ಸಿದ್ದಾಪುರ ಲಯನ್ಸ್ ಪದಾಧಿಕಾರಿಗಳ ಪ್ರಮಾಣವಚನ ಸ್ವೀಕಾರ

ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ ಲಯನ್ಸ್ ಕ್ಲಬ್ ನ
2021-22ನೇ ಸಾಲಿನ ನೂತನ ಪದಾಧಿಕಾರಿಗಳಿಗೆ ಪ್ರಮಾಣ ವಚನ ಹಾಗೂ ಮಹಿಳಾ ಸಬಲೀಕರಣಕ್ಕಾಗಿ ಒಂದು ಪ್ರಯತ್ನ ಯೋಜನೆಯಡಿ ಹೊಲಿಗೆ ತರಬೇತಿ ಹಾಗೂ ಹೊಲಿಗೆ ಯಂತ್ರಗಳ ಉದ್ಘಾಟನಾ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿದ ಲಯನ್ಸ ಜಿಲ್ಲಾ ಗವರ್ನರ್ ಡಾ| ಗಿರೀಶ ಕುಚನಾಡ ಮಾತನಾಡಿ,ಇಲ್ಲಿನ ಲಯನ್ಸ ಕ್ಲಬ್ ಮೊದಲಿನಿಂದಲೂ ಸಮಾಜಕ್ಕೆ ಉಪಯುಕ್ತವಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಅತ್ಯುತ್ತಮ ಸೇವೆ ನೀಡುತ್ತ ಬಂದಿದೆ. ಕಳೆದ ಮತ್ತು ಈ ವರ್ಷದ ಕೊವಿಡ್ ಸಂದರ್ಭದಲ್ಲಿ ಇಲ್ಲಿನ ಕ್ಲಬ್ ನೀಡಿದ ಸೇವೆ ಶಾಘ್ಲನೀಯ ಈ ಕ್ಲಬ್ ಪದಾಧಿಕಾರಿಗಳು, ಸದಸ್ಯರು ತಮ್ಮ ಜವಾಬ್ದಾರಿ ಅರಿತು ಸೇವಾ ಕಾರ್ಯದಲ್ಲಿ ತೊಡಗಿಕೊಂಡಿರುವದು ಅವರು ಕೈಗೊಂಡ ಕಾರ್ಯಕ್ರಮಗಳ ಮೂಲಕ ಮನದಟ್ಟಾಗುತ್ತದೆ. ಮುಂದೆಯೂ ಸಮಾಜಕ್ಕೆ ಅಗತ್ಯವಾದ ಇನ್ನೂ ಹೆಚ್ಚಿನ ಕಾರ್ಯಕ್ರಮ ಅನುಷ್ಠಾನಗೊಳಿಸುವ ಎಲ್ಲ ನಂಬಿಕೆ ಇದೆ ಎಂದರು.

btr

ಮುಖ್ಯ ಅತಿಥಿ ಮಾಜಿ ಜಿಲ್ಲಾ ಗವರ್ನರ್ ಡಾ|ರವಿ ಹೆಗಡೆ ಹೂವಿನಮನೆ ಮಾತನಾಡಿ, ನಾವು ಮಾಡುವ ಕಾರ್ಯ ಯಾರಿಗೆ ತಲುಪಬೇಕೋ ಅವರಿಗೆ ತಲುಪಿದರೆ ಸಾರ್ಥಕತೆ ಇದೆ. ಲಯನ್ಸ ಕ್ಲಬ್ ಕೊವಿಡ್ ಸಂದರ್ಭದಲ್ಲಿ ಯಾವ ಸಂಸ್ಥೆಯೂ ಮಾಡದ ಜನಪರ ಕಾರ್ಯಕ್ರಮಗಳನ್ನು ನಡೆಸಿದೆ. ಗ್ರಾಮೀಣ ಭಾಗದ ಇಲ್ಲಿನ ಕ್ಲಬ್ ದಕ್ಷಿಣ ಭಾರತದಲ್ಲೇ ಅಂಧರ ಶಾಲೆ ನಡೆಸುತ್ತಿರುವ ಏಕೈಕ ಕ್ಲಬ್. ಹಲವು ರೀತಿಯ ಸೇವಾ ಕಾರ್ಯಗಳ ಮೂಲಕ ಅಂತಾರಾಷ್ಟ್ರೀಯ ಮೆಚ್ಚುಗೆ ಪಡೆದಿದೆ ಎಂದರು.
ಇನ್ನೊರ್ವ ಮುಖ್ಯ ಅತಿಥಿ ಮಂಗಲಾ ಕುಚನಾಡ ಮಾತನಾಡಿದರು. ಸ್ಥಳೀಯ ಲಯನ್ಸ ಕ್ಲಬ್ ಅಧ್ಯಕ್ಷೆ ಶ್ಯಾಮಲಾ ರವಿ ಹೆಗಡೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಾರ್ಯದರ್ಶಿ ರಾಘವೇಂದ್ರ ಭಟ್ಟ, ಖಜಾಂಚಿ ಪ್ರಶಾಂತ ಶೇಟ್, ನಿಕಟಪೂರ್ವ ಅಧ್ಯಕ್ಷ ಸಿ.ಎಸ್.ಗೌಡರ್ ವೇದಿಕೆಯಲ್ಲಿದ್ದರು.
ಸಿ.ಎಸ್.ಗೌಡರ್ ಸ್ವಾಗತಿಸಿದರು. ಶ್ರೀರಕ್ಷಾ ಹೆಗಡೆ ಸ್ವಾಗತಗೀತೆ ಹಾಡಿದರು. ರಾಘವೇಂದ್ರ ಭಟ್ಟ ವಂದಿಸಿದರು.ಜಿ.ಜಿ.ಹೆಗಡೆ ಬಾಳಗೋಡ ನಿರೂಪಿಸಿದರು.

About the author

Adyot

Leave a Comment