ಲಂಘನೆಯಾಗುತ್ತಿದೆ ಎಂದು ಹೇಳಿದರು.ಜನರ ಧ್ವನಿಯಾಗಿ ನಾವು ಬಂದಿದ್ದೇವೆ ಬಂಧನ ಮಾಡುವುದಿದ್ದರೆ ನನ್ನನ್ನು,ದೇಶಪಾಂಡೆಯವರನ್ನು,ಹರಿಪ್ರಸಾದರನ್ನು ಮಾಡು
ಕಾರ್ಯಕರ್ತರನ್ನಲ್ಲ ಜೈಲು-ಬೆಲ್ ಗೆ ನಾವು ಹೆದರುವುದಿಲ್ಲ ಎಂದು ಹೇಳಿದರು
ಮುಂಬರುವ ಜಿಪಂ,ತಾಪಂ ಚುನಾವಣೆಗೆ ಟಿಕೆಟ್ ಬಯಸುವವರು ಜನರ ಕಷ್ಟಕ್ಕೆ ಸ್ಪಂದಿಸುವವರಾಗಬೇಕು ಕೊವಿಡ್ ಸಂದರ್ಭದಲ್ಲಿ ಪಕ್ಷದ ನಿರ್ದೇಶನದಂತೆ ಮನೆಮನೆಗೆ ತೆರಳಿ ಜನರ ನೋವಿಗೆ ಸ್ಪಂದಿಸಿದವರನ್ನು ಪರಿಗಣಿಸಲಾಗುವುದು ನನ್ನ ಹಿಂದೆ- ಮುಂದೆ ಸುಳಿದಾಡುತ್ತಿದ್ದರೆ ಟಿಕೆಟ್ ದೊರೆಯುವುದಿಲ್ಲ ಎಂದು ಎಚ್ಚರಿಸಿದರು.
ಆರ್.ವಿ. ದೇಶಪಾಂಡೆ ರವರು ಮಾತನಾಡಿ,
ಬೆಲೆ ಏರಿಕೆಯಿಂದ ಜನಸಾಮಾನ್ಯರು ತತ್ತರಿಸಿ ಹೋಗಿದ್ದಾರೆ.
ನನ್ನ ರಾಜಕೀಯ ಜೀವನದಲ್ಲಿ ಇಷ್ಟು ಭ್ರಷ್ಟ ಸರ್ಕಾರ ನೋಡಿರಲಿಲ್ಲ. ಬೆಲೆ ಏರಿಕೆಯಿಂದ ಸೈಕಲ್ ಸಾಮಾನ್ಯ ಜನರ ವಾಹನವಾಗಿದೆ. ಕೆಪಿಸಿಸಿ ಅಧ್ಯಕ್ಷರು ಇಡೀ ರಾಜ್ಯದ ಜನರ ಸಮಸ್ಯೆ ಆಲಿಸಲು ರಾಜ್ಯ ಸುತ್ತುತ್ತಿದ್ದಾರೆ. ಯುವಜನತೆ ಯೋಚಿಸಿ ತೀರ್ಮಾನಿಸಬೇಕು ಎಂದು ಹೇಳಿದರು.
ಮಾರಿಕಾಂಬಾ ದೇವಸ್ಥಾನದಿಂದ ಹೊರಟ ಜಾಥಾ ಹುಬ್ಬಳ್ಳಿ ರಸ್ತೆ, ಶಿವಾಜಿಚೌಕ, ಸಿಪಿ ಬಝಾರ ಮೂಲಕ ಟಿ.ಎಸ್.ಎಸ್ ಕಲ್ಯಾಣ ಮಂಟಪ ಪ್ರವೇಶಿಸಿತು. ಜಾಥಾದುದಕ್ಕೂ ಕಾಂಗ್ರೆಸ್ ಕಾರ್ಯಕರ್ತರು ಡಿಕೆಶಿಗೆ ಜಯವಾಗಲಿ, ಕಾಂಗ್ರೆಸ್ ಗೆ ಜಯವಾಗಲಿ ಎಂದು ಜಯಘೋಷ ಮೊಳಗಿಸಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ನಾಯ್ಕ, ಮಾಜಿ ಸಚಿವ ಆರ್.ವಿ.ದೇಶಪಾಂಡೆ, ರಾಜ್ಯಸಭಾ ಸದಸ್ಯ ಬಿ.ಕೆ.ಹರಿಪ್ರಸಾದ, ಮಾಜಿ ಶಾಸಕರಾದ ಮಂಕಾಳು ವೈದ್ಯ, ಶಾರದಾ ಶೆಟ್ಟಿ, ಸತೀಶ ಸೈಲ್, ಹಿಂದುಳಿದ ವರ್ಗಗಳ ವಿಭಾಗದ ಜಿಲ್ಲಾಧ್ಯಕ್ಷ ನಾಗರಾಜ ನಾರ್ವೇಕರ್, ಪರಿಶಿಷ್ಟ ಜಾತಿ ವಿಭಾಗದ ಜಿಲ್ಲಾಧ್ಯಕ್ಷ ಬಸವರಾಜ ದೊಡ್ಮನಿ, ಕೆಪಿಸಿಸಿ ಉಸ್ತುವಾರಿ ಸುಷ್ಮಾ ರಾಜಗೋಪಾಲರೆಡ್ಡಿ, ನಿವೇದಿತ ಆಳ್ವಾ, ಕೆಪಿಸಿಸಿ ಜನರಲ್ ಸಕ್ರೇಟರಿ ಜಿ.ಕೆ ಭಾವಾ ಉಪಸ್ಥಿತರಿದ್ದರು.